ಚನ್ನಪಟ್ಟಣ:ರಾಜ್ಯ ಬಿಜೆಪಿ ಸರ್ಕಾರದಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಪ್ರಭಾವಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಕಾರಣ ಶುಕ್ರವಾರ ತಹಸೀಲ್ದಾರ್ ಎಲ್.ನಾಗೇಶ್ ವರ್ಗಾವಣೆ ವಿಚಾರದಲ್ಲಿ ನಡೆದ ಬೆಳವಣಿಗೆ.
ಈ ಹಿಂದಿನಿಂದಲೂ ತಹಸೀಲ್ದಾರ್ ಎಲ್.ನಾಗೇಶ್ ವರ್ಗಾವಣೆ ವಿಚಾರದಲ್ಲಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ನಡುವೆ ಶೀತಲ ಸಮರ ನಡೆಯುತಿತ್ತು. ಶುಕ್ರವಾರ ಸಂಜೆ ತಹಸೀಲ್ದಾರ್ ವರ್ಗಾವಣೆ ಆದೇಶ ಹೊರಬಿದ್ದಿತ್ತು. ತಹಸೀಲ್ದಾರ್ ವರ್ಗಾವಣೆ ಆದೇಶವನ್ನು ಖುದ್ದು ನಿಂತು ಸಿ.ಪಿ.ಯೋಗೇಶ್ವರ್ ಮಾಡಿಸಿದ್ದರು ಎಂಬ ಮಾಹಿತಿ ಇತ್ತು. ಯೋಗೇಶ್ವರ್ ಬೆಂಬಲಿಗರು ಸಹ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಸಂಭ್ರಮಿಸಿದ್ದರು. ಆದರೆ, ರಾತ್ರಿಯಾಗುತ್ತಲೇ ಈ ವರ್ಗಾವಣೆ ಆದೇಶ ರದ್ದಾಗಿದೆ.
ಕುಮಾರಸ್ವಾಮಿ ತನ್ನ ಪ್ರಭಾವ ಬಳಸಿ ತಹಸೀಲ್ದಾರ್ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಿಎಂ ಜೊತೆಗಿನ ತನ್ನ ಭಾಂದವ್ಯ ಗಟ್ಟಿಯಾಗಿದೆ ಎಂದು ಎಚ್​ಡಿಕೆ ನಿರೂಪಿಸಿದ್ದಾರೆ. ಕೆಲದಿನಗಳ ಹಿಂದೆ ಸಿ.ಪಿ.ಯೋಗೇಶ್ವರ್, ನಮ್ಮ ಪಕ್ಷದ ನಾಯಕರೇ ಕುಮಾರಸ್ವಾಮಿ ಅವರಿಗೆ ಸಹಕಾರ ನೀಡುತ್ತಾರೆ ಎಂದಿದ್ದರು. ಈ ಆರೋಪಕ್ಕೆ ತಹಸೀಲ್ದಾರ್ ವರ್ಗಾವಣೆ ವಿಚಾರ ಪುಷ್ಟಿ ನೀಡಿದೆ.
ಈ ಹಿಂದೆ ಚನ್ನಪಟ್ಟಣದಲ್ಲಿ ತಹಸೀಲ್ದಾರ್ ಆಗಿದ್ದ ಹಾಗೂ ಯೋಗೇಶ್ವರ್​ರ ಆಪ್ತರಾಗಿದ್ದ ಸುದರ್ಶನ್ ಅವರನ್ನ ವರ್ಗಾವಣೆ ಮಾಡಿಸಿ ನಾಗೇಶ್ ಅವರನ್ನ ಕುಮಾರಸ್ವಾಮಿ ಹಾಕಿಸಿಕೊಂಡಿದ್ದರು. ಇದೀಗ ನಾಗೇಶ್​ರ ವರ್ಗಾವಣೆಗೆ ಯೋಗೇಶ್ವರ್​ ಒತ್ತಡ ಹಾಕಿದರೂ ಸದ್ಯಕ್ಕೆ ಫಲಿಸುತ್ತಿಲ್ಲ.
ಬೆಂಗ್ಳೂರಲ್ಲಿ ಹಾಡಹಗಲೇ ಮಗನಿಗೆ ಬೆಂಕಿ ಇಟ್ಟು ಕೊಂದ ತಂದೆ! ಅಪ್ಪಾ.. ಪ್ಲೀಸ್​ ಬೇಡಪ್ಪ… ಅಂದ್ರೂ ಕರಗಲಿಲ್ಲ ಕ್ರೂರಿ ಮನಸ್ಸು

ಥೂ, ಇದೆಂಥಾ ಅಸಹ್ಯ? ಚೆನ್ನೈನಲ್ಲಿ ಮೂವರು ಬಾಲಕರ ಜತೆ ಗುಂಪು ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ!

ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
