ಮಂಗಳೂರು:ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಗುರುವಾರ ಸಂಜೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಚೆಕ್ ​ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಪ್ರವೀಣ್​ ಹತ್ಯೆ ಅತ್ಯಂತ ಅಮಾನವೀಯ. ಇದೊಂದು ಪೂರ್ವ ಯೋಜಿತ ಕೃತ್ಯ. ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಹತ್ತು ವರ್ಷದಿಂದ ಸಮಾಜಘಾತುಕಶಕ್ತಿಗಳ ಕೃತ್ಯ ಹೆಚ್ಚಾಗಿದೆ. ಕೇರಳದಿಂದಲೂ ಈ ರೀತಿಯ ಕೃತ್ಯಕ್ಕೆ ಪ್ರೇರಣೆ ಸಿಕ್ಕಿದೆ. ಕೇವಲ ಕೊಲೆ ಪ್ರಕರಣ ಅಲ್ಲ, ದೇಶವನ್ನು ಛಿದ್ರ ಮಾಡುವ ಕೃತ್ಯ. ಈಗಾಗಲೇ ತನಿಖೆ ಆರಂಭವಾಗಿದೆ. ಶೀಘ್ರವೇ ಎಲ್ಲ ಆರೋಪಿಗಳನ್ನೂ ಬಂಧಿಸಲಾಗವುದು. ಎಡಿಜಿಪಿ ಇಲ್ಲೇ ಮೊಕ್ಕಾಂ ಹೂಡಿದ್ದಾರೆ, ಅವರೊಬ್ಬ ದಕ್ಷ ಅಧಿಕಾರಿ. ಈಗಾಗಲೇ ಎನ್​ಐಎ ಕರ್ನಾಟಕಕ್ಕೆ ಬೇಡಿಕೆ ಇದೆ. ಮಂಗಳೂರು ಭಾಗಕ್ಕೆ ಆದಷ್ಟು ಬೇಗ ಎನ್​ಐಎ ತರ್ತೇವೆ. ಎನ್​ಐಎಗೆ ತನಿಖೆ ಕೊಡುವ ಚಿಂತನೆ ಇದೆ. ಈ ಕೃತ್ಯಕ್ಕೆ ಬೆಂಬಲ ಕೊಟ್ಟ ಜಾಲವನ್ನ ಬೇಧಿಸುತ್ತೇವೆ. ಪ್ರವೀಣ್​ರ ಮಡದಿಯೂ ಅದೇ ಬೇಡಿಕೆ ಇಟ್ಟಿದ್ದಾರೆ ಎಂದು ಸಿಎಂ ಹೇಳಿದರು.
‘ನನಗೆ ಬಂದ ಗತಿ ಮುಂದೆ ಯಾರಿಗೂ ಬರಬಾರದು. ಈ ಕೊಲೆಯ ಘಟನೆಗಳು ಇಲ್ಲಿಗೆ ಕೊನೆಗೊಳ್ಳಬೇಕು’ ಎಂದು ಪ್ರವೀಣ್​ರ ಪತ್ನಿ ನೂತನ, ಸಿಎಂ ಬಳಿ ಗದ್ಗದಿತರಾದರು. ಇದೇ ವೇಳೆ ನೆರೆದಿದ್ದ ಜನ, ಬುಧವಾರ ಪ್ರವೀಣ್ ಪಾರ್ಥಿವ ಶರೀರ ಯಾತ್ರೆ ವೇಳೆ ಲಾಠಿಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿದರು.

ಪ್ರವೀಣ್​ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಕುಟುಂಬಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂ. ನೀಡಿದ್ದೇವೆ. ಕುಟುಂಬಸ್ಥರ ಮುಂದಿನ ಭವಿಷ್ಯಕ್ಕೆ ಎಲ್ಲ ಸಹಕಾರ ನೀಡ್ತೇವೆ. ಕಟುಕರಿಗೆ ಶಿಕ್ಷೆ ಆದಾಗ ಮಾತ್ರ ಪ್ರವೀಣ್​ ಆತ್ಮಕ್ಕೆ ಶಾಂತಿ ಎಂದು ಸಿಎಂ ಹೇಳಿದರು.
ಪ್ರವೀಣ್​ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಬಿಜೆಪಿ ನಿರ್ಧಾರ

ಮಧುಚಂದ್ರಕ್ಕೆ ಹೋಗಬೇಕಿದ್ದ ನವವಿವಾಹಿತ ಆಸ್ಪತ್ರೆಗೆ… ತಡರಾತ್ರಿ ಕುಸಿದುಬಿದ್ದ ಮನೆಯ ಗೋಡೆ, ಛಾವಣಿ…

ಯುವತಿ ಹೆಸರಲ್ಲಿ ಮಾಡಬಾರದ್ದು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪಿಎಸ್​ಐ ಉದ್ಯೋಗಾಕಾಂಕ್ಷಿ! ಯುವಕರೇ ಈತನ ಟಾರ್ಗೆಟ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 13 =
Remember me
