ಉಡುಪಿ:ಕಾಂಗ್ರೆಸ್​ನವರು ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದವರು, ನಮ್ಮದು ಘರ್ಜನಾ ರೂಪದಲ್ಲಿ ಇರಬೇಕಾಗಿರೊ ಸಿಂಹ. ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ, ನಾವು ನೋಡುವ ದೃಷ್ಟಿಯೇ ಬೇರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೊಸ ಸಂಸತ್​ ಭವನದ ಮೇಲೆ ಸ್ಥಾಪಿಸಿರುವ ರಾಷ್ಟ್ರ ಲಾಂಛನವನ್ನು ಸರ್ಕಾರ ಮಾರ್ಪಾಡು ಮಾಡಿದೆ. ಆ ಮೂಲಕ ರಾಷ್ಟ್ರ ಲಾಂಛನದ ಘನತೆಗೆ ಸರ್ಕಾರ ಅವಮಾನ ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಮೂಲ ರಾಷ್ಟ್ರ ಲಾಂಛನದಲ್ಲಿರುವಂತೆ ಈ ಪ್ರತಿಮೆಯಲ್ಲಿ ಸಿಂಹಗಳ ಚಿತ್ರಣ ಇಲ್ಲ. ಹೊಸ ಸಂಸತ್​ ಭವನದ ಮೇಲೊಇನ ಲಾಂಛನದಲ್ಲಿ ಸಿಂಹಗಳು ಬಾಯ್ತೆರೆದು ಗರ್ಜಿಸುತ್ತಿವೆ. ನರಭಕ್ಷಣೆಯ ಉತ್ಸಾಹದಲ್ಲಿರುವಂತೆ ಕಾಣುತ್ತಿದೆ ಎಂದು ಟೀಕಿಸಿವೆ. ಈ ಕುರಿತು ಉಡುಪಿಯಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದವರು, ನಮ್ಮದು ಘರ್ಜನಾ ರೂಪದಲ್ಲಿರಬೇಕಾಗಿರೊ ಸಿಂಹ ಎಂದು ಟಾಂಗ್​ ಕೊಟ್ಟರು.
ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ. ನಾವು ನೋಡುವ ದೃಷ್ಟಿಯೇ ಬೇರೆ. ನಮ್ಮಲ್ಲಿ ಕ್ರಿಯಾಶೀಲವಾದ ಆ್ಯಕ್ಟೀವ್​ ಪ್ರಧಾನಿ ಇದ್ದಾರೆ ಎಂದು ಕಾಂಗ್ರೆಸ್​ಗೆ ಸಿಎಂ ತಿರುಗೇಟು ನೀಡಿದರು.
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರನಿಗೆ ಕಂಕಣ ಭಾಗ್ಯ: ಮನೋರಂಜನ್​ರ ಕೈಹಿಡಿಯಲಿರುವ ವಧು ಯಾರು?

ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
