ಚಾಮರಾಜನಗರ:ಪತ್ನಿಯ ನಡೆಗೆ ಬೇಸತ್ತ ಗಂಡ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಂಭವಿಸಿದೆ.
ಸಾವಿಗೂ ಮುನ್ನ ಡೆತ್​ನೋಟ್​ನಲ್ಲಿ ತನ್ನ ಮನದ ನೋವನ್ನ ಅಕ್ಷರಕ್ಕಿಳಿಸಿರುವ ಗಂಡ, ನನ್ನ ಸಾವಿಗೆ ಮೈಸೂರಿನ ಡೋಂಗಿ ಬಾಬಾ ಖುರ್ರಾಂ ಪಾಷಾ ಮತ್ತು ಈತನ ಇಬ್ಬರು ಸಹಚರರೂ ಕಾರಣ. ನನ್ನ ಪತ್ನಿಯ ತಲೆ ಕೆಡಿಸಿ ಡೋಂಗಿ ಬಾಬಾಗೆ ತಲೆಹಿಡಿದಿದ್ದಾರೆ. ಇವರನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಬರೆದು ಸಹಿ ಮಾಡಿದ್ದಾರೆ.
ಮಹಮದ್ ಅಫ್ಘಾನ್ ಮೃತ ದುರ್ದೈವಿ. ಈತನಿಗೆ ತನ್ಜೀಯಾ ಕೌಸರ್ ಎಂಬಾಕೆ ಜತೆ ಮದುವೆ ಆಗಿದೆ. ದಂಪತಿ ಇಬ್ಬರೂ ಬಾಬಾ ಖುರ್ರಾಂ ಪಾಷಾ ಬಳಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದರು. ಚಿಕಿತ್ಸೆ ನೆಪದಲ್ಲಿ ಮಹಿಳೆಯನ್ನು ಖುರ್ರಾಂ ಪಾಷಾ ತನ್ನ ಬಲೆಗೆ ಬೀಳಿಸಿಕೊಂಡಿದ್ದನಂತೆ. ಮನನೊಂದ ಮಹಮದ್ ಅಫ್ಘಾನ್ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಬಾ ವಿರುದ್ಧ ಕ್ರಮ ಕೈಗೊಳ್ಳಲು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಬಿಜೆಪಿಗೆ ಬರ್ಬೇಕು ಅಂದ್ರೆ ಈ 3 ಷರತ್ತಿಗೆ ಒಪ್ಪಬೇಕು… ಸುಮಲತಾರ ಡಿಮಾಂಡ್​ಗೆ ಬೆಚ್ಚಿಬಿದ್ದಿದೆಯಂತೆ ಬಿಜೆಪಿ!

ರಾಜ್ಯದಲ್ಲಿ ಒಂದೇ ದಿನ ಇಬ್ಬರು ಪೊಲೀಸ್​ ಹೆಡ್​ಕಾನ್​ಸ್ಟೇಬಲ್ಸ್​ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 7 =
Remember me
