ಬೆಂಗಳೂರು:ಜನ ಸಾಮಾನ್ಯರ ಮೇಲೆ ಜಿಎಸ್​ಟಿ ಬರೆ ಎಳೆಯಲಾಗಿದ್ದು, ಇಂದಿನಿಂದ ಹಾಲಿನ ಉತ್ಪನ್ನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಈ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ, ಮೊಸರು, ಮಜ್ಜಿಗೆ, ಲಸ್ಸಿ ದರ ತಗ್ಗಿಸಲು ಕೆಎಂಎಫ್​ಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಕೇಂದ್ರ ವಿತ್ತ ಸಚಿವಾಲಯ ಮೊಸರು, ಮಜ್ಜಿಗೆ ಮತ್ತು ಸಿಹಿಲಸ್ಸಿ ಉತ್ಪನ್ನಗಳ ಮೇಲೆ ಜಿ.ಎಸ್​.ಟಿ.(ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಿಸಿರುವುದಾಗಿ ಕೆಎಂಎಫ್​​ ತಿಳಿಸಿದೆ. ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದ್ದು, ಈ ದಾಸ್ತಾನು ಮುಗಿಯುವವರೆಗೆ ಇಂಕ್​ ಜೆಟ್​ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುವುದು. ಗ್ರಾಹಕರು, ಸಾರ್ವಜನಿಕರು ಸಹಕರಿಸಬೇಕು ಎಂದು ಕೆಎಂಎಫ್​ ಕೋರಿದೆ. ಮೊಸರು-ಮಜ್ಜಿಗೆ ಬೆಲೆಯೂ ಹೆಚ್ಚಾದರೂ ಬಡವರು, ಜನಸಾಮಾನ್ಯರು ಬದುಕೋದಾದರೂ ಹೇಗೆ? ಎಂಬ ಆಕ್ರೋಶ ಮೇಲೂ ಭುಗಿಲೆದ್ದಿದೆ.
ಈ ಹಿನ್ನೆಲೆ ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಹಾಲು, ಮೊಸರಿನ ಮೇಲೆ ಜಿಎಸ್​ಟಿಯನ್ನು ನೇರವಾಗಿ ಹಾಕಿಲ್ಲ. ಆದರೆ ಪ್ಯಾಕಿಂಗ್ ಮೇಲೆ ಶೇ.5 ಜಿಎಸ್​ಟಿ ಹಾಕಲಾಗಿದ್ದು, ಅದನ್ನು ಮರು ಪಾವತಿ ಮಾಡಿಕೊಳ್ಳುವ ಅವಕಾಶವಿದೆ. ಹಾಗಾಗಿ ಹೆಚ್ಚಳ ವಾಪಸ್ ಪಡೆಯಲು ಕೆಎಂಎಫ್​ಗೆ ಸೂಚಿಸುವೆ ಎಂದರು. ಗ್ರಾಹಕರ ಮೇಲೆ‌ ಹೆಚ್ಚಿನ ಟ್ಯಾಕ್ಸ್ ಹಾಕುವ ಅವಶ್ಯಕತೆ ಇರಲಿಲ್ಲ. ದರ ಕಡಿಮೆ ಮಾಡುವ ಬಗ್ಗೆ ನಾನು ಸೂಚನೆ ಕೊಡುತ್ತೇನೆ ಎಂದರು.
ಬೆಂಗಳೂರಲ್ಲಿ ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ! ಆತಂಕದಲ್ಲಿ ಪೋಷಕರು, ಸಾವಿರಾರು ಮಕ್ಕಳ ಸ್ಥಳಾಂತರ

ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

ಮಲ್ಪೆ ಕಡಲ ತೀರದಲ್ಲಿ ಬೀಳುತ್ತಿದೆ ಚಿನ್ನ! ಕಸದ ರಾಶಿಯಲ್ಲಿ ಬಂಗಾರದ ಬೇಟೆಗೆ ಮುಗಿಬಿದ್ದ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
