ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಂತರ ಜಿಲ್ಲಾ ವರ್ಗಾವಣೆಗಾಗಿ ವರ್ಷಗಳಿಂದ ಕಾಯುತ್ತಿದ್ದ ಪೊಲೀಸ್ ಅಧಿಕಾರಿ ಮತ್ತು ಕೆಳಹಂತದ ಸಿಬ್ಬಂದಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿಸುದ್ದಿ ನೀಡಿದೆ. 7 ವರ್ಷ ಸೇವೆ ಪೂರೈಸಿ, ಆನ್​ಲೈನ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಿರುವವರ ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟಿಸಿ ಸೋಮವಾರ ಆದೇಶ ಹೊರಡಿಸಿದೆ. ಇದು ವಿಜಯವಾಣಿ ವರದಿ ಫಲಶ್ರುತಿ.
ವರ್ಗಾವಣೆಗೆ ನಿಗದಿಪಡಿಸಿರುವ 7 ವರ್ಷ ಸೇವಾ ವಧಿಯನ್ನು 10 ವರ್ಷಕ್ಕೆ ಹೆಚ್ಚಿಸುವುದಕ್ಕೆ ಪೊಲೀಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಪತಿ-ಪತ್ನಿ ವರ್ಗಾವಣೆ ಹಾಗೂ ಆನ್​ಲೈನ್ ಪೋರ್ಟಲ್ ಪ್ರಕಾರವೇ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂಬ ವಿಚಾರವಾಗಿ ವಿಜಯವಾಣಿ ಸರಣಿ ವಿಶೇಷ ವರದಿ ಪ್ರಕಟಿಸಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತು. ಅದರಂತೆ ಸೇವಾವಧಿಯನ್ನು 7 ವರ್ಷಕ್ಕೆ ಸೀಮಿತ ಗೊಳಿಸಲಾಗಿದೆ. ಆನ್​ಲೈನ್ ಪೋರ್ಟಲ್​ನಲ್ಲೇ ವರ್ಗಾ ವಣೆ ಪ್ರಕ್ರಿಯೆ ನಡೆಸುವುದಾಗಿ ಸರ್ಕಾರ ಹೇಳಿದೆ. ದಂಪತಿ ಪ್ರಕರಣಗಳನ್ನು ಮೊದಲ ಆದ್ಯತೆಯಾಗಿ ವರ್ಗಾವಣೆಗೆ ಪರಿಗಣಿಸುವುದಾಗಿ ಆದೇಶದಲ್ಲಿ ಉಲ್ಲೇಖಿಸಿದೆ.
ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗಾವಣೆ ಸಂಬಂಧ ಹೊರಡಿಸಲಾಗಿರುವ ವರ್ಗಾವಣೆ ವಿಶೇಷ ನಿಯಮಗಳ 2022ರ ಅನುಸಾರ ಸಿಬ್ಬಂದಿಯನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆ ಮಾಡಲು ಕೆಲ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳಲು ಆದೇಶಿಸಿದೆ.
ಯಾರಿಗೆಲ್ಲ ಅವಕಾಶ?:ಸಿವಿಲ್, ಸಿಎಆರ್, ಡಿಎಆರ್​ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್​ಸ್ಪೆಕ್ಟರ್, ಸಹಾಯಕ ಪೊಲೀಸ್ ಸಬ್ ಇನ್​ಸ್ಪೆಕ್ಟರ್, ಹೆಡ್ ಕಾನ್​ಸ್ಟೇಬಲ್, ಪೊಲೀಸ್ ಕಾನ್​ಸ್ಟೇಬಲ್ ಹಾಗೂ ಲಿಪಿಕ ವೃಂದಗಳಾದ ಪ್ರಥಮ ದರ್ಜೆ, ಸಹಾಯಕ/ದ್ವಿತೀಯ ದರ್ಜೆ ಸಹಾಯಕ/ದಲಾಯತ್ ಹಾಗೂ ಸಿ ಗ್ರೂಪ್-ಡಿ ವೃಂದದ ಸಿಬ್ಬಂದಿಯನ್ನು ಪೊಲೀಸ್ ಇಲಾಖೆಯ ಒಂದು ಜಿಲ್ಲಾ/ಘಟಕದಿಂದ ಇನ್ನೊಂದು ಜಿಲ್ಲಾ/ಘಟಕಗಳಿಗೆ ಹಾಗೂ ಒಂದು ವಲಯ/ನಗರ ಘಟಕಗಳಿಂದ ಇನ್ನೊಂದು ವಲಯ ಹಾಗೂ ನಗರ ಘಟಕಗಳಿಗೆ ವರ್ಗಾಯಿಸಲು ಅವಕಾಶ ಕಲ್ಪಿಸಿದೆ.
. ಅಂತರ್ ಜಿಲ್ಲಾ/ ಘಟಕ ವರ್ಗಾವಣೆಗೆ ಆನ್​ಲೈನ್ ಪೋರ್ಟಲ್​ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
* ಘಟಕದಲ್ಲಿನ ಪ್ರತಿ ವೃಂದದಲ್ಲಿನ ಒಟ್ಟು ರಿಕ್ತಸ್ಥಾನವು ಆ ಘಟಕದಿಂದ ಇತರ ಘಟಕಗಳಿಗೆ ವರ್ಗಾವಣೆ ಹೊಂದಿ ಹೋಗುವ ಸಿಬ್ಬಂದಿಯ ರಿಕ್ತಸ್ಥಾನ ಸೇರಿ ಶೇ.15 ಕ್ಕಿಂತ ಹೆಚ್ಚಿರಬಾರದು.
