ಕೊಳ್ಳೇಗಾಲ:ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮೇ 9 ಮತ್ತು 10ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮ ದೇವತೆ ಶ್ರೀ ಸೀಗಮಾರಮ್ಮ ದೇವಿಗೆ ನರಬಲಿ ಹಬ್ಬ ಪವಾಡದಂತೆ ನಡೆದಿತ್ತು. ರಾತ್ರಿ ನರಬಲಿಯಾದ ವ್ಯಕ್ತಿಗೆ ಬೆಳಗ್ಗೆ ಮತ್ತೆ ಜೀವ ಬಂದ ವಿಚಾರ ಕೇಳಿ ರಾಜ್ಯದ ಜನತೆ ಆಶ್ಚರ್ಯಗೊಂಡಿದ್ದರು. ಹಬ್ಬದ ಮುಂದುವರಿದ ಭಾಗವಾಗಿ ನರಬಲಿ ಬಿದ್ದವನಿಗೆ ಮೇ 18ರಂದು ತಿಥಿ ನಡೆಯಲಿದೆ.
19 ವರ್ಷದ ಬಳಿಕ ಗ್ರಾಮದ ಎಲ್ಲ ಕೋಮಿನವರ ಒಪ್ಪಿಗೆ ಮೇರೆಗೆ ನರಬಲಿ ಹಬ್ಬ ಮೇ 18 ರಂದು ಆರಾಧನೆ(ತಿಥಿ) ಯೊಂದಿಗೆ ಸಂಪನ್ನಗೊಳ್ಳಲಿದೆ. ಬುಧವಾರ ಗ್ರಾಮದ ಭಾರಿಕೇರಿಯಲ್ಲಿರುವ ಬಲಿ ದೇವರ ಮನೆಯಲ್ಲಿದ್ದ ಬಲಿಗೆದ್ದ ಕುರಿ ಸೀಗನಾಯಕ, ಒಳಗೆರೆ ಹುಚ್ಚಮ್ಮನ ಕೇಲು ಹೊತ್ತಿದ್ದ ಜಯ ಸೀಗನಾಯಕ, ಹೋಮ ಪೂಜೆಯಲ್ಲಿ ಭಾಗವಹಿಸಿದ್ದ ಕುಮಾರ್​, ಕುಂಚಿ ಕುನ್ನಸಿಗನಾಯಕ ಹಾಗೂ ಕುನ್ನ ಸೀಗನಾಯಕ, ಹಬ್ಬ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಸೀಗಮಾರಮ್ಮನ ಒಕ್ಕಲಿನ ಹಿರಿಯರೊಟ್ಟಿಗೆ ಗ್ರಾಮದಲ್ಲಿರುವ ಸಾಕದೇವಮ್ಮ ಹಾಗೂ ಗುಂಡೇಗಾಲ ಗ್ರಾಮದಲ್ಲಿರುವ ಒಳಗೆರೆ ಹುಚ್ಚಮ್ಮ ದೇಗುಲಕ್ಕೆ ಮಂಗಳವಾಧ್ಯ ಸಮೇತ ತೆರಳಿ ದೇವರ ದರ್ಶನ ಪಡೆದು ವಿವಿಧ ಪೂಜೆಗಳನ್ನು ನೆರವೇರಿಸಿದರು.
ನರಬಲಿ ಬಿದ್ದಿದ್ದ ಕುರಿ ಸೀಗನಾಯಕ, ಕೇಲು ಹೊತ್ತವರು ಹಾಗೂ ಇತರ ಮೂವರಿಗೆ ಹಬ್ಬದ ಸಂಪ್ರದಾಯದಂತೆ ಮೇ 18ರ ರಾತ್ರಿ ಬಲಿ ದೇವರ ಮನೆಯಲ್ಲಿ ಆರಾಧನೆ(ತಿಥಿ) ಕಾರ್ಯ ನೆರವೇರಲಿದೆ. ದೇಗುಲದ ಮುಂದೆ ಅಂದು ರಾತ್ರಿ 10 ಗಂಟೆಗೆ ಆಡುಮರಿ ಬಲಿ ನೀಡಿ, ಮಾಂಸದಿಂದ ತಯಾರಿಸಿದ ಅಡುಗೆಯನ್ನು ತಡರಾತ್ರಿ ದೇವರಿಗೆ 101 ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಬ್ಬಾಚರಣೆಗೆ ವಿಧ್ಯುಕ್ತ ತೆರೆ ಬೀಳಲಿದೆ. ನಂತರ ಊರಿನ ಜನರು ಮನೆಯಲ್ಲಿ ಮೊದಲಿನಂತೆ ಮಾಂಸಾಹಾರ ಸೇವಿಸಬಹುದು. ಅಲ್ಲಿಯವರೆಗೂ ಒಗ್ಗರಣೆ ಇಲ್ಲದ ಊಟೋಪಚಾರವನ್ನೇ ಅನುಸರಿಸಬೇಕಿದೆ.
ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ದಾಖಲೆ ಬರೆದ ಕೆಂಪಡಕೆ ಬೆಲೆ! ಅಡಕೆ ಬೆಳೆಗಾರರ ಮೊಗದಲ್ಲಿ ಸಂತಸ

ಇದು ಸತ್ತವರನ್ನು ಬದುಕಿಸೋ ಜಾತ್ರೆ! ಕೊಳ್ಳೇಗಾದಲ್ಲಿ ರಾತ್ರಿಯಿಡೀ ನಡೆಯಿತು ನರಬಲಿ ವಿಸ್ಮಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + seven =
Remember me
