ಚನ್ನಪಟ್ಟಣ:ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಗಳ ಆಯೋಜನೆಯನ್ನು ನಿಷೇಧಿಸಿದ್ದರೂ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಐತಿಹಾಸಿಕ ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆಗೆ ಸಿದ್ಧತೆ ಆರಂಭಗೊಂಡಿದೆ. ನೂರಾರು ರಾಸುಗಳೊಂದಿಗೆ ರಾತ್ರೋರಾತ್ರಿ ಬಂದಿರುವ ರೈತರು ಜಾತ್ರೆಯ ಮೈದಾನದಲ್ಲಿ ನೆಲೆಯೂರಿದ್ದಾರೆ.
ಮಕರ ಸಂಕ್ರಾತಿಯ ಮರುದಿನ ಪ್ರತಿವರ್ಷ ಕೆಂಗಲ್​ ದನಗಳ ಜಾತ್ರೆ ನಡೆಯುತ್ತದೆ. ಈ ಭಾಗದಲ್ಲಿ ಅಯ್ಯನಗುಡಿ ದನಗಳ ಜಾತ್ರೆ ಎಂದೇ ಇದು ಪ್ರಸಿದ್ಧವಾಗಿದೆ. ಈ ಬಾರಿ ಕೋವಿಡ್​ ಹಿನ್ನೆಲೆಯಲ್ಲಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಬ್ರಹ್ಮರಥೋತ್ಸವ ಸೇರಿ ಧಾಮಿರ್ಕ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಮಾಡಲು ಅನುಮತಿ ನೀಡಿತ್ತು.
ವಾಪಸ್​ ಕಳಿಸಿದ್ದ ದೇಗುಲ ಅಧಿಕಾರಿಗಳು:ಕರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದ್ದರಿಂದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಗಳು ಭಾನುವಾರ ಮತ್ತು ಸೋಮವಾರ ದನಗಳೊಂದಿಗೆ ಬಂದಿದ್ದ ರೈತರನ್ನು ವಾಪಸು ಕಳಿಸಿದ್ದರು. ಪೊಲೀಸರು ಕೂಡ ಇದಕ್ಕೆ ಸಹಕರಿಸಿದ್ದರು.
ಮಂಗಳವಾರ ಸಂಜೆ ವೇಳೆಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದ ರೈತರು ಫೋನ್​ನಲ್ಲಿ ಪರಸ್ಪರ ಮಾಹಿತಿ ರವಾನಿಸಿಕೊಂಡು ರಾಸುಗಳೊಂದಿಗೆ ಜಾತ್ರಾಸ್ಥಳಕ್ಕೆ ಬಂದಿದ್ದಾರೆ. ದೇವಾಲಯದ ಅಕ್ಕಪಕ್ಕ ಹಾಗೂ ಹಿಂಭಾಗದಲ್ಲಿರುವ ಖಾಸಗಿ ಜಾಗದಲ್ಲಿ ರಾಸುಗಳನ್ನು ಕಟ್ಟಿ ಮಾರಾಟಕ್ಕಿಟ್ಟಿದ್ದಾರೆ. ಖರೀದಿದಾರರು ಕೂಡ ಬಂದು, ಎಂದಿನಂತೆ ದನಗಳ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನು ತಡೆಯಲು ಸಾಧ್ಯವಾಗದೆ ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲೂಕು ಆಡಳಿತ ನಿಸ್ಸಾಹಾಯಕವಾಗಿ ನಿಂತಿದೆ.
ದೇವಾಲಯದ ಆವರಣದಲ್ಲಿ ಅವಕಾಶ ಇಲ್ಲ:ಜಿಲ್ಲಾಡಳಿತದ ನಿರ್ಧಾರಕ್ಕೆ ವಿರುದ್ಧವಾಗಿ ರೈತರು ಬಂದರೂ ದೇಗುಲದ ಆಡಳಿತ ಮಂಡಳಿ ಜಾಣಕುರುಡು ಪ್ರದರ್ಶಿಸುತ್ತಿದೆ. ತನ್ಮೂಲಕ ತಮ್ಮದೇ ನಿಯಮಗಳನ್ನು ಗಾಳಿಗೆ ತೂರಲಿ ಅವಕಾಶ ಮಾಡಿಕೊಟ್ಟಿದೆ.
ದೇವಾಲಯದ ಆವರಣದಲ್ಲಿ ಯಾವ ದನಗಳನ್ನು ಸಹ ಕಟ್ಟಿ ಹಾಕಿಲ್ಲ. ಅದಕ್ಕೆ ಅವಕಾಶವನ್ನು ನೀಡಿಲ್ಲ. ದೇವಾಲಯದ ಹೊರಗಡೆ ಖಾಸಗಿ ಜಾಗದಲ್ಲಿ ದನಕರುಗಳನ್ನು ಮಾರಾಟ ಮಾಡುತ್ತಿರುವ ಸಂಗತಿ ನಮಗೆ ಸಂಬಂಧಿಸುವುದಿಲ್ಲ.| ತಮ್ಮಣ್ಣಗೌಡದೇವಾಲಯದ ಕಾರ್ಯನಿರ್ವಾಹಕಧಿಕಾರಿ
ಕೆಂಗಲ್​ ದನಗಳ ಜಾತ್ರೆಯನ್ನು ರದ್ದುಪಡಿಸಲಾಗಿದೆ. ಮಾಹಿತಿ ಕೊರತೆಯಿಂದ ಭಾನುವಾರ, ಸೋಮವಾರ ಕೆಲ ರೈತರು ರಾಸುಗಳನ್ನು ಕರೆತಂದಿದ್ದರು. ಅವರನ್ನು ವಾಪಸು ಕಳಿಸಲಾಗಿದೆ. ಮಂಗಳವಾರ ಸಂಜೆ ದಿಢೀರನೆ ಜಾತ್ರೆ ಸೇರಿರುವ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಖಾಸಗಿ ಜಾಗದಲ್ಲಿ ಅವಕಾಶ ನೀಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.| ಎಲ್​. ನಾಗೇಶ್​ಚನ್ನಪಟ್ಟಣ ತಹಸೀಲ್ದಾರ್​
ಕಾಳಿ ಮಠದ ಸ್ವಾಮೀಜಿ ಬಂಧನ: ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ತೀವಿ… ನನ್ನ ಹೇಳಿಕೆಗೆ ಈಗಲೂ ಬದ್ಧ…

