ಚಿಂತಾಮಣಿ:ತಾಯಿಯನ್ನ ಸಾಕ್ಷಾತ್​ ದೇವರು ಎಂದು ಪೂಜಿಸುವ ನಾಡಿಲ್ಲಿ ಕ್ರೂರಿಯೊಬ್ಬಳು ಆಗ ತಾನೇ ಹುಟ್ಟಿದ ಹಸುಗೂಸನ್ನೇ ಆಸ್ಪತ್ರೆ ಶೌಚಗೃಹದ ಕಿಟಕಿಗೆ ನೇತು ಹಾಕಿ ಕೊಂದ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿದೆ.
ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶೌಚಗೃಹದಲ್ಲಿ ಜು.3ರಂದು ಅರ್ಧ ಭಾಗ ಕಿಟಕಿ ಒಳಗೆ ಮತ್ತು ಅರ್ಧ ಭಾಗ ಕಿಟಕಿ ಹೊರಗೆ ಹಗ್ಗದಲ್ಲಿ ನೇತಾಡುವ ಸ್ಥಿತಿಯಲ್ಲಿ ನವಜಾತಶಿಶು ಇತ್ತು. ಶೌಚಗೃಹ ಸ್ವಚ್ಛಗೊಳಿಸಲು ಹೋದ ಸಿಬ್ಬಂದಿ ಕಿಟಕಿಯಲ್ಲಿ ಮಗು ನೇತಾಡುತ್ತಿರುವುದನ್ನು ನೋಡಿ ವೈದ್ಯರಿಗೆ ಮಾಹಿತಿ ನೀಡಿದ್ದು, ಕೂಡಲೇ ಆ ಮಗುವುನ್ನ ಎತ್ತಿಕೊಂಡು ಬದುಕಿಸಲು ಯತ್ನಿಸಲಾಯಿತ್ತಾದರೂ ಉಸಿರಾಡಲು ಸಾಧ್ಯವಾಗದೆ ಮಗು ಮೃತಪಟ್ಟಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು, ಆಸ್ಪತ್ರೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲಿಸಲಾಗಿ ಶೌಚಗೃಹದ ಬಳಿ ಇಬ್ಬರು ಮಹಿಳೆಯರು ಮತ್ತು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ. ಹಳದಿ ಬಣ್ಣದ ಸೀರೆಯನ್ನುಟ್ಟಿರುವ ಗರ್ಭಿಣಿ ಶೌಚಗೃಹಕ್ಕೆ ತೆರಳಿದ್ದು ಹೆಚ್ಚಿನ ಸಮಯ ಒಳಗೆ ಇದ್ದಾಳೆ. ಬೇರೆಯವರು ಬಂದರೂ ಬಾಗಿಲು ತೆರೆದಿರಲಿಲ್ಲ. ಈ ದೃಶ್ಯದ ಆಧಾರದ ಮೇಲೆ ದಂಪತಿಯನ್ನು ಪತ್ತೆ ಹಚ್ಚಿ, ವಿಚಾರಿಸಿದಾಗ ಮಾಹಿತಿ ಹೊರ ಬಂದಿದೆ.

ನವಜಾತು ಶಿಶುವನ್ನು ನೇಣು ಹಾಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧ ತಾಯಿ ಮಮತಾ(29), ತಂದೆ ವೇಣುಗೋಪಾಲರೆಡ್ಡಿ (35)ಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಬಾಗೇಪಲ್ಲಿ ತಾಲೂಕಿನ ಚಾಕವೇಲು ನಿವಾಸಿಗಳು. ಮಗು ಹುಟ್ಟಿದ ತಕ್ಷಣ ಇಬ್ಬರೂ ಸೇರಿಕೊಂಡು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವೇಳೆ ಯಾವ ಕಾರಣಕ್ಕೆ ಕೊಲೆ ಮಾಡಿದ್ದು ಎಂಬುದನ್ನೂ ಬಾಯ್ಬಿಟ್ಟಿದ್ದಾರೆ.
ಮುಜುಗರದಿಂದ ಕೊಲೆ:8 ತಿಂಗಳು ಗರ್ಭಿಣಿಯಾಗಿದ್ದ ವಿಚಾರವನ್ನು ಮಮತಾ ಯಾರಿಗೂ ತಿಳಿಸಿರಲಿಲ್ಲ. ದಿಢೀರನೇ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಬಂದಾಗ ಶೌಚಗೃಹಕ್ಕೆ ಹೋಗಿ, ಎರಡು ಬಾರಿ ಕುಳಿತು ಎದ್ದಾಗ ಹೆರಿಗೆಯಾಯಿತು. ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಭಾವನೆಯಲ್ಲಿ ಗಂಡನಿಗೆ ತಿಳಿಸಿ ಕೊಲೆ ಮಾಡಲಾಯಿತು ಎಂದು ತನಿಖಾಧಿಕಾರಿಗಳು ಎದುರು ಬಾಯ್ಬಿಟ್ಟಿದ್ದಾಳೆ.
ತಾನು ಮೂರು ತಿಂಗಳ ಗರ್ಭಿಣಿ, ಹೊಟ್ಟೆನೋವು ಬಂದಿದೆ ಎಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಳು. ಬಳಿಕ ಶೌಚಗೃಹಕ್ಕೆ ಹೋಗಿ ಬಂದು ಸಮಸ್ಯೆ ಏನು ಇಲ್ಲ, ಮನೆಗೆ ಹೋಗೋಣ ಎಂದಾಗ ಆಸ್ಪತ್ರೆಯಿಂದ ಊರಿಗೆ ವಾಪಸ್ ಬರಲಾಯಿತು. ಪೊಲೀಸರು ಬಂದಾಗಲೇ ಮಗುವಿನ ಕೊಲೆಯ ವಿಷಯ ಗೊತ್ತಾಗಿದೆ ಎಂದು ವೇಣುಗೋಪಾಲರೆಡ್ಡಿ ತಿಳಿಸಿದ್ದಾನೆ. ದಂಪತಿಗೆ ಈಗಾಗಲೇ ಆರು ವರ್ಷದ ಗಂಡು ಮಗು ಇದೆ. ಮತ್ತೆ ಎರಡನೇ ಬಾರಿ ಗರ್ಭಿಣಿಯಾಗಿರುವುದನ್ನು ರಹಸ್ಯವಾಗಿಡಲಾಗಿತ್ತು ಎನ್ನಲಾಗಿದೆ.
ಸಿಸಿ ಕ್ಯಾಮರಾದಲ್ಲಿ ದಂಪತಿ, ಇವರೊಂದಿಗೆ ಬಂದಿದ್ದ ಮಹಿಳೆ ಸೇರಿ ಮೂವರ ನಡೆಯೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೂರ್ವ ಯೋಜನೆಯ ಪ್ರಕಾರ ಶೌಚಗೃಹದಲ್ಲಿ ನವಜಾತ ಶಿಶುವನ್ನು ಕೊಲ್ಲಲಾಯಿತೇ? ಇದರಲ್ಲಿ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆಯೇ? ಎಂಬ ಅನುಮಾನ ಮೂಡಿದೆ. ಪೊಲೀಸರು ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four + 12 =
Remember me
