ಬೆಂಗಳೂರು:ಪೆಟ್ರೋಲ್-ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಇಂಧನ ಬೆಲೆಯನ್ನು ತಗ್ಗಿಸುವ ನಿರ್ಧಾರವನ್ನ ಕೇಂದ್ರ ಸರ್ಕಾರ ಪ್ರಕಟಿಸಿ ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಾತ್ರ ದರ ಇಳಿಕೆ ಬಗ್ಗೆ ಇನ್ನೂ ಚರ್ಚೆಯೇ ಆಗಿಲ್ಲ.
ಕೇಂದ್ರ ಅಬಕಾರಿ ಸುಂಕವನ್ನು ಪೆಟ್ರೋಲ್​ ಮೇಲೆ ಲೀಟರ್​ಗೆ 8 ರೂಪಾಯಿ ಮತ್ತು ಡೀಸೆಲ್​ ಮೇಲೆ ಲೀಟರ್​ಗೆ 6 ರೂಪಾಯಿ ಇಳಿಸುವ ಮೂಲಕ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 9.5 ರೂ. ಮತ್ತು ಡೀಸೆಲ್​ ಬೆಲೆಯನ್ನು ಲೀಟರ್​ಗೆ 7 ರೂ. ಇಳಿಕೆ ಮಾಡುವುದಾಗಿ ಮೇ 21ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ, ಕೇರಳ, ಮಹಾರಾಷ್ಟ್ರ ಸರ್ಕಾರಗಳು ದರ ಇಳಿಕೆ ಮಾಡಿದವು. ಕರ್ನಾಟಕದಲ್ಲೂ ದರ ಇಳಿಕೆ ಆಗುತ್ತೆ ಜನ ಎದುರು ನೋಡುತ್ತಿದ್ದಾರೆ. ಅಂದು ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದ ಸಿಎಂ, ಇಂದು(ಮೇ 28) ಕೂಡ ಇದೇ ಮಾತನ್ನ ಪುನರುಚ್ಛರಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕೆಜಿಎಫ್​ ಬಾಬು ಮನೆ ಮೇಲೆ IT ದಾಳಿ: ನಾಮಪತ್ರದಲ್ಲಿನ ಮಾಹಿತಿ ನೋಡಿ ಐಟಿ ಕಣ್ಣು ಬಿತ್ತಾ? ಬಾಬು ಮುಂದೆ ಡಿಕೆಶಿ, ಎಂಟಿಬಿ ಆಸ್ತಿಯೂ ಕಮ್ಮಿ

ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ… ಏಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eight =
Remember me