ಸ್ನ್ಯಾಪ್‌ಚಾಟ್​ಗೆ ನಿನ್ನ ಬೆತ್ತಲೆ ವಿಡಿಯೋ ಹಾಕು, ಇಲ್ಲಾಂದ್ರೆ ನಾನೇ ಬೇರೆಯವರಿಗೆ ಕಳಿಸಿ ಬಿಡ್ತೀನಿ… ಪತ್ನಿಗೆ ಹಿಂಸಿಸಿದ ಗಂಡ

ದೇವನಹಳ್ಳಿಯ ಬಾಡಿಗೆ ಮನೇಲಿ ಗೃಹಿಣಿ ಜತೆ ಯುವಕ ಆತ್ಮಹತ್ಯೆ: ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಬಯಲಾಯ್ತು ಭಯಾನಕ ರಹಸ್ಯ

ಸ್ನ್ಯಾಪ್‌ಚಾಟ್​ಗೆ ನಿನ್ನ ಬೆತ್ತಲೆ ವಿಡಿಯೋ ಹಾಕು, ಇಲ್ಲಾಂದ್ರೆ ನಾನೇ ಬೇರೆಯವರಿಗೆ ಕಳಿಸಿ ಬಿಡ್ತೀನಿ… ಪತ್ನಿಗೆ ಹಿಂಸಿಸಿದ ಗಂಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 7 =
Remember me
