ಚಾಮರಾಜನಗರ:ನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿ ಚಂದನಾ(26) ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಲೇಜಿನ ಹಾಸ್ಟೆಲ್​ನಲ್ಲೇ ಮಂಗಳವಾರ ನೇಣುಬಿಗಿದುಕೊಂಡು ಚಂದನಾ ಸತ್ತಿದ್ದಾರೆ. ಸಾವಿಗೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ್ದು, ಅದರ ವಿವರ ಇಲ್ಲಿದೆ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿವಾಸಿ ಮಹದೇವಸ್ವಾಮಿ ಮತ್ತು ಶೈಲಜಾ ಪುತ್ರಿ ಚಂದನಾ, ಚಾಮರಾಜನಗರದ ಖಾಸಗಿ ಕಾಲೇಜಿನಲ್ಲಿ ಎಂಎಸ್ಸಿ ವ್ಯಾಸಂಗ ಮುಗಿಸಿದ್ದರು. ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಚಂದನಾ, ಕಾಲೇಜಿನ ಹಾಸ್ಟೆಲ್​ನಲ್ಲೇ ಉಳಿದುಕೊಂಡಿದ್ದರು. ಮಂಗಳವಾರ ಇವರ 26ನೇ ವರ್ಷದ ಜನ್ಮದಿನವಿತ್ತು. ಆದರೆ ಬೆಳಗ್ಗೆ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ವೇಳೆ ಪೊಲೀಸರು ಪರಿಶೀಲನೆ ನಡೆಸಿದಾಗ ಡೆಟ್​ನೋಟ್​ ಪತ್ತೆಯಾಗಿದೆ.

ಡೆತ್​ನೋಟ್​ನಲ್ಲಿ ಏನಿದೆ?:ಚಂದನಾ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಬರೆದಿದೆ. ‘ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆ ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಿದ್ದೀರಾ? ನಾನು ಯಾರ ಪರ ಇರಲಿ, ಯಾರ ಮಾತು ಕೇಳಿಲಿ? ಎಂದು ಗೊತ್ತಾಗುತ್ತಿಲ್ಲ. ನಾನು ಏನು ಅಂದುಕೊಂಡರೂ ಮಾಡಲು ಆಗುತ್ತಿಲ್ಲ, ಮಾಡೋಕ್ಕೆ ಬಿಡುತ್ತಿಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿ ಸಾಕಾಗಿದೆ. ಮುಂದೆ ಏನು ಮಾಡಬೇಕು? ಹೇಗೆ ಇರಬೇಕು? ಎಲ್ಲ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ಮೈಂಡ್​ ಫುಲ್​ ಬ್ಲ್ಯಾಂಕ್​ ಆಗಿದೆ. ಏನು ಮಾಡೋಕು ಆಗುತ್ತಿಲ್ಲ’.
‘ಈ ಕಡೆ ಕಾಲೇಜು, ಆ ಕಡೆ ಮನೆ. ಎರಡೂ ಕಡೆ ಒಟ್ಟಿಗೆ ಹೇಗೆ ಇರೋದಿಕ್ಕೆ ಆಗುತ್ತೆ? ಕೆಲಸ ಹೊಸದು. ಮಕ್ಕಳಿಗೆ ಅರ್ಥ ಆಗೋ ಹಾಗೆ ಪಾಠ ಮಾಡಬೇಕು, ಓದಬೇಕು. ನೋಟ್ಸ್​​ ಮಾಡಬೇಕು. ನಾನು ಓದೋದು ನಿಧಾನ. ಟೈಂ ಹೇಗೆ ಮ್ಯಾನೇಜ್​ ಮಾಡಬೇಕು ಗೊತ್ತಾಗುತ್ತಿಲ್ಲ. ಅದಕ್ಕೆ ನಾನು ಮನೆಗೂ ಬರ್ತಾ ಇರಲಿಲ್ಲ. ಸಾರಿ ಪಪ್ಪಾ.. ನನಗೆ ಆಗುತ್ತಿಲ್ಲ. ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಿಮ್ಮದೇ ಆದ ದೃಷ್ಟಿಯಲ್ಲಿ ನೋಡ್ತೀರ. ಸಾರಿ ಫ್ರೆಂಡ್ಸ್​ ಆಲ್… ನಾನು ಯಾರನ್ನೂ ಪ್ರೀತಿ ಮಾಡ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ’.
‘ಮೇಘ ಅಕ್ಕ ಯಾರಿಗೂ ಹಿಂಸೆ ಕೊಡಬೇಡ. ಅನು ಅಕ್ಕ ಸಾರಿ ಕಣೆ, ನೀನು ನನಗೆ ಎಲ್ಲ ಮಾಡಿದ್ರೂ ಯೂ ಆರ್​ ಮೈ ಬೆಸ್ಟ್​. ನಿತ್ಯ ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊ. ಈ ಕೆಲಸ ಬೇಡ. ಆರೋಗ್ಯ ಹಾಳಾಗುತ್ತೆ. ಅಜ್ಜಿ, ಅಮ್ಮ ಎಲ್ಲರೂ ಚೆನ್ನಾಗಿರಿ. ರಮ್ಯ ಮೇಡಂ ಸಾರಿ… ಮಿಸ್​ ಯು ಆಲ್​’ ಎಂದು ಡೆತ್​ನೋಟ್​ನಲ್ಲಿ ಇದೆ.
ತೇಜಸ್ವಿ ಸೂರ್ಯಗೆ ಒಳ್ಳೇ ಬುದ್ಧಿ ಬರಲೆಂದು ವಿಶೇಷ ಪೂಜೆ! ಪ್ರಸಾದ ತಲುಪಿಸಲು ಹೋದವರನ್ನ ವಶಕ್ಕೆ ಪಡೆದ ಪೊಲೀಸರು…

ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
