ಬೆಂಗಳೂರು:ಈಕೆಯ ಪಾಲಿಗಂತೂ ಜನ್ಮದಿನವೇ ಸಾವಿನ ದಿನವಾಗಿದೆ. ಇಂಥದ್ದೊಂದು ದುರಂತ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ. ಮನೆಯವರು ಬೇಡ ಎಂದರೂ ಕೇಳದೆ ಹೋಗಿದ್ದವಳು ಸಾವಿಗೀಡಾದಂಥ ಪ್ರಕರಣವೊಂದು ನಡೆದುಹೋಗಿದೆ.
ಮಹಶ್ರೀ ಸಾವಿಗೀಡಾದ ಯುವತಿ. ಈಕೆ ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜತೆಗೆ ಪಾರ್ಟ್​​ಟೈಮ್ ಆಗಿ ಟೆಕ್ಸ್​ಟೈಲ್ಸ್​ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಇವತ್ತು ಜನ್ಮದಿನದ ಖುಷಿಯಲ್ಲಿ ಈಕೆ ಹೊರಗೆ ಹೋಗಿದ್ದು, ಮನೆಯವರ ಪಾಲಿಗಂತೂ ಅದು ಶೋಕದ ದಿನವಾಗಿ ಪರಿಣಮಿಸಿದೆ.
ಇದನ್ನೂ ಓದಿ:#MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!
‘ಇವತ್ತು ಜನ್ಮದಿನವಾದ್ದರಿಂದ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಇರು..’ ಎಂದು ಪಾಲಕರು ಹೇಳಿದ್ದರು. ಆದರೂ ಕೇಳದ ಈಕೆ ಕೆಲಸಕ್ಕೆ ಹೊರಟಿದ್ದಳು. ನ್ಯೂ ಬಿಇಎಲ್​ ಬಸ್​ ನಿಲ್ದಾಣದವರೆಗೂ ಚಿಕ್ಕಪ್ಪನೇ ಈಕೆಯನ್ನು ಬಿಟ್ಟು ಬಂದಿದ್ದರು.
ಇದನ್ನೂ ಓದಿ:ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ
ಆದರೆ ಆ ನಂತರ ದುರಂತವೊಂದು ಸಂಭವಿಸಿದೆ. ಅಲ್ಲಿಂದ ಈಕೆ ಗೆಳೆಯನ ಜತೆ ಬೈಕ್​ನಲ್ಲಿ ಹೋಗಿದ್ದಳು. ಆಗ ಮಾರ್ಗಮಧ್ಯೆ ಆಯತಪ್ಪಿ ಈಕೆ ಕೆಳಕ್ಕೆ ಬಿದ್ದಿದ್ದಾಳೆ. ಅದೇ ಸಮಯಕ್ಕೆ ಬರುತ್ತಿದ್ದ ಕ್ಯಾಂಟರ್​ ವಾಹನ ಯುವತಿಯ ಮೇಲೆ ಸಾಗಿದ್ದರಿಂದ ಈಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

ತಂದೆಯ ಚೀರಾಟ ಕೇಳಿ ಪುತ್ರ ಬಳಿಗೆ ಹೋದ; ಕೆಲವೇ ಕ್ಷಣಗಳಲ್ಲಿ ಸಾವಿಗೀಡಾದ್ರು ಅಪ್ಪ-ಮಗ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + four =
Remember me
