ಅಫಜಲಪುರ:ಹೆಡೆ ಎತ್ತಿದ ನಾಗರಹಾವೊಂದು ಗಂಟೆಗೂ ಅಧಿಕ ಸಮಯ ಮಹಿಳೆ ಬೆನ್ನ ಮೇಲೆ ಕುಳಿತ ವಿಸ್ಮಯಕಾರಿ ಪ್ರಸಂಗ ಮಲ್ಲಾಬಾದ್ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ. ಹಾವು ಬೆನ್ನೇರಿದ ಭಯದಲ್ಲೂ ದೇವರ ನಾಮಸ್ಮರಣೆ ಮೂಲಕ ಬಚಾವ್ ಆದವರು ಮಲ್ಲಾಬಾದ್​ನ ಭಾಗಮ್ಮ ಹನುಮಂತಪ್ಪ ಬಡದಾಳ. ಶ್ರಾವಣ ಮಾಸದ ಕೊನೇ ಶುಕ್ರವಾರ ನಿಮಿತ್ತ ಭಾಗಮ್ಮ ಮನೆಯಲ್ಲಿ ಪೂಜೆ ಮುಗಿಸಿ ಗಂಡನಿಗೆ ಬುತ್ತಿ ತೆಗೆದುಕೊಂಡು ಹೊಲಕ್ಕೆ ಬಂದಿದ್ದಾರೆ. ಇದೇ ವೇಳೆ ಜಮೀನಿನಲ್ಲಿದ್ದ ಬನ್ನಿ ಮರದ ಕೆಳಗಿನ ಲಕ್ಷ್ಮೀ ದೇವಿಗೂ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದ್ದಾರೆ. ಬಳಿಕ ಎಲ್ಲರೂ ಊಟ ಮಾಡಿ ಕೃಷಿ ಕೆಲಸಕ್ಕೆ ಹೋಗಿದ್ದಾರೆ. ಭಾಗಮ್ಮ ಅಲ್ಲೇ ಹತ್ತಿರದಲ್ಲಿದ್ದ ಪುಟ್ಟ ಮರದ ಕೆಳಗೆ ಹಾಕಿದ್ದ ಮಂಚದ ಮೇಲೆ ಮಲಗಿದ್ದಾರೆ. ಸಂಜೆ 4ರ ಸುಮಾರಿಗೆ ನಾಗರಹಾವು ಹೆಡೆ ಎತ್ತಿಕೊಂಡು ಭಾಗಮ್ಮಳ ಬೆನ್ನೇರಿ ಕುಳಿತುಕೊಂಡಿದೆ.
ಬೆನ್ನ ಮೇಲೆ ಹಾವು ಕುಳಿತಿರುವುದನ್ನು ಅರಿತ ಭಾಗಮ್ಮ ಕಿರುಚಲು ಆರಂಭಿಸಿದ್ದಾರೆ. ಸ್ವಲ್ಪ ಅಲುಗಾಡಿದರೂ ಎಲ್ಲಿ ಕಚ್ಚುತ್ತದೋ ಎಂಬ ಭಯದಲ್ಲೇ ನಾಗೇಶ್ವರ… ಮಲ್ಲಯ್ಯ… ನಾಗೇಶ ಎನ್ನುತ್ತ ದೇವರ ಸ್ಮರಣೆ ಮಾಡಿದ್ದಾಳೆ. ಕುಟುಂಬಸ್ಥರು ದೌಡಾಯಿಸಿ ಸರ್ಪ ಓಡಿಸಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಬಳಿಕ ತಾನಾಗಿಯೇ ಹಾವು ಮುಂದೆ ಸಾಗಿದ್ದು, ನಂತರ ಎಲ್ಲರಲ್ಲೂ ನಿರಮ್ಮಳ ಭಾವ ಮೂಡಿದೆ.
ಭಾಗಮ್ಮ ಮನೆಗೆ ಜನರ ದಂಡು:ಹಾವಿನಿಂದ ಬಚಾವ್ ಆಗಿರುವ ಭಾಗಮ್ಮ ಮನೆಗೆ ಜನರು ತಂಡೋಪ-ತಂಡವಾಗಿ ಭೇಟಿ ನೀಡಿ, ಭಾಗಮ್ಮಳಿಗೆ ನಮಸ್ಕರಿಸಿ ಆಶೀರ್ವಾದ ಸಹ ಪಡೆಯುತ್ತಿದ್ದಾರೆ.
ಸೀಮಿನಾಗನಾಥ ಮನೆ ದೇವರು:ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ)ದ ಶ್ರೀ ಸೀಮಿ ನಾಗನಾಥ ಮನೆ ದೇವರಾಗಿದ್ದು, ನಿತ್ಯವೂ ಸೀಮಿ ನಾಗಣ್ಣನಿಗೆ ಪೂಜೆ ಮಾಡುತ್ತೇವೆ. ಪ್ರತಿವರ್ಷ ಜಾತ್ರೆಗೆ ಹೋಗ್ತೇವೆ. ಮಗನಿಗೂ ನಾಗೇಶ ಎಂದು ಹೆಸರಿಡಲಾಗಿತ್ತು. ಆದರೆ ಏಳು ವರ್ಷವಿರುವಾಗಲೇ ಮೃತಪಟ್ಟ. ನಮ್ಮ ಕುಟುಂಬದ ಮೇಲೆ ಸೀಮಿ ನಾಗನಾಥನ ಆಶೀರ್ವಾದ ಸಾಕಷ್ಟಿದೆ. ಅಂತಲೇ ನಾಗರಹಾವು ನನಗೆ ಏನೂ ಮಾಡಿಲ್ಲ ಎನ್ನುತ್ತಾರೆ ಭಾಗಮ್ಮ ಮಡಿವಾಳ.
ತಾನಾಗೇ ಕೆಳಗಿಳಿದ ಹಾವು:ಭಾಗಮ್ಮ ಮೈಮೇಲೆ ಏರಿದ್ದ ನಾಗರಹಾವು ಕುಟುಂಬದವರು ಏನೆಲ್ಲ ಪ್ರಯತ್ನ ಪಟ್ಟರೂ ಕೆಳಗಿಳಿಯಲಿಲ್ಲ. ಮಕ್ಕಳು ಸಮೀಪ ಬಂದು ಓಡಿಸಲು ಮುಂದಾದರೆ ಹೆಡೆ ಎತ್ತಿ ಭುಸ್ ಎನ್ನುತ್ತಿತ್ತು. ಕೊನೆಗೆ ಗಂಡ-ಮಕ್ಕಳು ಹಾವಿನಿಂದ ಮರೆಯಾದ ಬಳಿಕ ತಾನಾಗಿಯೇ ಮೈಮೇಲಿಂದ ಕೆಳಗಿಳಿದು ಮುಂದೆ ಸಾಗಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
