ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ನಗರದಲ್ಲಿದ್ದಾಳೆ ಮಹಾವಂಚಕಿ. ಕನ್ನಡ ಸಿನಿಮಾ ನಟನೊಬ್ಬನ ಕೃಪೆಯೂ ಈಕೆ ಮೇಲಿದೆ. ಇವಳ ಬಲೆಗೆ ಬಿದ್ದವರ ಬದುಕು ಬೀದಿಪಾಲಾಗೋದು ಗ್ಯಾರಂಟಿ… ಈ ಪ್ರಕರಣದಲ್ಲಿ ಸಿಕ್ಕಿ ಮೋಸ ಹೋದವರ ಬಾಯಲ್ಲಿ ಹೊರ ಬರುತ್ತೆ ಈ ಮಾತು.
ಅಂದಹಾಗೆ ವಂಚನೆ ಆರೋಪ ಹೊತ್ತ ಮಹಿಳೆ ಹೆಸರು ಅರ್ಚನಾ. ಇವಳ ಜತೆಗೆ ಅರ್ಚನಾ ಸಹೋದರ ಹರೀಶ್​, ಶಿವಕುಮಾರ್​ ಮತ್ತು ಶ್ರೀಪತಿ ಅವರೂ ಆರೋಪಿಗಳಾಗಿದ್ದಾರೆ. ಈ ನಾಲ್ವರು ಸೇರಿ ಮಾಡಿದ ಮಹಾವಂಚನೆಯನ್ನ ಕೇಳಿದ್ರೆ ಬೆಚ್ಚಿಬೀಳ್ತೀರಿ.ಇದನ್ನೂ ಓದಿರಿಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!
ಬೆಂಗಳೂರು, ಹೈದರಬಾದ್, ಮುಂಬೈನಲ್ಲಿ ಅರ್ಚನಾ ತನ್ನ ವಂಚನೆಯ ಬಲೆಯನ್ನ ಬೀಸಿದ್ದಳು. ನನ್ನ ಬಳಿ ರೈಸ್ ಪುಲ್ಲಿಂಗ್ ಚೆಂಬು ಇತ್ತು. ಅದನ್ನು ವಿದೇಶದ ವ್ಯಕ್ತಿಗೆ ಮಾರಾಟ ಮಾಡಿದ್ದು, 6 ಲಕ್ಷ 36 ಸಾವಿರ ಕೋಟಿ ರೂಪಾಯಿ ಆರ್​ಬಿಐಗೆ ಬಂದಿದೆ. ಆ ಹಣವನ್ನ ಪಡೆಯಲು 240 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಬೇಕು. ಟ್ಯಾಕ್ಸ್ ಕಟ್ಟಲು ಹಣವಿಲ್ಲ. ನೀವು ಕೊಟ್ಟರೆ ತೆರಿಗೆ ಪಾವತಿಸಿ ಆರ್​ಬಿಐ ನಿಂದ ಎಲ್ಲ ಹಣವನ್ನೂ ಪಡೆಯುವೆ. ಆ ಕೂಡಲೇ ನಿಮ್ಮ ಹಣವನ್ನ ವಾಪಸ್​ ಮಾಡುವೆ ಎಂದು ಕಥೆ ಹೇಳಿ ಹಲವರ ಬಳಿ ಕೋಟಿ ಕೋಟಿ ಹಣ ಪೀಕಿದ್ದಾಳೆ. ಅದೇ ರೀತಿ ಬೆಂಗಳೂರು ಮೂಲದ ಉದ್ಯಮಿ ವಂಶಿಕೃಷ್ಣ ಬಳಿ 2.2.ಕೋಟಿ ಹಣ ಪಡೆದು ಕೈ ಎತ್ತಿದ್ದಾಳೆ ಎಂದು ವಂಶಿಕೃಷ್ಣ ಚಿಕ್ಕಬಳ್ಳಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಚನಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೇ ವೇಳೆ ವಂಚಕಿಗೆ ಸ್ಯಾಂಡಲ್​ವುಡ್ ನಟನೊಬ್ಬನ ಸಾಥ್ ಇದೆ ಎಂಬ ಮಾತು ಕೇಳಿಬಂದಿದೆ. ಆದರೆ, ದೂರಿನಲ್ಲಿ ಆ ನಟನ ಹೆಸರು ಪ್ರಸ್ತಾಪ ಆಗಿಲ್ಲ.(ದಿಗ್ವಿಜಯ ನ್ಯೂಸ್​, ಚಿಕ್ಕಬಳ್ಳಾಪುರ)
ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಪ್ಪಲಿ ಹಾರ ಹಾಕಿ ತಲೆ ಬೋಳಿಸಿ ಮೆರವಣಿಗೆ!

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ಬೆಂಗಳೂರಲ್ಲಿ ಗ್ಯಾಂಗ್​ ರೇಪ್​, ಗುಪ್ತಾಂಗಕ್ಕೆ ಬಿಯರ್​ ಬಾಟಲಿ ಇಟ್ಟು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸರಿಂದ ಗುಂಡೇಟು!

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
