ದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆ ಮುಂದೆ ಮೌನ ಪ್ರತಿಭಟನೆ ನಡೆಸಲು ಮುಂದಾದ ಚನ್ನಪಟ್ಟಣ ಮೂಲದ ಕಾಂಗ್ರೆಸ್​ ಮುಖಂಡೆ ನವ್ಯಶ್ರೀ ರಾವ್​ಗೆ ಅವಕಾಶ ಸಿಕ್ಕಿಲ್ಲ. ಈ ಕುರಿತು ಸುದ್ದಿಗಾರರೊಂದಿಗೆ ನವ್ಯಶ್ರೀ ಅಸಮಾಧಾನ ಹೊರಹಾಕಿದ್ದಾರೆ.
‘ಶುಕ್ರವಾರ ಸಂಜೆ ದೆಹಲಿಗೆ ಬಂದ್ವಿ. ಶನಿವಾರ ಅಮಿತ್​ ಶಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋದ್ವಿ. ಅಮಿತ್​ ಶಾ ಅವರು ಮನೆಯಲ್ಲಿದ್ದರೂ ನಮಗೆ ಅವಕಾಶ ಸಿಗಲಿಲ್ಲ. ಆ.15 ರಂದು ಕೂಡ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಹೋಗುವಾಗಲೂ ನಮ್ಮನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸ ಕರ್ನಾಟಕದಲ್ಲಿ ಆಗಿತ್ತು.
ಅಮಿತ್​ ಶಾ ಅವರ ಮನೆ ಬಳಿ ಹೋದಾಗ ನಮ್ಮನ್ನು ಥಾಣಾ ಪೊಲೀಸ್​ ಠಾಣೆಗೆ ಕರೆದೊಯ್ದಿದರು. ಬೇಡ ಮೇಡಂ ಎಂದು ಅವರು ಮನವಿ ಮಾಡಿದ್ರು. ಆಗ ನಾನು ಎಫ್​ಐಆರ್ ಪ್ರತಿ ಕೊಟ್ಟು ನನಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದೆ. ರಾಜ್ಯದಲ್ಲಿ ಅದರಲ್ಲೂ ಬೆಳಗಾವಿ ಪೊಲೀಸ್​ ಇಲಾಖೆಯು ಪ್ರಕರಣದ ದಿಕ್ಕು ತಪ್ಪಿಸುತ್ತಿದೆ. ರಾಜಕುಮಾರ್ ಟಾಕಳೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಯನ್ನ ಬಂಧಿಸಿಲ್ಲ. ಹಾಗಾಗಿ ಪೊಲೀಸ್​ ಇಲಾಖೆಯ ವೈಫಲ್ಯವನ್ನ ಖಂಡಿಸಿ ಹೈಯರ್​ ಮಟ್ಟದಲ್ಲಿ ನ್ಯಾಯ ಕೇಳಲು ದೆಹಲಿಗೆ ಆಗಮಿಸಿದ್ದೇನೆ ಎಂದು ವಿವರಿಸಿದರು.
ರಾಜಕುಮಾರ್​ ಟಾಕಳೆ ಒಬ್ಬ ಅತ್ಯಾಚಾರ ಕೇಸ್​ನ ಆರೋಪಿ. ನನ್ನ ಖಾಸಗಿ ವಿಡಿಯೋ ಹರಿಯಬಿಟ್ಟು ಮಾನಹಾನಿ ಮಾಡಿದ್ದಾನೆ. ಆದರೂ ಈತನನ್ನು ಬಂಧಿಸಿಲ್ಲ. ಇನ್ನು ನಟೋರಿಯಸ್​, ಟೆರರಿಸ್ಟ್​ಗಳನ್ನು ಹೇಗೆ ಬಂಧಿಸ್ತಾರೆ? ಎಂದು ಪೊಲೀಸ್​ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ ನವ್ಯಶ್ರೀ, ಆರೋಪಿಯ ಬಂಧನ ಆಗದೆ ಇರೋದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗ್ತಿದೆ ಎಂದರು.
ಅಮಿತ್​ ಶಾ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ. ಆದರೆ ಇನ್ನೂ ದಿನಾಂಕ ನಿಗದಿ ಆಗಿಲ್ಲ. ನವ್ಯಶ್ರೀಗೆ ಆದತಂಹ ಅನ್ಯಾಯ ಇನ್ಯಾವ ಹೆಣ್ಣಿಗೂ ಆಗಬಾರದು. ಪ್ರತಿಯೊಬ್ಬರು ದೆಹಲಿಗೆ ಬಂದು ನ್ಯಾಯ ಪಡೆಯುವ ಸ್ಥಿತಿ ನಿರ್ಮಾಣ ಆಗಬಾರದು. ರಾಜ್ಯದಲ್ಲೇ ನ್ಯಾಯ ಸಿಗುವಂತಾಗಬೇಕು ಎಂದರು.
ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ ಕಾಂಗ್ರೆಸ್​ ಕಾರ್ಯಕರ್ತೆ ನವ್ಯಶ್ರೀ ರಾವ್​

ಹನಿಟ್ರ್ಯಾಪ್​ ಕೇಸ್​ಗೆ ಮತ್ತೊಂದು ಟ್ವಿಸ್ಟ್​ ಕೊಟ್ಟ ನವ್ಯಶ್ರೀ: ಚನ್ನಪಟ್ಟಣದ ಮಹಾನಾಯಕನೇ ಪ್ರಕರಣದ ಸೂತ್ರಧಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seventeen =
Remember me
