ಬೆಂಗಳೂರು:ತೀವ್ರ ಮಳೆ, ಕಡಲು ಕೊರೆತ, ಭೂಕುಸಿತ ಬಾಧಿತ ಜಿಲ್ಲೆಗಳ ವಸ್ತುಸ್ಥಿತಿ ಕುರಿತು ಕಾಲಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದು, ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಎಸ್​ಡಿಆರ್​ಎಫ್ ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಾಗಲೇ ಎಸ್​ಡಿಆರ್​ಎಫ್ ತಂಡಗಳೊಂದಿಗೆ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡಿರುವೆ. ಭಾರಿ ಮಳೆ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ತುರ್ತಾಗಿ ಪರಿಹಾರ ವ್ಯವಸ್ಥೆ ಮಾಡಲು ತಿಳಿಸಿದ್ದೇನೆ. ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಯಾವ ಸಮಸ್ಯೆ ಎದುರಾದರೂ ತಕ್ಷಣ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆ. ಒಂದು ಹತ್ಯೆ ಪ್ರಕರಣ ಮುಂದಿಟ್ಟು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದು ಸರಿಯಲ್ಲ. ಚಂದ್ರಶೇಖರ್ ಗುರೂಜಿ ಹತ್ಯೆಯು ವೈಯಕ್ತಿಕ ದ್ವೇಷಕ್ಕಾಗಿ ನಡೆದಿದ್ದು, ಇಡೀ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ತಳುಕು ಹಾಕುವುದು ಬೇಡ ಎಂದು ಸಿಎಂ ಹೇಳಿದರು.
ಮಾಧ್ಯಮದವರ ಜತೆ ಮಾತನಾಡಿ ಸಿಎಂ ಬೊಮ್ಮಾಯಿ‌ ತೆರಳುತ್ತಿದ್ದ ವೇಳೆ ಆದಿಜಾಂಬವ ಸಂಘದ ಮುಖಂಡರು ಬೇಡ ಜಂಗಮರಿಗೆ ಎಸ್​ಸಿ ಪ್ರಮಾಣಪತ್ರ ನೀಡಕೂಡದು ಎಂದು ಹಠಾತ್ ತಗಾದೆ ಧ್ವನಿ ಎತ್ತಿದರು. ಅಲ್ಲದೆ, ಸಿಎಂ ಬಳಿ ನುಗ್ಗಲು ಮುಂದಾದಾಗ ಬೆಂಗಾವಲು ಸಿಬ್ಬಂದಿ ಹಾಗೂ ಪೊಲೀಸರು ತಡೆಯೊಡ್ಡಿ ಸಂಘದ ಮುಖಂಡರನ್ನು ಪಕ್ಕಕ್ಕೆ ಕರೆದೊಯ್ದರು. ಈ ಘಟನೆಯಿಂದ ಸ್ವಲ್ಪಹೊತ್ತು ನೂಕು-ನುಗ್ಗಲು ಉಂಟಾಯಿತು.
ಚಂದ್ರಶೇಖರ ಗುರೂಜಿ ಹಂತಕರ ಬಂಧನ: ಅಸಲಿ ವಿಚಾರ ಮುಚ್ಚಿಟ್ರಾ ಪೊಲೀಸರು?

ಕಂಟ್ರೋಲ್​ ಮಾಡ್ದೆ ಹೋದ್ರೆ ಹೆಂಡ್ತೀನೂ ಓಡಿ ಹೋಗ್ತಾಳೆ: ಮಾಜಿ ಸಚಿವ ಈಶ್ವರಪ್ಪ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 5 =
Remember me
