ಚಿಕ್ಕಬಳ್ಳಾಪುರ:ಶೃಂಗೇರಿಯಲ್ಲಿ ಹೆತ್ತಮ್ಮನ ಕುಮ್ಮಕ್ಕಿನಿಂದಲೇ ಬಾಲಕಿ ಮೇಲೆ 37 ಜನರಿಂದ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ್ದು, ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ.
ಮಂಚೇನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯ ಗ್ರಾಮವೊಂದರ 14 ವರ್ಷದ ಬಾಲಕಿಯನ್ನ ಪರಿಚಿತ ಮಹಿಳೆಯೊಬ್ಬಳು ವೇಶ್ಯಾವಾಟಿಕೆಗೆ ದೂಡಿದ್ದು, ಇದೀಗ ಆಕೆ 5 ತಿಂಗಳ ಗರ್ಭಿಣಿ. ಬಾಲಕಿ ದಲಿತ ಸಮುದಾಯಕ್ಕೆ ಸೇರಿದ್ದು, ಈಕೆಯ ತಂದೆ-ತಾಯಿ ಕುಡಿತ ಚಟ ಅಂಟಿಸಿಕೊಂಡಿದ್ದರು. ತಂದೆ-ತಾಯಿ ನಡುವೆ ಮನೆಯಲ್ಲಿ ಜಗಳ ಮಾಮೂಲಿಯಾಗಿತ್ತು. ಈ ಗ್ರಾಮಕ್ಕೆ ಸಂಬಂಧಿಕರ ಮನೆಗೆಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗೌರಿ ಎಂಬಾಕೆ ಬರುತ್ತಿದ್ದಳು. ಬಾಲಕಿಯ ಪಾಲಕರು ಕುಡಿದ ಅಮಲಿನಲ್ಲಿ ಕಿತ್ತಾಡುವುದನ್ನೇ ಬಂಡವಾಳ ಮಾಡಿಕೊಂಡ ಗೌರಿ, ಬಾಲಕಿಯನ್ನ ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ಸಮಾಧಾನ ಮಾಡುವ ನೆಪದಲ್ಲಿ ತಿಂಡಿ ಖರೀದಿಸಲು ಬಾಲಕಿಗೆ ಹಣ ಕೊಟ್ಟು ಆಪ್ತತೆ ಬೆಳೆಸಿಕೊಂಡಿದ್ದಳು. ಆಮೇಲೆ ಆಗಿದ್ದೆಲ್ಲವೂ ದುರಂತ.ಇದನ್ನೂ ಓದಿರಿಊರಿಗೆ ತಂಗಿಯ ಶವ ತರುತ್ತಿದ್ದ ಅಣ್ಣನ ಪ್ರಾಣವನ್ನೂ ಮಾರ್ಗಮಧ್ಯೆ ಹೊತ್ತೊಯ್ದ ಜವರಾಯ!
ನಂತರದ ದಿನಗಳಲ್ಲಿ ಬೇರೆಯವರೊಂದಿಗೆ ಮಲಗಿದರೆ ಹಣ ಸಿಗುತ್ತೆ ಎಂದು ಬಾಲಕಿಯ ತಲೆಕೆಡಿಸಿದ ಗೌರಿ, ಪುರುಷರೊಂದಿಗೆ ಬಿಟ್ಟಿದ್ದಾಳೆ. ಹೀಗೆ ಐದಾರು ತಿಂಗಳಿಂದ ನಿರಂತರವಾಗಿ ಗ್ರಾಮದ ಆರೇಳು ಮಂದಿ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಗೌರಿ ಆ ವೇಳೆ ಬಾಲಕಿಗೆ 200ರಿಂದ 300 ರೂಪಾಯಿ ಕೊಡುತ್ತಿದ್ದಳಂತೆ. ಆ ಹಣದಲ್ಲಿ ಆಕೆಯ ಅಪ್ಪ-ಅಮ್ಮ ಸ್ವಲ್ಪ ಪಡೆದು, ಉಳಿದದ್ದನ್ನು ಬಾಲಕಿಗೆ ಕೊಡುತ್ತಿದ್ದರು. ಮಗಳನ್ನು ವೇಶ್ಯಾವಾಟಿಕೆಗೆ ದೂಡಿರುವುದು ಹೆತ್ತವರಿಗೆ ಗೊತ್ತಿದ್ದರೂ ಹಣಕ್ಕಾಗಿ ಸುಮ್ಮನಿದ್ದರಂತೆ.
ಇತ್ತೀಚಿಗೆ ಬಾಲಕಿಯ ತಾಯಿಗೆ ಕರೊನಾ ಬಂದಿದ್ದ ಕಾರಣ ಮುದುಗೆರೆ ಗ್ರಾಮದ ಸಂಬಂಧಿಕರೊಬ್ಬರ ಮನೆಗೆ ಬಾಲಕಿಯನ್ನು ಪಾಲಕರು ಕಳುಹಿಸಿದ್ದರು. ಅಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದ ಬಾಲಕಿಯನ್ನ ಆಶಾ ಕಾರ್ಯಕರ್ತೆಯರು ಪರಿಶೀಲಿಸಿದ್ದು, ಆ ವೇಳೆ ಬಾಲಕಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಈ ಸುದ್ದಿಯನ್ನ ಆಶಾ ಕಾರ್ಯಕರ್ತೆಯು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ತಿಳಿಸುತ್ತಿದ್ದಂತೆ ಗುರುವಾರ ಸಂಜೆ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ 5 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ. ಸದ್ಯ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಬಾಲಕಿ ಕೊಟ್ಟ ದೂರಿನಂತೆ ಆರೋಪಿಗಳಾದ ಗೌರಿ ದೊಡ್ಡಬ್ಯಾಲ, ಮೂರ್ತಿ, ಬಶೀರ್, ದೇವಾ, ವಿನೂದ್ ಎಂಬುವವರ ವಿರುದ್ಧ ಕೇಸ್​ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್, ಚಿಕ್ಕಬಳ್ಳಾಪುರ)
ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಹೊಸ ಮನೆಗೆ ಬಂದ ರಾಧಿಕಾ-ಯಶ್​ ದಂಪತಿ: ಗೃಹಪ್ರವೇಶ ಸಡಗರದ ಫೋಟೋಗಳು ಇಲ್ಲಿವೆ

ಊರಿಗೆ ತಂಗಿಯ ಶವ ತರುತ್ತಿದ್ದ ಅಣ್ಣನ ಪ್ರಾಣವನ್ನೂ ಮಾರ್ಗಮಧ್ಯೆ ಹೊತ್ತೊಯ್ದ ಜವರಾಯ!

ಇಬ್ಬರು ಸ್ವಾಮೀಜಿಗಳ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ಸಿಡಿಮಿಡಿ!

ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
