ವಿಶ್ರಾಂತಿಯಿಂದ ಎದ್ದಾಗ ಹೆಚ್ಚಿನ ಸಾಮರ್ಥ್ಯವನ್ನು ಪಡೆಯಲು ನಾವೆಲ್ಲರೂ ಗಾಢವಾದ ಮತ್ತು ಚೈತನ್ಯದಾಯಕ ವಿಶ್ರಾಂತಿಯನ್ನು ಬಯಸುತ್ತೇವೆ. ಆದರೆ ನೀವು ಯಾವಾಗ ವಿಶ್ರಾಂತಿಯನ್ನು ಪಡೆಯಬಹುದು?
ನೀವು ಇತರ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿದಾಗ ಮಾತ್ರ. ನೀವು ಚಲಿಸುವುದು, ಕೆಲಸ ಮಾಡುವುದು, ಯೋಚಿಸುವುದು, ಮಾತನಾಡುವುದು, ನೋಡುವುದು, ಆಲಿಸುವುದು, ಘ್ರಾಣಿಸುವುದು, ರುಚಿ ನೋಡಿ ಸವಿಯುವುದು -ಈ ಎಲ್ಲಾ ಸ್ವಯಂಪ್ರೇರಿತ ಚಟುವಟಿಕೆಗಳನ್ನು ನಿಲ್ಲಿಸಿದರೆ, ಆಗ ನೀವು ವಿಶ್ರಾಂತಿ ಅಥವಾ ನಿದ್ರೆಗೆ ಜಾರುತ್ತೀರಿ. ನೀವು ನಿದ್ರೆಯಲ್ಲಿ ಇದ್ದಾಗ ಉಸಿರಾಟ, ಎದೆಬಡಿತ, ಜೀರ್ಣಕ್ರಿಯೆ ಮತ್ತು ರಕ್ತ ಪರಿಚಲನೆಯಂತಹ ಸಹಜ – ಸ್ವಾಭಾವಿಕವಾದ ಚಟುವಟಿಕೆಗಳು ಮಾತ್ರ ನಡೆಯುತ್ತಿರುತ್ತವೆ. ಆದರೆ ಅದು ಪೂರ್ಣ ವಿಶ್ರಾಂತಿಯಲ್ಲ. ಪೂರ್ಣ ವಿಶ್ರಾಂತಿ ಸಿಗುವುದು ಧ್ಯಾನದಲ್ಲಿ. ಮನಸ್ಸು ಸ್ಥಿರ ಆದಾಗ ಮಾತ್ರ ಧ್ಯಾನದಲ್ಲಿ ಲೀನವಾಗುತ್ತದೆ.
ಮನಸ್ಸನ್ನು ಹೇಗೆ ನೆಲೆ ಗೊಳಿಸುವುದು?:ಜೀವನದ ಗುರಿಯನ್ನು ಅರಿತು, ಆ ಗುರಿಯತ್ತ ಗಮನವನ್ನು ಹರಿಸಿದಾಗ ಮನಸ್ಸನ್ನು ನೆಲೆಗೊಳಿಸಬಹುದು. ಗಮನ ಎಂದರೇನು? ಗಮನ ಎಂದರೆ ಪ್ರಸ್ತುತ ಕ್ಷಣದಲ್ಲಿ ಸಂತುಷ್ಟರಾಗಿ ಇರುವುದು, ಕೇಂದ್ರೀಕೃತರಾಗಿ ಇರುವುದು, ಜೀವನದ ಅತ್ಯುನ್ನತ ಮೌಲ್ಯಕ್ಕಾಗಿ ಎದುರು ನೋಡುವುದು ಹಾಗೂ ಆ ಶಾಂತ ವಾತಾವರಣದಲ್ಲಿ ನೆಲೆ ಕಂಡುಕೊಳ್ಳುವುದು. ಸಮಾಧಾನ ಸ್ಥಿತಿ ಅಥವಾ ಶಾಂತಿ ಇಲ್ಲದೆ ಗಮನ ಹರಿಸಲು ಸಾಧ್ಯ ಆಗುವುದಿಲ್ಲ. ಇದನ್ನು ತಿರುಗಿಸಿ ಹೇಳಿದರೆ, ಗಮನ ಹರಿಸಿದಾಗ ಶಾಂತಿಯನ್ನು ಹೊಂದುವಿರಿ ಎಂಬುದರ ಅರಿವು ಆಗುತ್ತದೆ.
