ಹಾಸನ:ದೊಡ್ಡಪ್ಪನ ಮಗನ ಜತೆ ಶಾಲೆಗೆ ತೆರಳುತ್ತಿದ್ದ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಳೆ ನೀರಲ್ಲಿ ಬೈಕ್​ ಸಮೇತ ಕೊಚ್ಚಿಹೋಗಿ ದುರಂತ ಅಂತ್ಯ ಕಂಡ ಘಟನೆ ಚನ್ನರಾಯಪಟ್ಟಣ ತಾಲೂಕು ದಡ್ಡಿಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ.
ಹೆಗ್ಗಡಗೆರೆ ಗ್ರಾಮದ ರಾಜಾಬೋವಿ ಅವರ ಮಗಳು ರಂಜಿತಾ(11) ಮೃತ ದುರ್ದೈವಿ. ದಡ್ಡಿಹಳ್ಳಿಕೆರೆ ಕೋಡಿ ಬಿದ್ದು ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಸಿಲುಕಿ ದುರಂತ ಅಂತ್ಯ ಕಂಡಿದ್ದಾಳೆ. ತನ್ನ ದೊಡ್ಡಪ್ಪನ ಮಗನ ಜತೆ ಬೈಕ್​ನಲ್ಲಿ ಶಾಲೆಗೆ ತೆರಳುತ್ತಿದ್ದಾಗ, ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ದಾಟುತ್ತಿದ್ದಾಗ ಬೈಕ್​ನೊಂದಿಗೆ ಕೊಚ್ಚಿಹೋದಳು. ಅದೃಷ್ಟವಶಾತ್​ ಆಕೆಯ ದೊಡ್ಡಪ್ಪನ ಮಗ ಅಪಾಯದಿಂದ ಪಾರಾಗಿದ್ದಾನೆ. ಮಗಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಶಾಲೆಯಲ್ಲೂ ರಂಜಿತಾ ಸಾವಿನ ಸುದ್ದಿ ಕೇಳಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಕಂಬನಿ ಮಿಡಿದಿದೆ.
ಸಮ್ಮಿಶ್ರ ಸರ್ಕಾರ ಬಂದ್ರೆ ನಾನು ಸಿಎಂ ಆಗಲ್ಲ… ಚಾಮುಂಡಿ ಸನ್ನಿಧಿಯಲ್ಲೇ ಘೋಷಿಸಿ ಎಚ್​ಡಿಕೆ ಕೊಟ್ಟ ಕಾರಣ ಹೀಗಿದೆ…

ಹಾಸನಾಂಬೆ ದೇವಾಲಯದಲ್ಲಿ ಹೃದಯಾಘಾತದಿಂದ ಭಕ್ತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
