ಒಟ್ಟಾವಾ:ಪ್ರತಿವರ್ಷ ನವೆಂಬರ್ ತಿಂಗಳನ್ನು ‘ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ’ ಎಂದು ಆಚರಿಸುವ ನಿರ್ಣಯಕ್ಕೆ ಕೆನಡಾ ಸಂಸತ್​ನಲ್ಲಿ ಅಂಗೀಕರಿಸಲಾಗಿದೆ. ಈ ಕುರಿತು ಕೆನಡಾದ ಸಂಸತ್​ ಸದಸ್ಯ, ಕರ್ನಾಟಕ ಮೂಲದ ಚಂದ್ರ ಆರ್ಯ ಟ್ವೀಟ್​ ಮೂಲಕ ತಿಳಿಸಿದ್ದು, ಸಂತಸ ಹಂಚಿಕೊಂಡಿದ್ದಾರೆ.
ಪ್ರತಿವರ್ಷ ನವೆಂಬರ್​ ತಿಂಗಳನ್ನು ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ ಎಂದು ಘೋಷಿಸಬೇಕು ಎಂಬ ನನ್ನ ಖಾಸಗಿ ನಿರ್ಣಯವನ್ನು ಕೆನಡಾದ ಹೌಸ್​ ಆಫ್​ ಕಾಮನ್ಸ್​ ಸರ್ವಾನುಮತದಿಂದ ಅಂಗೀರಿಸಿತು. ಹಿಂದೂ ಪರಂಪರೆಯ ಮನುಕುಲಕ್ಕೆ ಸಿಕ್ಕ ಮನ್ನಣೆ ಇದಾಗಿದೆ ಎಂದು ಟ್ವಿಟರ್​ನಲ್ಲಿ ಚಂದ್ರ ಆರ್ಯ ಬರೆದುಕೊಂಡಿದ್ದಾರೆ.
Historic: House of Commons unanimously passed my Private Members Motion to proclaim every year November as the national Hindu Heritage Month This is a long overdue Canadian recognition of contributions of Hindu Heritage to the mankind and of Hindu-Canadians to our country.1/2pic.twitter.com/AbBWcQEeXv
— Chandra Arya (@AryaCanada)September 28, 2022

ಕೆನಡಾದ ಸಂಸತ್​ ಸದಸ್ಯರಾಗಿರುವ ಚಂದ್ರ ಆರ್ಯ ಅವರು ಕಳೆದ ಮೇ ತಿಂಗಳಲ್ಲಿ ಕೆನಡಾ ಪಾರ್ಲಿಮೆಂಟ್​ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಜಗದ್ವಿಖ್ಯಾತಿ ಪಡೆದಿದ್ದರು. ಚಂದ್ರ ಆರ್ಯ ಅವರಲ್ಲಿನ ಕನ್ನಡಾಭಿಮಾನ ಕಂಡು ನಾಡಿನ ಜನತೆ ಹೆಮ್ಮೆ ಪಟ್ಟಿದ್ದಾರೆ. ಅವರ ಭಾಷಣದ ವಿಡಿಯೋ ತುಣುಕನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ಪ್ರೀತಿ-ಅಭಿಮಾನದ ಮಳೆಯನ್ನೇ ಸುರಿಸಿದ್ದಾರೆ. ಇದೀಗ ‘ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ’ ಆಚರಣೆಯ ನಿರ್ಣಯ ಅಂಗೀಕಾರ ಮಾಡಿಸಿರುವುದು ಮತ್ತಷ್ಟು ಖುಷಿ ನೀಡಿದೆ.
ಕೆನಡಾದಲ್ಲಿ ನೆಲೆಸಿರುವ ಚಂದ್ರ ಆರ್ಯ ಅವರು ಕರ್ನಾಟಕದ ತುಮಕೂರು ಜಿಲ್ಲೆ ಶಿರಾ ತಾಲೂಕು ದ್ವಾರಾಳು ಗ್ರಾಮದ ಮೂಲದವರು. ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿಯ ಪುತ್ರ. ಇವರ ಪಾಲಕರು ಸದ್ಯ ಬೆಂಗಳೂರಲ್ಲಿ ನೆಲೆಸಿದ್ದಾರೆ.
ವಿದೇಶಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಮೊಳಗಿದ ಕನ್ನಡ: ಕೆನಡಾ ಸಂಸದ ಚಂದ್ರ ಆರ್ಯರಿಂದ ಕನ್ನಡದಲ್ಲೇ ಭಾಷಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 13 =
Remember me
