ಬೆಂಗಳೂರು:ರಾಜ್ಯದಲ್ಲಿ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಕಟ್ಟಿದವರು ಬಿ.ಎಸ್​. ಯಡಿಯೂರಪ್ಪ. ಬಿಜೆಪಿ ಸರ್ಕಾರ ರಚಿಸಿದ ಹೆಗ್ಗಳಿಕೆ ಅವರದ್ದು. ಪ್ರತಿ ‌ಚುನಾವಣೆ ಅವರ ನೇತೃತ್ವದಲ್ಲೇ ಆಗಿದೆ. ಪಕ್ಷಕ್ಕಾಗಿ ‌ಶ್ರಮಿಸಿದ್ದಾರೆ. ರಾಜ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂತಹ ಮೇಧಾವಿ ಮುತ್ಸದ್ಧಿಯನ್ನು ಅಲಕ್ಷಿಸಬೇಡಿ. ಒಂದು ವೇಳೆ ಅಲಕ್ಷಿಸಿದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತೆ ಎಂದು ಬಿಜೆಪಿ ಹೈಕಮಾಂಡ್​ಗೆ ಮುರುಘಾ ಶರಣರು ಎಚ್ಚರಿಸಿದ್ದಾರೆ.
ಅವಧಿಗೂ ಮುನ್ನವೇ ಮುಖ್ಯಮಂತ್ರಿ ಬದಲಾವಣೆ ಬೇಡ ಎಂದಿರುವ ಮುರುಘಾ ಶರಣರು ಮತ್ತು ದಲಿತ, ಹಿಂದುಳಿದ ವರ್ಗಗಳ ಮಠಾಧೀಶರು, ಯಡಿಯೂರಪ್ಪ ಅವರ ಕಾಲನ್ನು ಏಕೆ ಎಳೆಯತ್ತಿದ್ದೀರಿ? ಅವರಿಗೆ ಸ್ವಾತಂತ್ರ್ಯಕೊಡಿ, ಅಭಿವೃದ್ಧಿ ಮಾಡಿ ತೋರಿಸುತ್ತಾರೆ ಎಂದಿದ್ದಾರೆ. ಅವಧಿಗೆ ಮುನ್ನವೇ ಸಿಎಂ ಬದಲಾಯಿಸಿದರೆ ಹೋರಾಟ ಮಾಡುವುದಾಗಿ ಬಿಜೆಪಿ ಹೈಕಮಾಂಡ್​ಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಳ್ಳಿ. ಈ ಹಂತದಲ್ಲಿ ನಾಯಕತ್ವ ಬದಲಾವಣೆ ಬೇಡ ಎಂದು ರಾಷ್ಟ್ರೀಯ ನಾಯಕರಿಗೆ ಮುರುಘಾ ಶರಣರು ಕಿವಿಮಾತು ಹೇಳಿದ್ದಾರೆ.
ಮಾದಾರ ಚನ್ನಯ್ಯ ಶ್ರೀಗಳು, ಭೋವಿ ಶ್ರೀಗಳು, ಇಳಕಲ್ ಶ್ರೀಗಳು, ಕುಂಚಿಟಿಗ ಶ್ರೀಗಳು ಸಿಎಂ ಸ್ಥಾನದಿಂದ ಯಡಿಯೂರಪ್ಪರ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ.
ಇದೆಂಥಾ ದುರ್ಬುದ್ಧಿ… ಆಂಬುಲೆನ್ಸ್​ಗೆ ದಾರಿ ಬಿಡದೆ ತೊಂದರೆ ಕೊಟ್ಟ

ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
