ರಾಯಚೂರು:ಮಸ್ಕಿ ತಾಲೂಕಿನ ಗುಡದೂರು ಬಳಿ ತುಂಗಭದ್ರಾ ಎಡದಂಡೆ ಕಾಲುವೆಗೆ ಕಾರು ಬಿದ್ದು, ದಂಪತಿ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ಸಂಭವಿಸಿದೆ. ಇವರ ಪುತ್ರ ನೀರಿನಲ್ಲಿ ಕೊಚ್ಚಿಹೋಗಿದ್ದು, ಶೋಧಕಾರ್ಯ ಮುಂದುವರಿದಿದೆ.

ಲಿಂಗಸುಗೂರು ತಾಲೂಕಿನ ಗೋನವಾಟ್ಲ ಗ್ರಾಮದ ರ್ಯನಾರಾಯಣ(55) ಮತ್ತು ಸುಬ್ಬಲಕ್ಷ್ಮಿ(50) ದಂಪತಿ ಮೃತರು. ಕಾರು ಚಾಲನೆ ಮಾಡುತ್ತಿದ್ದ ಪುತ್ರ ಶ್ರೀನಿವಾಸ (31) ಕಾಲುವೆ ನೀರಲ್ಲಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಗೌರಿ ಹಬ್ಬದಂದೇ ಈ ದುರಂತ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

ಅಪ್ಪ-ಅಮ್ಮ-ಮಗ ಸೇರಿ ಮೂವರು ಕಾರಿನಲ್ಲಿ ಗಂಗಾವತಿ ತಾಲೂಕಿನ ಕಲ್ಗುಡಿಗೆ ಹೊರಟಿದ್ದರು. ಮಗ ಕಾರು ಚಾಲನೆ ಮಾಡುತ್ತಿದ್ದ. ನಿಯಂತ್ರಣ ತಪ್ಪಿದ ಕಾರು ಕಾಲುವೆಗೆ ಬಿದ್ದಿದೆ. ಸೇತುವೆ ಕಿರಿದಾಗಿರುವುದೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಆಂಧ್ರದ ನೋಂದಣಿ ಇರುವ ಕಾರು ನೆಕ್ಕುಂಟಿ ಶ್ರೀನಿವಾಸ ಎನ್ನುವವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಈಜುಗಾರರ ಸಹಾಯದಿಂದ ದಂಪತಿ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಬಳಗಾನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಒಬ್ಬಳನ್ನೇ ಮದ್ವೆಯಾದ ಇಬ್ಬರು! ಆ.28ರ ರಾತ್ರಿ ಮಾಡಬಾರದ್ದು ಮಾಡಲು ಹೋಗಿ ಸಿಕ್ಕಿಬಿದ್ದ 2ನೇ ಪತಿ

ರಾಜ್ಯದಲ್ಲಿ 4 ದಿನ ಸುರಿಯಲಿದೆ ಧಾರಾಕಾರ ಮಳೆ: ನಾಳೆ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ದಶಕದ ಬಳಿಕ ನೀರಲ್ಲಿ ಮುಳುಗುತ್ತಿದೆ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿ! ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಜನಸಾಗರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 19 =
Remember me
