ರಾಯಚೂರು:ಸಿಂಧನೂರು ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಸೋಮವಾರ ಬೆಳಗ್ಗೆ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಇಂದೂರ್ ಮೂಲದ ಇವರು ಸಿಂಧನೂರು ಮಾರ್ಗವಾಗಿ ಹೈದ್ರಾಬಾದ್​ಗೆ ಕಾರಿನಲ್ಲಿ ತೆರಳುತ್ತಿದ್ದರು. ಸಿಂಧನೂರು ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ.

ಅಪಘಾತದಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತಕ್ಕೀಡಾದ ವಾಹನಗಳನ್ನು ಎರಡು ಜೆಸಿಬಿಗಳ ಸಹಾಯದಿಂದ ತೆರವು ಮಾಡಿ ಇರತ ವಾಹನಗರ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಮೃತದೇಹಗಳನ್ನು ಸಿಂಧನೂರು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಬೆಂಗಳೂರಲ್ಲಿ ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ! ಆತಂಕದಲ್ಲಿ ಪೋಷಕರು, ಸಾವಿರಾರು ಮಕ್ಕಳ ಸ್ಥಳಾಂತರ

ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
