ಚನ್ನಪಟ್ಟಣ:ತಾಲೂಕಿನ ಗೌಡಗೆರೆಯಲ್ಲಿ ನೆಲೆಸಿರುವ ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ಮಹಾಮಸ್ತಕಾಭಿಷೇಕ ಭಾನುವಾರ ಅದ್ದೂರಿಯಾಗಿ ಜರುಗಿತು.
ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ದೇವಿಗೆ ಗಂಗಾಜಲದಲ್ಲಿ ಅಭಿಷೇಕ ಮಾಡುವ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು. ಇದಕ್ಕೂ ಮುಂಚೆ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಕ್ತರು ಶ್ರೀಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ ಚಾಮುಂಡೇಶ್ವರಿಯ ಚಿನ್ನದ ವಿಗ್ರಹ ಅನಾವರಣಗೊಳಿಸಿ ಅಭಿಷೇಕ ಮಾಡಿದರು.
ಕ್ಷೇತ್ರದಲ್ಲಿ ಕಳೆದ ವರ್ಷ ಅನಾವರಣಗೊಂಡಿದ್ದ ವಿಶ್ವದ ಅತಿ ಎತ್ತರದ (67 ಅಡಿ) ಬೃಹತ್ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹಕ್ಕೆ ಇದೇ ಮೊದಲ ಬಾರಿ ಮಹಾಮಸ್ತಭಿಷೇಕ ಹಮ್ಮಿಕೊಳ್ಳಲಾಗಿತ್ತು. ಮಜ್ಜನಕ್ಕೆ ಕರುನಾಡ ಶ್ರೀಗಂಧ, ಕಾಶ್ಮೀರಿ ಕೇಸರಿ ಬಳಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ಹಾಲು, ಮೊಸರು, ಸಪ್ತನದಿಗಳ ಪವಿತ್ರ ಜಲ, ಎಳನೀರು, ಜೇನುತುಪ್ಪ, ಒಣ ಹಣ್ಣುಗಳು, ಐದು ಬಗೆಯ ಹಣ್ಣುಗಳು, ವಿಭೂತಿ, ಅರಿಶಿನ, ಕುಂಕುಮ, ಚಂದನ ಸೇರಿದಂತೆ 45 ಬಗೆಯ ವಸ್ತುಗಳನ್ನು 1008 ಲೀಟರ್ ಅಳತೆಯಲ್ಲಿ ಅಭಿಷೇಕ ಮಾಡಲಾಯಿತು.
ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡ ಮಹಾಮಸ್ತಕಾಭಿಷೇಕ ತಡರಾತ್ರಿಯವರೆಗೂ ನಡೆಯಿತ್ತು. ಅಭಿಷೇಕಕ್ಕೆ ಬಳಕೆ ಮಾಡಲಾದ ವಸ್ತುಗಳನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು. ಅರಿಶಿನ ಕುಂಕುಮ ಅಭಿಷೇಕದಲ್ಲಿ ಶಾಂತಸ್ವರೂಪಿಣಿ ದೇವಿ ವಿಜೃಂಭಿಸಿದಳು.

ಹರಿದು ಬಂದ ಭಕ್ತಗಣ:ರಾಜ್ಯದ ಇತಿಹಾಸದಲ್ಲಿ ಶ್ರವಣಬೆಳಗೊಳದ ಬಾಹುಬಲಿ ಹೊರತುಪಡಿಸಿ, ಹಿಂದು ದೇವತೆಗೆ ನಡೆದ ಮೊದಲ ಮಸ್ತಕಾಭಿಷೇಕ ಇದು ಎಂಬ ಖ್ಯಾತಿ ಪಡೆಯಿತು. ಕಾರ್ಯಕ್ರಮ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಗೌಡಗೆರೆ ಗ್ರಾಮಕ್ಕೆ ಸಾಗರದಂತೆ ಹರಿದು ಬಂದಿದ್ದರು. ಅಭಿಷೇಕ ಆರಂಭಗೊಳ್ಳುತ್ತಿದ್ದಂತೆ ಹರ್ಷೋದ್ಘಾರ ಮೊಳಗಿಸಿದ ಭಕ್ತರು, ಅಪರೂಪದ ಐತಿಹಾಸಿಕ ಕ್ಷಣ ಕಣ್ತುಂಬಿಕೊಂಡರು. ದೇವಿಗೆ ಅಭಿಷೇಕ ನೆರವೇರಿಸಲು ಭಕ್ತರಿಗೆ ಅವಕಾಶ ನೀಡಲಾಗಿತ್ತು. ಮೆಟ್ಟಿಲುಗಳ ಮೂಲಕ ವಿಗ್ರಹದ ತುತ್ತತುದಿ ತಲುಪಿದ ಭಕ್ತರು ಅಭಿಷೇಕ ಮಾಡಿ ಪುನೀತರಾದರು. ಮೆಟ್ಟಿಲು ಹತ್ತಲು ಸಾಧ್ಯವಿಲ್ಲದವರು ದೇವಿಯ ಪಾದಕ್ಕೆ ಹಾಲಿನ ಅಭಿಷೇಕ ಮಾಡಿ ಸಂತೃಪ್ತಗೊಂಡರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕರಾದ ಡಿ.ಸಿ.ತಮ್ಮಣ್ಣ, ಡಾ.ಅನ್ನದಾನಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠಾಧೀಶ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಕುಡಿನೀರು ಕಟ್ಟೆ ಮಠದ ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ ಸೇರಿದಂತೆ ಹಲವು ಗುರುಗಳು, ಚಿತ್ರನಟ ಶಂಕರ್ ಅಶ್ವತ್ಥ್ ಸೇರಿದಂತೆ ವಿವಿಧ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಇದರೊಂದಿಗೆ ಸಾಕಷ್ಟು ಸ್ವಯಂ ಸೇವಕರು ಭಕ್ತರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಿದರು.
ಕ್ಷೇತ್ರದಲ್ಲಿ ನೆಲೆಸಿರುವ ಶಕ್ತಿದೇವತೆಯ ಕೃಪೆಯಿಂದಾಗಿ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಸಹಕಾರ ನೀಡಿದ ಗಣ್ಯರು ಮತ್ತು ಸಮಸ್ತ ಭಕ್ತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ 3 ವರ್ಷ ಅಥವಾ 5 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಮಾಡುವ ಉದ್ದೇಶ ಹೊಂದಿದ್ದೇವೆ.| ಡಾ.ಮಲ್ಲೇಶ್‌ ಗುರೂಜಿಧರ್ಮಾಧಿಕಾರಿ ಗೌಡಗೆರೆ ಕ್ಷೇತ್ರ

ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಎನ್​ಟಿಆರ್ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
