ಬೆಂಗಳೂರು:ಗೌರಿ-ಗಣೇಶ ಹಬ್ಬದ ಪ್ರಯುಕ್ತ ಚಾಮರಾಜಪೇಟೆ ಆಟದ ಮೈದಾನ ಸಮೀಪ ಪ್ರತಿಷ್ಠಾಪಿದ್ದ ಗಣೇಶ ಮೂರ್ತಿಯನ್ನು ನಿಮಜ್ಜನ ಮಾಡುವ ಹಿನ್ನೆಲೆ ಶನಿವಾರ ಮಧ್ಯಾಹ್ನ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತಿದೆ.
ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿಲಾಗಿದ್ದು, ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಸಾವರ್ಕರ್ ಹಾಗೂ ಮೃತ ಹಿಂದೂ ಕಾರ್ಯಕರ್ತರ ಫೋಟೋಗಳನ್ನೂ ಹಿಡಿದು ಘೋಷಣೆ ಕೂಗಲಾಯಿತು. ಭಟ್ಕಳದ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ, ಶಿವಾಜಿನಗರದಲ್ಲಿ ಹತ್ಯೆಯಾಗಿದ್ದ ಆರ್​ಎಸ್​ಎಸ್ ಕಾರ್ಯಕರ್ತ ರದ್ರೇಶ್​ರ ಫೋಟೋಗಳನ್ನೂ ಹಿಡಿದು ಜನ ಮೆರವಣಿಗೆಯಲ್ಲಿ ಸಾಗಿದ ದೃಶ್ಯ ಕಂಡು ಬಂತು.

ಚಾಮರಾಜಪೇಟೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟ ಗಣೇಶ ಮೆರವಣಿಗೆ ಶಿರಸಿ ಸರ್ಕಲ್ ತಲುಪಿತು. ಇಲ್ಲಿಂದ ಸಿಟಿ ಮಾರ್ಕೆಟ್ ಮಾರ್ಗವಾಗಿ ಟೌನ್ ಹಾಲ್​ನತ್ತ ಹೊರಟಿದೆ. ಚಾಮರಾಜಪೇಟೆ, ಬಿನ್ನಿಪೇಟೆ ಸೇರಿದಂತೆ ನಗರದ ಬೇರೆ ಬೇರೆ ಭಾಗಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನೂ ಮೆರವಣಿಗೆಯಲ್ಲು ಕೊಂಡೊಯ್ಯಲಾಗುತ್ತಿದೆ. ತಮಟೆ, ಡಿಜೆ ಸೌಂಡ್​ಗೆ ತಕ್ಕಂತೆ ಮೆರವಣಿಗೆಯುದ್ದಕ್ಕೂ ಭಕ್ತರು ಡಾನ್ಸ್​ ಮಾಡುತ್ತಾ ಗಣೇಶೋತ್ಸವಕ್ಕೆ ಮೆರುಗು ತಂದಿದ್ದಾರೆ.
ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್​! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ

ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fifteen =
Remember me
