ಬೆಂಗಳೂರು:ಅಧಿಕಾರದಲ್ಲಿದ್ದಾಗ ಕಬ್ಬಿಣದ ತರಹ ಗಟ್ಟಿಯಾಗಿರುತ್ತಾರೆ. ಅಧಿಕಾರ ಹೋದ ಬಳಿಕ ಹತ್ತಿ ತರಹ ಮೆತ್ತಗಾಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಪ್ರತಿಪಕ್ಷ ಕಾಂಗ್ರೆಸ್​ನ ಕಾಲೆಳೆದರು.
ನಗರದ ಖಾಸಗಿ ಹೋಟೆಲ್​ವೊಂದರಲ್ಲಿ ಬಿಜೆಪಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬಿಜೆಪಿಗೆ ಸೇವೆಯೇ ಜೀವಾಳ. ಬೇರೆ ಪಕ್ಷಗಳಿಗೆ‌ ಅಧಿಕಾರವೇ ಬಂಡವಾಳ. ಸಮಾಜದ ಸೇವೆಗೆ ಸದಾ ತುಡಿತ-ಮಿಡಿತ ಹೊಂದಿರುವ ಕಾರ್ಯಕರ್ತರು ಪಕ್ಷದ ಶಕ್ತಿಯಾಗಿದ್ದಾರೆ. ಕಾಂಗ್ರೆಸ್​ನಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಲೀಡರ್​ಗಳೇ ತುಂಬಿದ್ದಾರೆ. ನಮ್ಮ ಹಾಗೆ ಅವರಿಗೆ ಜನ ಸೇವೆ, ಕಾರ್ಯತತ್ಪರತೆ ಮೆರೆಯಲು ಸಾಧ್ಯವಿಲ್ಲ ಎಂದು ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿಯವರ ಸೂಕ್ಷ್ಮ ಸಂವೇದನೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೇವೆಯೇ ಸಂಕಲ್ಪ, ಆರ್​ಎಸ್​ಎಸ್​ನ ಸೇವಾ ಮನೋಭಾವ ಪಕ್ಷದ ಹಿರಿಮೆ-ಗರಿಮೆಯಾಗಿದೆ. ಸಂಭಾವ್ಯ ಮೂರನೇ ಅಲೆ ತಡೆಗೆ ಸರ್ಕಾರದ ಜತೆ ಕೈಜೋಡಿಸಲು ಮುಂದಾಗಿರುವ ಪಕ್ಷದ ಸ್ವಯಂ ಸೇವಕರಿಗೆ ಎಲ್ಲ ನೆರವು ನೀಡಲಾಗುವುದು. ಜನ ಜಾಗೃತಿ ಜತೆಗೆ ಕರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಮಾಹಿತಿ ನೀಡಬೇಕೆಂದು ಬೊಮ್ಮಾಯಿ‌ ಮನವಿ ಮಾಡಿದರು.
ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಮಾತನಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಸಿಎಂ ವಿರುದ್ಧ ಅತ್ತ ಪ್ರೀತಂಗೌಡ, ಇತ್ತ ಆನಂದ್​ ಸಿಂಗ್​ ಆಕ್ರೋಶ! ಇಬ್ಬರಿಗೂ ಬೇಸರ ಆಗಿರೋದು ನಿಜ ಎಂದ ಬೊಮ್ಮಾಯಿ

ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

ನನ್ನ ದಾರಿ ನಾನೇ ನೋಡಿಕೊಳ್ಳುವೆ… ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಆನಂದ್​ ಸಿಂಗ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − two =
Remember me