ನೀವು ಪ್ರಸ್ತುತ ಕ್ಷಣದಲ್ಲಿ ಸಂತೋಷವಾಗಿ ಇಲ್ಲದೆ ಇದ್ದಾಗ ನಿಮ್ಮಲ್ಲಿ ಬಯಕೆ ಮೂಡುತ್ತದೆ. ಬಯಕೆ ಮೂಡಿದೆ ಎಂದರೆ ಪ್ರಸ್ತುತ ಕ್ಷಣದಲ್ಲಿ ಸರಿಯಾಗಿಲ್ಲ ಎಂದರ್ಥ. ಇದು ಮನಸ್ಸಿನಲ್ಲಿ ಉದ್ವೇಗ ಉಂಟುಮಾಡುತ್ತದೆ. ಪ್ರತಿ ಬಯಕೆಯು ಮನಸ್ಸನ್ನು ಕೆರಳಿಸುತ್ತದೆ. ಇಂತಹ ಸ್ಥಿತಿಯಲ್ಲಿ ಧ್ಯಾನವು ಸಾಧ್ಯವಾಗುವುದಿಲ್ಲ. ನೀವು ಕಣ್ಣು ಮುಚ್ಚಿ ಕುಳಿತುಕೊಳ್ಳಬಹುದು, ಆದರೆ ಬಯಕೆಗಳು ಮೂಡುತ್ತಾ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ. ಹೀಗೆ ನೀವು ಹಗಲು ಕನಸು ಕಾಣುತ್ತ, ಧ್ಯಾನ ಮಾಡುತ್ತ
ಇರುವೆ ಎಂದು ನಿಮಗೆ ನೀವೇ ಮೋಸ ಮಾಡಿಕೊಳ್ಳುತ್ತ ಇರುತ್ತೀರಿ. ನಿಮ್ಮ ಜೀವನದ ಸ್ವಂತ ಅನುಭವಗಳನ್ನು ಗಮನಿಸಿದಾಗ- ನಿಮ್ಮಲ್ಲಿ ಚಡಪಡಿಕೆ, ತಳಮಳ ಅಥವಾ ಬಯಕೆ ಇದ್ದಾಗ ನೀವು ಮಲಗಲು ಹೋದರೆ ನಿಮಗೆ ಗಾಢನಿದ್ರೆ ಬರುವುದಿಲ್ಲ. ಮೇಲ್ನೋಟಕ್ಕೆ ಬಯಕೆ ಇಲ್ಲವೆಂದು ಅನಿಸಿದರೂ ಆ ಯೋಜನೆಗಳು ಅಥವಾ
ಆಕಾಂಕ್ಷೆಗಳು ಮನಸ್ಸನ್ನು ಕಾಡುತ್ತಿರುತ್ತವೆ. ಏನನ್ನಾದರೂ ಮಾಡುವ ಆತಂಕ ಇದ್ದಾಗ, ನಿದ್ರೆ ಮಾಡುವುದು ಇನ್ನೂ ಕಷ್ಟವಾಗುತ್ತದೆ. ನೀವು ಎಲ್ಲವನ್ನೂ ಅರ್ಪಿಸಿದಾಗ ಮಾತ್ರ, ನೀವು ವಿಶ್ರಾಂತಿ ಪಡೆಯಲು ಸಾಧ್ಯ. ಹಾಗೆ ಇದ್ದಲ್ಲಿ ನೀವು ಯಾಕೆ ಪ್ರತಿಕ್ಷಣವೂ ಹಾಗೆ ಮಾಡಬಾರದು? ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ ಎಲ್ಲವನ್ನೂ ಅರ್ಪಣೆ ಮಾಡಿ; ಆಗ ನಿಮಗೆ ಜಗತ್ತೇ ಕಣ್ಮರೆ ಆಗುತ್ತಿದೆ ಅಥವಾ ಕರಗಿಹೋಗುತ್ತಿದೆ ಎಂದು ಭಾಸವಾಗುತ್ತದೆ.