* ಪ್ರತಿ ವೃಂದದಲ್ಲಿನ ಸೇವಾ ಜೇಷ್ಠತೆಯ ಆಧಾರದ ಮೇಲೆ ಮಾತ್ರ ಶೇಕಡವಾರು ಪ್ರಮಾಣದಲ್ಲಿ ಅಧಿಕೃತ ಪೋರ್ಟಲ್​ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸುವುದು.
* ಮೊದಲನೇ ಆದ್ಯತೆ ಪತಿ-ಪತ್ನಿ ಪ್ರಕರಣಕ್ಕೆ ನೀಡಲಾಗುವುದು.
* ಎಲ್ಲಾ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಉಭಯ ಘಟಕಾಧಿಕಾರಿಗಳ ನಿರಾಕ್ಷೇಪಣಾ ಪತ್ರ ಕಡ್ಡಾಯ.
* ಇಲಾಖೆ ವಿಚಾರಣೆ/ಕ್ರಿಮಿನಲ್/ನ್ಯಾಯಾಂಗ ನಡಾವಳಿಗಳನ್ನು ಪ್ರಾರಂಭಿಸಲಾಗಿದ್ದಲ್ಲಿ ಅಥವಾ ಬಾಕಿ ಇದ್ದಲ್ಲಿ ಅಥವಾ ಅಭಿಯೋಜನೆಗೊಳಿಸಲು ಉದ್ದೇಶಿಸಿದ್ದಲ್ಲಿ ಅಂತಹ ಸಿಬ್ಬಂದಿ ವರ್ಗಾವಣೆಗೆ ಅರ್ಹರಲ್ಲ.
* ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಹಾಗೂ ಘಟಕದಲ್ಲಿ ಕನಿಷ್ಠ 7 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸಿಬ್ಬಂದಿ (ಮುಂಬಡ್ತಿ ಹುದ್ದೆಯಲ್ಲಿರುವ ಸಿಬ್ಬಂದಿ) ಮಾತ್ರ ವರ್ಗಾವಣೆಗೆ ಅರ್ಹರಾಗಿರುತ್ತಾರೆ.( ಮಾಜಿ ಸೈನಿಕ ಪ್ರಕರಣದಲ್ಲಿ ಕನಿಷ್ಠ 3 ವರ್ಷಗಳು).
* ಜೇಷ್ಠತೆಯನ್ನು ಬಿಟ್ಟುಕೊಡುವ ಷರತ್ತಿಗೊಳಪಟ್ಟು ವರ್ಗಾವಣೆ.
* ಮೊದಲ ಕೆಜಿಐಡಿ ಸಂಖ್ಯೆಯನ್ನು ಸದರಿ ನೌಕರನ ಅಧಿಕೃತ ಐಡಿಯಾಗಿ (ಎಂಪ್ಲಾಯ್ ಐಡಿ) ಪರಿಗಣಿಸಿದ್ದು, ಆ ಸಂಖ್ಯೆಯಿಂದ ಸಲ್ಲಿಸಲಾದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.
* ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮೊದಲ ಅಧಿಕೃತ ಅರ್ಜಿಯನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುವುದು.
*ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮೊದಲ ಅಧಿಕೃತ ಅರ್ಜಿಯನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುವುದು.
*ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಹುದು ಅಥವಾ ಪರಿಗಣಿಸದೇ ಇರಬಹುದು.
*ಅಂತರ ಜಿಲ್ಲಾ/ಅಂತರ ಜೇಷ್ಠತಾ ಘಟಕ ವರ್ಗಾವಣೆಯನ್ನು ಸಾಮಾನ್ಯ ವರ್ಗಾವಣೆಯ ಸಂದರ್ಭದಲ್ಲಿ ಮಾತ್ರ ಮಾಡಲಾಗುವುದು.
* ಪೊಲೀಸ್ ಸಿಬ್ಬಂದಿ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಮಾಡಲು ಪೊಲೀಸ್ ಮಹಾ ನಿರ್ದೇಶಕರು ಮಾತ್ರ ಸಕ್ಷಮ ಪ್ರಾಧಿಕಾರಿ
ಒಂದೇ ಕಡೆ 5 ವರ್ಷಇರುವವರ ಎತ್ತಂಗಡಿ : ಒಂದೇ ಸ್ಥಳದಲ್ಲಿ ಐದು ವರ್ಷ ಸೇವೆ ಪೂರೈಸಿರುವ ಪೊಲೀಸ್ ಕಾನ್​ಸ್ಟೇಬಲ್​ನಿಂದ ಸಹಾಯಕ ಸಬ್ ಇನ್​ಸ್ಪೆಕ್ಟರ್​ವರೆಗೆ ಎಲ್ಲರನ್ನೂ ವರ್ಗಾವಣೆಗೊಳಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ಆದೇಶಿಸಿದ್ದಾರೆ. ಸಿಎಂ ಸೂಚನೆಯ ಹಿನ್ನೆಲೆಯಲ್ಲಿ 5 ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವವರನ್ನು ವರ್ಗಾವಣೆಗೊಳಿಸುವಂತೆ ಡಿಜಿಪಿ ಆದೇಶದಲ್ಲಿ ಸೂಚಿಸಿದ್ದಾರೆ.
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಸುರೇಶ್‌ ಬಾಬು ಆಯ್ಕೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 1 =
Remember me
