ಚಾಮರಾಜನಗರ:2021ರ ಮೇ 2ರಂದು ಚಾಮರಾಜನಗರದ ಕೋವಿಡ್​ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್​ ದುರಂತಕ್ಕೆ 36 ಮಂದಿ ಬಲಿಯಾಗಿದ್ದರು. ಇಂದಿಗೆ ಆಕ್ಸಿಜನ್ ದುರಂತಕ್ಕೆ ನೂರು ದಿನ ಆಗಿದ್ದು, ಮೃತರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಈ ಪೈಕಿ ದೊಡ್ಡಯ್ಯ ಕುಟುಂಬವೂ ಒಂದು.
ಚಾಮರಾಜನಗರ ತಾಲೂಕು ಮಂಗಲ ಹೊಸೂರು ಗ್ರಾಮದ ದೊಡ್ಡಯ್ಯ ಮೃತಪಟ್ಟ ಬಳಿಕ ಕುಟುಂಬ ಭಾರೀ ಅಂಕಷ್ಟಕ್ಕೆ ಸಿಲುಕಿದೆ. ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದೆ ದೊಡ್ಡಯ್ಯರ ಮಗ ಶಶಾಂಕ್​ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾದ ಈತ ಶೇ.94 ಅಂಕದೊಂದಿಗೆ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಕ್ರಷರ್ ಘಟಕದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದೊಡ್ಡಯ್ಯ, ಮಗನನ್ನು ಮೆಡಿಕಲ್ ಇಲ್ಲವೇ ಏರೋನಾಟಿಕಲ್ ಇಂಜಿನಿಯರ್ ಮಾಡುವ ಕನಸು ಕಂಡಿದ್ದರು. ಆದರೆ, ಆಕ್ಸಿಜನ್​ ದುರಂತದಲ್ಲಿ ಕೊನೆಯುಸಿರೆಳೆದರು. ಇತ್ತ ಸಿಇಟಿ, ನೀಟ್ ಪರೀಕ್ಷೆಯನ್ನೂ ತೆಗೆದುಕೊಳ್ಳಲಾದೆ ಶಶಾಂಕ್, ಓದನ್ನು ನಿಲ್ಲಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.
ಆಕ್ಸಿಜನ್​ ದುರಂತ ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ ನ್ಯಾಯಾಲಯದ ಆದೇಶದಂತೆ ಸರ್ಕಾರ 2 ಲಕ್ಷ ರೂ. ಪರಿಹಾರ ನೀಡಿತ್ತಾದರೂ, ಆ ಹಣದಲ್ಲಿ ಸಾಲ ತೀರಿಸಿ ಕುಟುಂಬವೀಗ ಬರಿಗೈಲಿದೆ. ಅನ್ಯದಾರಿ ಕಾಣದೆ ಸದ್ಯಕ್ಕೆ ಅಜ್ಜಿ ಮನೆಯಲ್ಲಿ ದೊಡ್ಡಯ್ಯ ಕುಟುಂಬ ಆಶ್ರಯ ಪಡೆದಿದೆ. ದೊಡ್ಡಯ್ಯರ ಮಗಳು ಸ್ನೇಹಲತಾ ಕೂಡ ಪ್ರತಿಭಾನ್ವಿತ ವಿದ್ಯಾರ್ಥಿನಿ. ನೋವಿನಲ್ಲೂ ಪರೀಕ್ಷೆ ಬರೆದು ಇದೀಗ ಎಸ್ಸೆಸ್ಸೆಲ್ಸಿಯಲ್ಲಿ ಶೇ.89 ಅಂಕ ಪಡೆದಿದ್ದಾಳೆ. ಈ ಬಡ ಕುಟುಂಬಕ್ಕೆ ಉಳ್ಳವರು ಸಹಾಯಹಸ್ತ ಚಾಚಿದರೆ ಪ್ರತಿಭಾವಂತ ಮಕ್ಕಳು ಓದು ಮುಂದುವರಿಸಲು ಅನುಕೂಲ ಆಗಲಿದೆ.
ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twelve =
Remember me
