ತುಮಕೂರು:ತಿಗಳ ಸಮುದಾಯದ ಅಗ್ನಿ ಬನ್ನಿಗರಾಯ ಜಯಂತಿಯನ್ನು ಸರ್ಕಾರದಿಂದ ಆಚರಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಶುಕ್ರವಾರ ಅಗ್ನಿವಂಶ ಕ್ಷತ್ರಿಯ ಸಮಾಜದ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಮಹಾಭಾರತದಲ್ಲಿ ಸತ್ಯದ ಜತೆ ನಿಂತವರು ತಿಗಳ ಸಮುದಾಯ. ಮಹಾಭಾರತದಲ್ಲಿ ತಿಗಳ ಸಮುದಾಯದ ಬೆಂಬಲ ಇದ್ದವರು ಗೆದ್ದಿದ್ದಾರೆ, ಈ ನವಭಾರತದಲ್ಲಿಯೂ ನೀವು ಆಶೀರ್ವಾದ ಮಾಡುವವರೇ ಗೆಲ್ಲುತ್ತಾರೆ. ಆಶೀರ್ವಾದ ಮಾಡುವಾಗ ಯೋಚಿಸಿ ಮಾಡಿ, ನಿಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವವರಿಗೆ ಆಶೀರ್ವದಿಸಿ ಮಾಡಿ ಎಂದರು.
ಭಾಷಣದಿಂದ ಏನೂ ಆಗುವುದಿಲ್ಲ. ಮಣ್ಣಿನ ಜತೆ ಬದುಕುವ ತಿಗಳ ಸಮುದಾಯವೇ ತೋಟಗಾರಿಕೆ ಇಲಾಖೆ ನಿರ್ಮಾಣವಾಗಿದೆ. ಇದರ ತಳಹದಿ ತಿಗಳ ಸಮುದಾಯ. ವ್ಯಾಪಾರ ಮಾಡುವವರು ಜಗತ್ತನ್ನು ಆಳಿದರು, ಈ ಶತಮಾನದಲ್ಲಿ ಜ್ಞಾನದ ಯುಗವಾಗಿದೆ, ಮಣ್ಣಿನ ಜತೆಗಿನ ಸಂಬಂಧದ ಜತೆಗೆ ಜ್ಞಾನವನ್ನೂ ಸಂಪಾದಿಸಬೇಕು. ಎಲ್ಲ ಕ್ಷೇತ್ರದಲ್ಲಿಯೂ ಬೆಳೆಯಬೇಕು ಎಂದರು.
ಎಲ್ಲ ಸಣ್ಣಪುಟ್ಟ ಸಮುದಾಯಗಳ ಏಳಿಗೆಗೆ ಕಾರ್ಯಕ್ರಮ ರೂಪಿಸಿದ್ದೇನೆ. ಪ್ರತ್ಯೇಕವಾಗಿ ಹಣ ಮೀಸಲಿಟ್ಟಿದ್ದೇನೆ. ಹಿಂದುಳಿದ ವರ್ಗದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರತ್ಯೇಕ ಸೆಲ್ ಕೂಡ ಆರಂಭಿಸಿದ್ದೇನೆ. ತಿಗಳ ಸಮುದಾಯದ ಭವನಗಳಿಗೆ 5 ಕೋಟಿ ರೂ. ನೀಡಿದ್ದೇನೆ. ಹಾಸ್ಟೆಲ್​ಗಳಲ್ಲಿ 4.45 ಕೋಟಿ ರೂ. ನೀಡಿದ್ದೇನೆ ಎಂದರು.
ತಂದೆ ಜತೆ ದೂರು ನೀಡಲು ಬಂದಿದ್ದ ಪತ್ನಿ, ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಕೊಂಡು ಠಾಣೆಗೆ ನುಗ್ಗಿದ ಪತಿ!

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
