ಚಿಕ್ಕಮಗಳೂರು:ಎರಡು ತಿಂಗಳ ಹಿಂದೆ ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯ ಹೆತ್ತಮ್ಮನ ಕುಮ್ಮಕ್ಕಿನಿಂದಲೇ 37 ಜನರಿಂದ ಅತ್ಯಾಚಾರ ನಡೆದಿತ್ತು ಎಂಬ ಸ್ಫೋಟಕ ಸತ್ಯ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿತ್ತು.
ಸತತ 5 ತಿಂಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ 37 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್​ ವೃತ್ತ ನಿರೀಕ್ಷಕ ಬಿ.ಎಂ. ಸಿದ್ದರಾಮಯ್ಯ ಅವರನ್ನ ಅಮಾನತು ಮಾಡಲಾಗಿತ್ತು. ಆ ಬಳಿಕ ಎಎಸ್ಪಿ ಶೃತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದ್ದು, ಅಂತಿಮ ಹಂತಕ್ಕೆ ಬಂದಿದೆ. ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.ಇದನ್ನೂ ಓದಿರಿಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!
ಗೋಚವಳ್ಳಿ ಗ್ರಾಮದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಕೃತ್ಯ ತಡವಾಗಿ ಬೆಳಕಿಗೆ ಬಂದಿತ್ತು. ಸಂತ್ರಸ್ತ ಬಾಲಕಿ ಹೇಳಿಕೆ ಆಧಾರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೃಂಗೇರಿ ಸಿಡಿಪಿಒ ಎನ್.ಜಿ.ರಾಘವೇಂದ್ರ ಅವರ ಮೂಲಕ 2021ರ ಜ.30 ರಂದು ದೂರು ನೀಡಿದ್ದರು.
ಕಿಕ್ರೆ ಸ್ಮಾಲ್​ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್​ ಆನೆಗುಂದ, ಹೊಳೆಕೊಪ್ಪದ ವಿಕಾಶ್​, ಮಣಿಕಂಠ, ಸಂಪತ್​ ನೆಮ್ಮಾರ್, ಶೃಂಗೇರಿಯ ಅಶ್ವತ್​ ಗೌಡ, ಆನೆಗುಂದದ ರಾಜೇಶ್​, ಅಮಿತ್​, ಕುರುಬಗೆರೆಯ ಸಂತೋಷ, ಹೆಗ್ಗದ್ದೆಯ ದೀಕ್ಷಿತ್​, ಹೆರೂರಿನ ಸಂತೋಷ್​, ನಿರಂಜನ್​ ಕಿಗ್ಗ, ಶೃಂಗೇರಿಯ ನಯನಗೌಡ, ಅಭಿಗೌಡ, ಖಾಂಡ್ಯದ ಯೋಗೀಶ್​ ಸೇರಿ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ದುಷ್ಕೃತ್ಯಕ್ಕೆ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ಗೀತಾಳ ಸಹಕಾರವೂ ಇದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಗೋಚವಳ್ಳಿ ಎಂ.ಜಿ.ಆರ್ ಕ್ರಷರ್ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು. 2020ರ ಸೆಪ್ಟೆಂಬರ್​ 1ರಿಂದ 2021ರ ಜನವರಿ 27ರವರೆಗೆ ಬಾಲಕಿ ಮೇಲೆ ಕಾಮುಕರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಲೈಂಗಿಕ ದೌರ್ಜನ್ಯವೆಸಗಿದ 15ಕ್ಕೂ ಅಧಿಕ ಜನರ ಗುರುತು ಸಂತ್ರಸ್ತೆಗಿಲ್ಲ ಇಲ್ಲ. ಅವರನ್ನೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು.
ಕೇಸ್​ ದಾಖಲಾಗುತ್ತಿದ್ದಂತೆ ಕಾಮುಕರಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲೂ ದಟ್ಟವಾಗಿ ಕೇಳಿಬಂತು. ಸದನಲ್ಲೂ ಪ್ರತಿಧ್ವಿನಿಸಿದ ಈ ಪ್ರಕರಣ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ವಿಪಕ್ಷದ ಸದಸ್ಯರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದರು. ಶೃಂಗೇರಿ ಪೊಲೀಸ್​ ಠಾಣೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಆರಂಭದಲ್ಲಿ ಸಂತ್ರಸ್ತ ಬಾಲಕಿಯ ಚಿಕ್ಕಮ್ಮಳೇ ಪ್ರಮುಖ ಆರೋಪಿ ಎನ್ನಲಾಗಿತ್ತು. ಆದರೆ, ತನಿಖೆ ಚುರುಕುಗೊಳ್ಳುತ್ತಿದ್ದಂತೆ ಆಕೆ ಸಂತ್ರಸ್ತೆಯ ಚಿಕ್ಕಮ್ಮ ಅಲ್ಲ, ಬದಲಾಗಿ ಆಕೆಯೇ ಹೆತ್ತ ತಾಯಿ ಎಂಬುದು ಬಹಿರಂಗವಾಗಿತ್ತು.
ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

ಪ್ರೀತಿ ಬಲೆಗೆ ಬಿದ್ದ ರೂಪದರ್ಶಿ ಮೇಲೆ 16 ಬಾರಿ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಪ್ರಿಯಕರನ ಮತ್ತೊಂದು ಮುಖ

ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 6 =
Remember me
