ಬೆಂಗಳೂರು:ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು, ನ್ಯಾಯಾಲಯದಲ್ಲಿ ಸ್ವ-ಇಚ್ಛೆಯಿಂದ ಮರು ಹೇಳಿಕೆ ನೀಡುವುದಾಗಿ ಪೊಲೀಸರ ಮುಂದೆ ಸಿಡಿ ಲೇಡಿ ಹೇಳಿದ್ದಾಳೆ.
ನಾನು ಹೇಳುವುದು ತುಂಬಾ ಇದೆ. ನನ್ನ ಹೇಳಿಕೆ ಪರಿಗಣಿಸಿ ಎಂದು ಸಿಡಿ ಯುವತಿ ತನಿಖಾಧಿಕಾರಿ ಕವಿತಾಗೆ ಪತ್ರ ಬರೆದಿದ್ದಾಳೆ ಎಂದು ಗೊತ್ತಾಗಿದೆ. ಈ ಮೊದಲು ಸಿಡಿ ಲೇಡಿ ನೀಡಿದ್ದ ಹೇಳಿಕೆ ಪರಿಗಣಿಸದಂತೆ ಆಕೆಯ ಪೋಷಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು.
ಸಿಡಿ ಕೇಸ್​ನ ಕಿಂಗ್​ಪಿನ್​ ನರೇಶ್​ಗೌಡ ಮತ್ತು ಹ್ಯಾಕರ್​ ಶ್ರವಣ್​ ವಿರುದ್ಧವೇ ಸಿಡಿ ಲೇಡಿ ಹೇಳಿಕೆ ಕೊಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಸಿಡಿ ಲೇಡಿ ಮನವಿಯಂತೆ ಮರು ಹೇಳಿಕೆ ಕೊಡಲು ಅವಕಾಶ ಮಾಡಿಕೊಡುವಂತೆ ಎಸ್​ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಅನುಮತಿಗಾಗಿ ಕಾಯುತ್ತಿದ್ದಾರೆ.
ನಾವು ಕೆಲದಿನಗಳಿಂದ ಸಿಡಿ ಕೇಸ್​ನ ಯುವತಿಯ ಸಂಪರ್ಕದಲ್ಲಿ ಇಲ್ಲ. ಆಕೆಯ ಗಟ್ಸ್​ ಮೆಚ್ಚಲೇ ಬೇಕು. ನಾನು ಯಾವುದೇ ಕಾರಣಕ್ಕೂ ವಾಪಸ್​ ಹೋಗಲ್ಲ. ಆಕೆಯ ಪರವಾಗಿ ವಕಾಲತ್ತು ಹಾಕಿದ್ದೇವೆ. ಈ ಬೆಳವಣಿಗೆ ಓಡಿ ನನಗೂ ಶಾಕ್​ ಆಗಿದೆ ಎಂದು ಯುವತಿ ಪರ ವಕೀಲ ಜಗದೀಶ್​ ಹೇಳಿದ್ದಾರೆ.
VIDEO| ಹಾವಿನ ಜತೆ ಸರಸವಾಡಲು ಹೋದ ಯುವಕ ಸಾವು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬಣ್ಣ ಬಣ್ಣದ ಕಾಗೆ ಹಾರಿಸಬೇಡಿ, ಇಂಥದ್ದನ್ನೆಲ್ಲ ತುಂಬಾ ನೋಡಿದ್ದೇವೆ: ಯೋಗೇಶ್ವರ್​ ವಿರುದ್ಧ ಪ್ರತಾಪ್‌ ಸಿಂಹ ಗರಂ

ಬಸ್​ ನಿಲ್ದಾಣದಲ್ಲೇ ವಿಷ ಕುಡಿದ ಕೆಎಸ್​ಆರ್​ಟಿಸಿ ನೌಕರ! ನರಳಾಡುತ್ತಿದ್ದರೂ ಸಾವಿಗೆ ಕಾರಣ ಬಿಚ್ಚಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
