ಶಿವಮೊಗ್ಗ:ಕಳೆದ ವಾರ ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಸ್ಮಶಾನದಲ್ಲಿ ನೇಣುಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಮೃತ. ಆಗುಂಬೆ ಗ್ರಾಮದ ಸ್ಮಶಾನದ ಶೆಡ್​ನಲ್ಲಿ ನೇಣಿಗೆ ಶರಣಾಗಿದ್ದಾನೆ. ಮೇ 24ರಂದು ಸ್ವಾಮಿ ನಾಪತ್ತೆಯಾಗಿದ್ದ. ಈತನಿಗೆ ಇನ್ನೂ ಮದುವೆ ಆಗಿರಲಿಲ್ಲ. ಮಗ ಕಾಣೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಯುವಕನ ಮೊಬೈಲ್ ನೆಟ್​ವರ್ಕ್​ ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಸ್ಮಶಾನದಲ್ಲಿ ಡೆತ್​ನೋಟ್​ ಬರೆದಿಟ್ಟು ದುರಂತ ಅಂತ್ಯಕಂಡಿದ್ದಾನೆ. ‘ಅಪ್ಪ.. ಅಣ್ಣ.. ನನ್ನನ್ನು ಕ್ಷಮಿಸಿ’ ಎಂದು ಸ್ವಾಮಿಯ ಡೆತ್​ನೋಟ್​ನಲ್ಲಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೆ ಕೈ ತಪ್ಪಿದ ಟಿಕೆಟ್​: ಕಾಂಗ್ರೆಸ್​ ನಾಯಕರ ವಿರುದ್ಧ ಸಿಡಿದೆದ್ದ ಮುದ್ದಹನುಮೇಗೌಡ, ಕುಣಿಗಲ್​ನಲ್ಲಿ ಸ್ಪರ್ಧೆ ಖಚಿತ

ಕಾಡಿನಲ್ಲಿ ಬೇಟೆಯಾಡುವ ಹುಲಿ ಹಿಡಿದು ಬೋನಿಗೆ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ: ವಿಜಯೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
