ಬೆಂಗಳೂರು:ಇಂದಿರಾನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿದ್ದು, ನಾಯಿಯನ್ನು ಕೊಂದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಜಕ್ಕೂರು ನಿವಾಸಿ, ಖಾಸಗಿ ಕಂಪನಿ ಕ್ಯಾಬ್​ ಚಾಲಕ ಅಮುಲ್​ ರಾಜ್​ ಬಂಧಿತ. ಜುಲೈ 5ರ ಸಂಜೆ 6 ಗಂಟೆ ಸುಮಾರಿನಲ್ಲಿ ಇಂದಿರಾನಗರ 2ನೇ ಹಂತದಲ್ಲಿ ಕೆ.ಜಿ.ರಸ್ತೆಯ “ಬ್ರೋನಿ’ ಹೆಸರಿನ ಬೀದಿನಾಯಿ ಮೇಲೆ ಅಮುಲ್​ ರಾಜ್​ ಕಾರು ಹರಿಸಿದ್ದ. ಗಂಭೀರ ಗಾಯಗೊಂಡಿದ್ದ ಬ್ರೋನಿ ಸ್ಥಳದಲ್ಲೇ ಮೃತಪಟ್ಟಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಇಂದಿರಾನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದ, ಸ್ಥಳೀಯ ನಿವಾಸಿ ಸ್ನೇಹ ನಂದಿಹಾಳ್, ನಾವು ಬೀದಿನಾಯಿಗೆ ಬ್ರೋನಿ ಎಂಬ ಹೆಸರಿಟ್ಟು ಸಾಕಿದ್ದೆವು. ಈ ಬ್ರೋನಿ ಮೇಲೆ KA 01, MS​ 8525 ನಂಬರಿನ ಕಾರನ್ನು ಚಾಲಕ ಉದ್ದೇಶ ಪೂರ್ವಕವಾಗಿಯೇ ಹತ್ತಿಸಿ ನಮ್ಮ ಬ್ರೋನಿಯನ್ನು ಕೊಂದಿದ್ದಾನೆ ಎಂದು ಆರೋಪಿಸಿ ಸಿಸಿಟಿವಿ ದೃಶ್ಯಾವಳಿ ಸಹಿತ ಜು.6ರಂದು ದೂರು ನೀಡಿದ್ದರು.
ಶ್ವಾನ ಲಾರಾ ಸಾವು ಸಾಕಷ್ಟು ಸುದ್ದಿಯಾಗಿತ್ತು. ಕಳೆದ ಜನವರಿ 26ರಂದು ಜಯನಗರ 1ನೇ ಬ್ಲಾಕ್​ನಲ್ಲಿ ರಸ್ತೆಬದಿ ಮಲಗಿದ್ದ ಬೀದಿನಾಯಿ ಮೇಲೆ ಆದಿಕೇಶವನಾಯ್ಡು ಎಂಬಾತ ಐಷಾರಾಮಿ ಆಡಿ ಕಾರನ್ನು ಹತ್ತಿಸಿಕೊಂಡು ಹೋಗಿ ಶ್ರೀಮಂತಿಕೆಯ ದರ್ಪ ಮೆರೆದಿದ್ದ. ಈ ಪ್ರಕರಣವೂ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಇದೀಗ ಈ ಘಟನೆಗಳು ಮಾಸುವ ಮುನ್ನವೇ ಇಂದಿರಾನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿ ಕೊಂದಿರುವ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕ ವಯಲದಲ್ಲೂ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಗಳ ಮೇಲೆ ಕ್ರೌರ್ಯ ಸಲ್ಲ ಎಂಬ ಕೂಗು ದಟ್ಟವಾಗಿ ಕೇಳಿಬರುತ್ತಲೇ ಇದೆ.
ಸ್ನೇಹಾ ದೂರು ಕೊಟ್ಟ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಅಮೃತ್​ ರಾಜ್​ನನ್ನು ಬಂಧಿಸಿದ್ದಾರೆ. ‘ಬೇಕೆಂದು ಕೃತ್ಯ ಎಸಗಿಲ್ಲ. ಕಾರಿನ ಮುಂದೆ ನಾಯಿ ಮಲಗಿರುವುದನ್ನು ಗಮನಿಸದೆ ಆಕಸ್ಮಿಕವಾಗಿ ಘಟನೆ ನಡೆದಿದೆ’ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ: ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ

ಬಕ್ರೀದ್​ ಹಬ್ಬಕ್ಕೆ ಸರ್ಕಾರದಿಂದ ಮಾರ್ಗಸೂಚಿ: ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 19 =
Remember me
