ಕೊಳ್ಳೇಗಾಲ:ಸತ್ತವರಿಗೆ ತಿಥಿ ಮಾಡೋದು ಕಾಮನ್. ಆದ್ರೆ ಚಾಮರಾಜನಗರದಲ್ಲಿ ಜೀವಂತ ವ್ಯಕ್ತಿಗೂ ತಿಥಿ ಮಾಡಲಾಗಿದೆ.ಆ ಮೂಲಕ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ 21 ದಿನಗಳ ಹಿಂದೆ ಆರಂಭವಾಗಿದ್ದ ಗ್ರಾಮ ದೇವತೆ ಶ್ರೀ ಸೀಗಮಾರಮ್ಮನ ನರ ಬಲಿ ಹಬ್ಬಕ್ಕೆ ಆರಾಧನೆ(ತಿಥಿ) ಆಚರಣೆಯೊಂದಿಗೆ ಬುಧವಾರ ರಾತ್ರಿ ತೆರೆ ಎಳೆಯಲಾಗಿದೆ.
ಸತ್ತು ಬದುಕಿದ ವ್ಯಕ್ತಿಯ ಹೆಸ್ರಲ್ಲಿ‌ 101 ವಿಧದ ತಿನಿಸನ್ನು ಎಡೆಯಿಟ್ಟು ಸೀಗೆ ಮಾರಮ್ಮ ದೇವಿಯ ಒಕ್ಕಲಿನ 120 ಕುಟುಂಬಸ್ಥರಿಗಷ್ಟೇ ಊಟದ ವ್ಯವಸ್ಥೆ ಮಾಡಲಾಗುತ್ತು. ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ. ಸೀಗೆ ಮಾರಮ್ಮ ಮನೆತನದವರಷ್ಟೇ ತಿಥಿ ನಡೆಸಬೇಕೆಂಬ ನಂಬಿಕೆ ಇದೆ. ಇದೇ ನಂಬಿಕೆಯಲ್ಲೇ ತಿಥಿ ಕಾರ್ಯ ಮಾಡಿದರು.
ಗ್ರಾಮದ ಎಲ್ಲ ಕೋಮಿನವರು ಸೇರಿ ಏ.24 ರಂದು ಗ್ರಾಮದಲ್ಲಿ ಹಬ್ಬಾಚರಣೆ ನಡೆಸಲು ಊರು ಸಾರಿಸಿದ್ದರು. ಏ.27ರಂದು ಗ್ರಾಮದಲ್ಲಿ ಶ್ರೀ ಸೀಗಮಾರಮ್ಮನ ಧೂಳೆಬ್ಬರ ಪೂಜೆ ಪುನಸ್ಕಾರದೊಂದಿಗೆ ಹಬ್ಬ ಗರಿಗೆದರಿತ್ತು. ಮೇ 9 ರಂದು ನರಬಲಿ ಬೀಳುವ ಧಾರ್ಮಿಕ ಆಚರಣೆ ಮತ್ತು 10 ರಂದು ನರಬಲಿ ಕಣ್ತೆರೆಯುವ ವಿಶೇಷ ಧಾರ್ಮಿಕಾಚರಣೆಗಳು ನಡೆದಿದ್ದವು. ಬುಧವಾರದವರೆಗೂ ಗ್ರಾಮದ ಹೆಬ್ಬರೆ ದೇವರ ಮನೆ ಹಾಗೂ ಬಲಿ ದೇವರ ಮನೆಯಲ್ಲಿ ಉಳಿದು ಹಿಂದಿನ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸುತ್ತಿದ್ದ ಶ್ರೀ ಸೀಗಮಾರಮ್ಮನ ದೇವರ ಗುಡ್ಡರು, ರಾತ್ರಿ ಗ್ರಾಮದಲ್ಲಿ ಅಂತಿಮ ಪೂಜೆಗಳನ್ನು ನೆರವೇರಿಸುವ ಮೂಲಕ ಹಬ್ಬಾಚರಣೆಯನ್ನು ಮುಕ್ತಾಯಗೊಳಿಸಿದರು.

