ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಯಾರೆಗೆಲ್ಲ ಮಂತ್ರಿಗಿರಿ ಸಿಕ್ಕಿದೆ ಗೊತ್ತಾ? ಐವರು ಹೊಸ ಮುಖಗಳಿಗೆ ಈ ಭಾರಿ ಸಚಿವ ಸ್ಥಾನ ಸಿಕ್ಕಿದ್ದು, ಇಂದು ಒಟ್ಟು 29 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದ ಸಿ.ಪಿ.ಯೋಗೇಶ್ವರ್​, ಅರವಿಂದ್ ಬೆಲ್ಲದ, ಯತ್ನಾಳ್​ಗೆ ಮಂತ್ರಿ ಸ್ಥಾನ ಕೈತ್ತಪ್ಪಿದೆ.
ಇಂದು ಬೆಳಗ್ಗೆ 11.20 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ಈ ಭಾರಿ ಡಿಸಿಎಂ ಸ್ಥಾನ ಇರಲ್ಲ. ಸಚಿವ ಸಂಪುಟ ರಚನೆಯಲ್ಲಿ ಅನುಭವ ಹೊಸ ಶಕ್ತಿಯ ಸಮ್ಮಿಶ್ರ ಇದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ನರೇಂದ್ರ ಮೋದಿ ಅವರ ನಾಯಕತ್ವ ಇದೆ, ಅಮಿತ್​ ಷಾ ಅವರ ಮಾರ್ಗದರ್ಶನ ಇದೆ, ನಡ್ಡಾಜಿ ಅವರ ಚತುರತೆ ಇದೆ. ಜತೆಗೆ ಯಡಿಯೂರಪ್ಪ ಅವರ ಶಕ್ತಿ ಇದೆ. ಇಂದು 29 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. 7 ಮಂದಿ ವಕ್ಕಲಿಗ, 8 ಮಂದಿ ಲಿಂಗಾಯತ, 3 ಎಸ್ಸಿ, ತಲಾ 1 ರೆಡ್ಡಿ, ಮಹಿಳೆ, ಎಸ್ಟಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲಾಗಿದೆ. ಜನಪರ ಆಡಳಿತ ಕೊಡುವ ಹಿನ್ನೆಲೆ, ಬರುವ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಂಪುಟ ರಚನೆ ಆಗಿದೆ ಎಂದರು. ಇನ್ನು ಮಾಜಿ ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಎಂದರು.
ಸಂಪುಟ ರಚನೆ ಸಂಬಂಧ ನಮ್ಮ ವರಿಷ್ಠರು ಹಲವಾರು ವಿಚಾರ ತೆಗೆದುಕೊಂಡು, ಹಲವು ಸುತ್ತಲ್ಲಿ ಸಭೆ ಮಾಡಿದ್ದಾರೆ. ಇಲ್ಲಿ ಒತ್ತಡ ಬರಲ್ಲ. ವಿಜಯೇಂದ್ರ ವಿಚಾರವಾಗಿ ವರಿಷ್ಠರು ಬಿಎಸ್​ವೈ ಜತೆ ಮಾತನಾಡಿದ್ದಾರೆ. ವಿಜಯೇಂದ್ರ ಜತೆ ಅರುಣ್ ಸಿಂಗ್ ಮಾತನಾಡಿದ್ದಾರೆ. ನಾನು ರಾಜ್ಯಪಾಲರಿಗೆ ಕಳಿಸಿದ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿಲ್ಲ. ಹಂತಹಂತವಾಗಿ ಸಂಪುಟ ವಿಸ್ತರಣೆ ಆಗುತ್ತದೆ. ಸರ್ಕಾರದಲ್ಲಿದ್ದ ಕೆಲವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಪಕ್ಷ ಬಯಸಿದೆ ಎಂದರು.
2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಬೆಳ್ಳಂಬೆಳಗ್ಗೆ ಉಳ್ಳಾಲ ಮಾಜಿ ಶಾಸಕರ ಪುತ್ರನ ಮನೆಗೆ ಎನ್​ಐಎ ಅಧಿಕಾರಿಗಳ ದಾಳಿ! ಉಗ್ರರೊಂದಿಗೆ ಲಿಂಕ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − ten =
Remember me
