ಹುಬ್ಬಳ್ಳಿ:ವಿಧಾನ ಪರಿಷತ್​ನ ಶಿಕ್ಷಕರ ಪಶ್ಚಿಮ ಕ್ಷೇತ್ರದ ಚುನಾವಣೆಯ ಮತದಾನ ನಡೆಯುತ್ತಿದ್ದು, ಹಲವರು ತೆರೆಮರೆಯಲ್ಲಿ ಕೊನೇ ಹಂತದ ಕಸರತ್ತು ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಮತಗಟ್ಟೆ ಅಧ್ಯಕ್ಷಧಿಕಾರಿಯೊಬ್ಬರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆ ಅವರ ಜಾಗಕ್ಕೆ ಬೇರೆಯವರನ್ನ ನೇಮಿಸಿದ ಪ್ರಸಂಗ ಹುಬ್ಬಳ್ಳಿಯ ಬಾಸೆಲ್ ಮಿಶನ್ ಬಾಲಕರ ಶಾಲೆ ಮತಗಟ್ಟೆ ಸಂಖ್ಯೆ 26ರಲ್ಲಿ ನಡೆದಿದೆ.
26ರ ಮತಗಟ್ಟೆ ಅಧ್ಯಕ್ಷಧಿಕಾರಿ ಶಶಿಕಾಂತ ಮಂಟೂರ ಅವರನ್ನು ಬದಲಾವಣೆ ಮಾಡಲಾಯಿತು. ಮತಪತ್ರದಲ್ಲಿದ್ದ ಕ್ರಮ ಸಂಖ್ಯೆ 1ಕ್ಕೆ 1ನೇ ಪ್ರಾಶಸ್ತ್ಯ, ಕ್ರಮ ಸಂಖ್ಯೆ 2ಕ್ಕೆ 2ನೇ ಪ್ರಾಶಸ್ತ್ಯ ಹಾಗೂ ಕ್ರಮ ಸಂಖ್ಯೆ 3ಕ್ಕೆ 3ನೇ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಶಿಕ್ಷಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂಬ ದೂರು ಬಂದ ಹಿನ್ನೆಲೆಯಲ್ಲಿ ಇವರನ್ನು ಬದಲಾವಣೆ ಮಾಡಲಾಗಿದೆ.
ಮತ ಪತ್ರದ ಕ್ರಮ ಸಂಖ್ಯೆ 2ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ, ಕ್ರಮ ಸಂಖ್ಯೆ 2ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಹೆಸರಿದೆ. ಕಣದಲ್ಲಿ 7 ಅಭ್ಯರ್ಥಿಗಳಿದ್ದು, 1ರಿಂದ 7ರವರೆಗೆ ಪ್ರಾಶಸ್ತ್ಯದ ಮತ ಚಲಾಯಿಸಲು ಈ ಚುನಾವಣೆಯಲ್ಲಿ ಅವಕಾಶವಿದೆ.
ಘಟನೆ ಬಳಿಕ ಅಭ್ಯರ್ಥಿ ಬಸವರಾಜ ಹೊರಟ್ಟಿ ಹಾಗೂ ಬಿಜೆಪಿ ‌ಮುಖಂಡರು ಮತಗಟ್ಟೆಗೆ ಭೇಟಿ ನೀಡಿದ್ದರು. ಮತಗಟ್ಟೆಯ ಎಆರ್​ಒ ಹಾಗೂ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಶಿಕ್ಷಕ ಮತದಾರರಾದ ಶಿಬಾ ಪ್ರತಾಪನ್, ಆರ್.‌ಎಂ. ವರಕೋಟಿ ಹಾಗೂ ಸುನೀಲ ನಾಜರೆ ಲಿಖಿತ ದೂರು ನೀಡಿದ್ದಾರೆ.
ಲಲಿತ ಮಹಲ್​ ಪ್ಯಾಲೇಸ್​ ಖಾಸಗಿ ತೆಕ್ಕೆಗೆ? ಸಿಎಂ ಅಧ್ಯಕ್ಷತೆಯಲ್ಲಿ ನಾಳೆ ಸಂಪುಟ ಉಪ ಸಮಿತಿ ಸಭೆ

ಬದುಕಿರುವಾಗಲೇ ಗುಬ್ಬಿ ಶಾಸಕ ಶ್ರೀನಿವಾಸ್​ರ ತಿಥಿ ಕಾರ್ಡ್​ ತಯಾರಿಸಿ ವಿಕೃತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