ಹಬ್ಬದಲ್ಲಿ ಬಲಿ ಬಿದ್ದಿದ್ದ ಕುರಿ ಸೀಗನಾಯಕ, ಒಳಗೆರೆ ಹುಚ್ಚಮ್ಮನ ಕೇಲು ಹೊತ್ತಿದ್ದ ಜಯ ಸೀಗನಾಯಕ, ಹೋಮ ಪೂಜೆಯಲ್ಲಿ ಪಾಲ್ಗೊಂಡಿದ್ದ ಕುಮಾರ್​, ಕುಂಚಿ ಕುನ್ನಸಿಗನಾಯಕ, ಕುನ್ನ ಸೀಗನಾಯಕ ಭಾರಿಕೇರಿಯಲ್ಲಿರುವ ಬಲಿದೇವರ ಮನೆ ಎದುರು ಆಡುಮರಿಯನ್ನು ದೇವರಿಗೆ ಬಲಿ ನೀಡಿ, ಅಡುಗೆ ತಯಾರಿಸಿ, ದೇಗುಲದಲ್ಲಿ 101 ಎಡೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ಬಲಿ ಬಿದ್ದವನಿಗೆ ತಿಥಿ(ಆರಾಧನೆ) ರೀತಿಯಲ್ಲಿ ಗ್ರಾಮದ ನಾಯಕ ಜನಾಂಗದ ಶ್ರೀ ಸೀಗಮಾರಮ್ಮನ ಒಕ್ಕಲಿನ 120 ಕುಟುಂಬದವರು ತಯಾರಿಸಿದ ಆ ಮಾಂಸದೂಟವನ್ನು ಶಾಲಾ ಆವರಣದಲ್ಲಿ ಒಟ್ಟಿಗೆ ಪ್ರಸಾದವೆಂದು ಸೇವಿಸುವುದರೊಂದಿಗೆ ಹಬ್ಬವನ್ನು ಮುಕ್ತಾಯಗೊಳಿಸಿದರು. ಗ್ರಾಮದ ಪರಿಶಿಷ್ಟಜಾತಿ ಬೀದಿಯಲ್ಲಿರುವ ಶ್ರೀ ಸೀಗಮಾರಮ್ಮನ ಒಕ್ಕಲಿನ 75 ಕುಟುಂಬದವರು ಸಂಜೆ ಗ್ರಾಮದ ಮಾರಿಗುಡಿಗೆ ತೆರಳಿ ಆಡು ಮರಿಯನ್ನು ದೇವರಿಗೆ ಬಲಿ ನೀಡಿತಂದು ಅದನ್ನು ಗ್ರಾಮದ ಮಾಸ್ತಿಮನೆಯಲ್ಲಿ ಅಡುಗೆ ತಯಾರಿಸಿ, ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಇದನ್ನು ಸೇವಿಸಿ ಹಬ್ಬಾಚರಣೆ ಅಂತ್ಯಗೊಳಿಸಿದರು.

ಒಗ್ಗರಣೆ ಊಟಕ್ಕೆ ಚಾಲನೆ:ಗ್ರಾಮದಲ್ಲಿ ಹಬ್ಬ ಆಚರಣೆ ಆರಂಭಗೊಂಡ ದಿನದಿಂದಲೂ ಊರಿನ ಎಲ್ಲ ಕೋಮಿನ ಜನರು ತಮ್ಮ ಮನೆಯಲ್ಲಿ ಮಾಂಸಾಹಾರ ಸೇವಿಸುವುದನ್ನು ಕೈಬಿಟ್ಟಿದ್ದರು. ಅಲ್ಲಿಂದ ಇದುವರೆಗೂ ಗ್ರಾಮಸ್ಥರು ಒಗ್ಗರಣೆ ಇಲ್ಲದ ಊಟ ಮಾಡುತ್ತಿದ್ದರು. ಬುಧವಾರ ರಾತ್ರಿ ಹಬ್ಬ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಗುರುವಾರದಿಂದ ಗ್ರಾಮದಲ್ಲಿ ಒಗ್ಗರಣೆ ಊಟ, ಮಾಂಸದೂಟ ಮಾಡಬಹುದಾಗಿದೆ.
ಮೇ 10ರಂದು ಶ್ರೀ ಸೀಗಮಾರಮ್ಮನ ಮೂಲ ದೇವಸ್ಥಾನದ ಮುಂದೆ ನಡೆದಿದ್ದ ಅಗ್ನಿಕೊಂಡ ಸ್ಥಳಕ್ಕೆ ಮೇ 23 ರಂದು ತೆರಳಿ ಶಾಂತಿ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥರು‘ವಿಜಯವಾಣಿ’ಗೆ ತಿಳಿಸಿದರು.
ಇದು ಸತ್ತವರನ್ನು ಬದುಕಿಸೋ ಜಾತ್ರೆ! ಕೊಳ್ಳೇಗಾದಲ್ಲಿ ರಾತ್ರಿಯಿಡೀ ನಡೆಯಿತು ನರಬಲಿ ವಿಸ್ಮಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
