ಚಿಕ್ಕಬಳ್ಳಾಪುರ/ಚಿಂತಾಮಣಿ:ಅಲ್ಪ ಪ್ರಮಾಣದಲ್ಲಿ ಪಾವತಿಯಾದ ಬ್ಯಾಂಕಿನ ಸ್ವೀಕೃತಿ ಚಲನ್​ಗಳನ್ನು ತಿದ್ದಿರುವ ಗುಮಾಸ್ತನೊಬ್ಬ 1.57 ಕೋಟಿ ರೂ. ವಂಚಿಸಿರುವ ಪ್ರಕರಣ ಚಿಂತಾಮಣಿ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಚಿಂತಾಮಣಿ ತಾಲೂಕಿನ ಕರಿಯಪಲ್ಲಿಯ ಖಾದಿ ಗ್ರಾಮೋದ್ಯಮ ಸಂಘದ ಕಾತಿರ್ಕ್​(38) ಆರೋಪಿ. ವಂಚನೆ ಬಗ್ಗೆ ಸಂಘದ ಮುಖ್ಯಸ್ಥ ಎನ್​.ಶ್ರೀರಾಮರೆಡ್ಡಿ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ. 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಖಾದಿ ಗ್ರಾಮೋದ್ಯಮ ಸಂಘದ ನೇತೃತ್ವದಲ್ಲಿ ರೇಷ್ಮೆ ಉತ್ಪತ್ತಿ ಮತ್ತು ಬಟ್ಟೆ ತಯಾರು ಘಟಕದ ಗುಮಾಸ್ತ ಕಾರ್ತಿಕ್​,​ ನಿಗದಿತ ದಿನದಂದು ಬ್ಯಾಂಕಿನಲ್ಲಿ ಹಣ ಪಾವತಿ ಮತ್ತು ಸ್ವೀಕೃತಿ ಜವಾಬ್ದಾರಿ ವಹಿಸಿಕೊಂಡಿದ್ದ. ಇದರ ನಡುವೆ ಇತ್ತೀಚೆಗೆ ಘಟಕದಲ್ಲಿನ ನೌಕರರಿಗೆ ವೇತನ ನೀಡಲು ಸಂಘದ ಮುಖ್ಯಸ್ಥರು, ಖಾತೆ ಹೊಂದಿರುವ ಕೆನರಾ ಬ್ಯಾಂಕಿಗೆ ಚೆಕ್​ ಕಳುಹಿಸಿದ್ದಾರೆ. ಆದರೆ, ಬ್ಯಾಂಕಿನ ವ್ಯವಸ್ಥಾಪಕರು ಖಾತೆಯಲ್ಲಿ ಹಣ ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ 1,57,16,000 ರೂ. ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಅಂದಹಾಗೇ ಹಣ ಲಪಟಾಯಿಸಲು ಈತ ರಸೀದಿಯನ್ನ ಹೇಗೆ ತಿದ್ದುಪಡಿ ಮಾಡುತ್ತಿದ್ದ ಗೊತ್ತಾ? ಇದನ್ನು ನೋಡಿ ಸಂಘದ ಪದಾಧಿಕಾರಿಗಳು ಮತ್ತು ಪೊಲೀಸರೇ ಶಾಕ್​ ಆಗಿದ್ದಾರೆ.
ರಸೀದಿಯಲ್ಲಿ ತಿದ್ದುಪಡಿ:ಕೋಟ್ಯಂತರ ರೂ. ಹಣ ಲಪಟಾಯಿಸಿದ ವಂಚಕನ ಖತರ್ನಾಕ್​ ಕೌಶಲಕ್ಕೆ ಸಂಘದ ಪದಾಧಿಕಾರಿಗಳು ಮತ್ತು ಪೊಲೀಸರೇ ಶಾಕ್​ ಆಗಿದ್ದಾರೆ. ಖಾತೆಗೆ ಕೇವಲ 1 ಸಾವಿರದಿಂದ 10 ಸಾವಿರ ರೂ. ಕಟ್ಟುವುದು, ಬಳಿಕ ಯಾರಿಗೂ ಅನುಮಾನ ಬಾರದಂತೆ ಸಾವಿರ ಲೆಕ್ಕದಲ್ಲಿನ ಅಂಕಿ-ಅಂಶಗಳಲ್ಲಿ ಸೊನ್ನೆಗಳನ್ನು, ಲಕ್ಷ ರೂ. ಪಾವತಿಯ ಪದಗಳನ್ನು ತಾನೇ ಬರೆದಿರುವ ಬ್ಯಾಂಕಿನ ಸ್ವೀಕೃತಿಯ ಚಲನ್​ಗಳನ್ನು ತೋರಿಸುವ ಮೂಲಕ ವಂಚಿಸುತ್ತಿದ್ದ. ಬ್ಯಾಂಕಿನ ಸೀಲು ಮತ್ತು ಮುದ್ರೆ ಸರಿಯಾಗಿ ಇರುತ್ತಿದ್ದ ಹಿನ್ನೆಲೆಯಲ್ಲಿ ಯಾರೂ ಅನುಮಾನ ಪಡುತ್ತಿರಲಿಲ್ಲ. ಇದರಿಂದ ನಿರಂತರವಾಗಿ ನಕಲಿ ಚಲನ್​ಗಳಲ್ಲಿ ಸಂಘದ ಹಣ ಲಪಟಾಯಿಸಿ, ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ. ಸಂಘದ ಖಾತೆಯಲ್ಲಿ ಹಣವಿಲ್ಲ. ಆದರೂ ಬ್ಯಾಂಕ್​ಗೆ ಚೆಕ್​ ಕಳುಹಿಸಿದ್ದೀರಲ್ಲಾ ಎಂದು ಬ್ಯಾಂಕಿನ ವ್ಯವಸ್ಥಾಪಕರು ಮೊಬೈಲ್​ ಕರೆ ಮಾಡಿ ತಿಳಿಸಿದಾಗಲೇ ವಂಚನೆ ಆಗಿರುವುದು ಗೊತ್ತಾಗಿದೆ.
ಬೆಕ್ಕು ಕಚ್ಚಿ ಮಹಿಳೆಯರಿಬ್ಬರು ಸಾವು! ಮೃತರಲ್ಲಿ ಒಬ್ಬಾಕೆ ವೈದ್ಯನ ಪತ್ನಿ… ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ನಾವು ಲವ್​ ಮಾಡಿದ್ದೇ ತಪ್ಪಾ? ಚಿತ್ರಹಿಂಸೆ ಕೊಡ್ತಿದ್ದಾರೆ.. ಪ್ಲೀಸ್​ ನಮ್ಮನ್ನು ಕಾಪಾಡಿ.. ಬೆಂಗಳೂರಲ್ಲಿ ಸಚಿವರ ಪುತ್ರಿ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 4 =
Remember me