ಧ್ಯಾನದಲ್ಲಿ ಪಡೆಯುವ ವಿಶ್ರಾಂತಿಯು ಗಾಢನಿದ್ರೆಯಿಂದ ಪಡೆವ ವಿಶ್ರಾಂತಿಗಿಂತ ಬಹಳ ಮಿಗಿಲಾದುದು. ಏಕೆಂದರೆ ಧ್ಯಾನದಲ್ಲಿ ನೀವು ಬಯಕೆಗಳನ್ನು ಮೀರಿರುವ ಸ್ಥಿತಿಯಲ್ಲಿ ಇರುತ್ತೀರಿ. ಧ್ಯಾನವು ಮನಸ್ಸನ್ನು ಎಷ್ಟು ತಿಳಿಯಾಗಿ ಮಾಡುತ್ತದೆ ಎಂದರೆ ದೇಹ – ಮನಸ್ಸಿನ ಸಂಪೂರ್ಣ ಸಂಕೀರ್ಣಕ್ಕೆ ಕೂಲಂಕುಷ ಪರಿಷ್ಕರಣೆ ಅಥವಾ ನಿರ್ವಹಣಾ ಕಾರ್ಯ ಮಾಡಿಸಿದಂತೆ ಇರುತ್ತದೆ. ನೀವು ಧ್ಯಾನದಲ್ಲಿ ಎಷ್ಟು ವಿಶ್ರಾಂತಿ ಪಡೆಯುತ್ತೀರೋ, ನಿಮ್ಮ ಚಟುವಟಿಕೆಗಳಲ್ಲಿ ಅಷ್ಟೇ ಕುಶಲರಾಗಿ ಇರುತ್ತೀರಿ. ಆಳವಾದ ವಿಶ್ರಾಂತಿ ಮತ್ತು ಕ್ರಿಯಾತ್ಮಕ ಚಟುವಟಿಕೆ, ಇವೆರಡೂ ವಿರುದ್ಧ ಮೌಲ್ಯಗಳನ್ನು ಹೊಂದಿದ್ದರೂ, ಪರಸ್ಪರ ಪೂರಕವೇ ಆಗಿವೆ.
ಧ್ಯಾನ ಎಂದರೆ… ಧ್ಯಾನ ಎಂದರೆ ಕಳೆದುಹೋಗಿರುವ ಕೋಪದ ಕ್ಷಣಗಳು ಹಾಗೂ ಹಿಂದೆ ಆಗಿಹೋಗಿರುವ ಘಟನೆಗಳು ಮತ್ತು ಭವಿಷ್ಯದ ಯೋಜನೆಗಳು- ಎಲ್ಲವನ್ನೂ ಅರ್ಪಣೆ ಮಾಡುವುದು. ಧ್ಯಾನ ಎಂದರೆ ಪ್ರಸ್ತುತ ಕ್ಷಣವನ್ನು ಅಂಗೀಕಾರ ಮಾಡುವುದು ಹಾಗೂ ಪ್ರತಿ ಕ್ಷಣವನ್ನೂ ಆಳವಾಗಿ, ಪೂರ್ಣತೆಯಿಂದ ಜೀವಿಸುವುದು. ಕೇವಲ ಈ ತಿಳಿವಳಿಕೆ ಹಾಗೂ ಕೆಲವು ದಿನಗಳ ಧ್ಯಾನದ ನಿರಂತರ ಅಭ್ಯಾಸ ನಿಮ್ಮ ಜೀವನದ ಗುಣಮಟ್ಟವನ್ನು ನಿಶ್ಚಿತವಾಗಿ ಬದಲಾಯಿಸುತ್ತದೆ.
ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
