ದಾವಣಗೆರೆ:ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಪಂಕ್ಚರ್​ ಆದ ಬಸ್ಸಿನಂತೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಎಂದು ಎಂಎಲ್​ಸಿ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು.
ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ರಾಜ್ಯದಲ್ಲಿ ಬಿಜೆಪಿ ಕತೆ ಮುಗಿದಿದೆ. ಸುಡಬೇಕೋ ಹೂಳಬೇಕೋ ಎಂಬುದೇ ಸದ್ಯಕ್ಕಿರುವ ಪ್ರಶ್ನೆ. ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಪಂಕ್ಚರ್​ ಆದ ಬಸ್ಸಿನಂತೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದರು.
ನಾನು ವಕ್ಫ್​ ಆಸ್ತಿ ಕಬಳಿಸಿದ್ದಾಗಿ ಆರೋಪಿಸಿರುವ ವಿ.ಎಸ್​. ಉಗ್ರಪ್ಪ ಅದನ್ನು ಸಾಬೀತುಪಡಿಸಲಿ. ರಾಜ್ಯ ಸರ್ಕಾರ ಈ ಹಿಂದೆ ಅನ್ವರ್​ ಮಾಣಿಪ್ಪಾಡಿ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿಯನ್ನು ಸಿಬಿಐಗೆ ಕೊಡಲಿ ಎಂದ ಇಬ್ರಾಹಿಂ, ಗ್ರಪ್ಪನಿಗೆ ಮದುವೆ ಮಾಡಿದ್ದು, ಎಂಎಲ್ಸಿ ಮಾಡಿದ್ದೇ ನಾನು. ಕಾರು ಸಹ ನೀಡಿದ್ದೆ. ಅವರು ಅದನ್ನು ಮರೆತಿದ್ದಾರೆ. ಅವರು ವಕೀಲರು, ನಾನು ಅವರ ಕದಾರ ಆಗಿದ್ದೆ. ವಕೀಲರು ಕದಾರನ ವಿರುದ್ಧವೇ ವಾದ ಮಾಡುವುದು ಸರಿಯಲ್ಲ ಎಂದು ವ್ಯಂಗ್ಯವಾಡಿದರು.
ಅವ್ನೊಬ್ಬ ತಲೆಕೆಟ್ಟ ಈಶ್ವರಪ್ಪ… ನಮ್ ಸರ್ಕಾರ ಇದ್ದಿದ್ರೆ 10 ನಿಮಿಷದಲ್ಲಿ ರಾಜೀನಾಮೆ ತಗೋತಿದ್ವಿ: ಏಕವಚನದಲ್ಲೇ ಡಿಕೆಶಿ ವಾಗ್ದಾಳಿ

ಪೊಲೀಸರಿಂದಲೇ ಆಟೋ ತಳ್ಳಿಸಿದ ಭೂಪ! ಆಟೋ ಸ್ಟಾರ್ಟ್​ ಮಾಡಲ್ಲ… ಎಂದು ರೋಡಲ್ಲೇ ಚಾಲಕ ಕಿರಿಕ್​

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten − 4 =
Remember me
