ಬೆಂಗಳೂರು: ಶರಣ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ನಿಜಸುಖಿ ಹಡಪದ ಅಪ್ಪಣ್ಣ ಮತ್ತು ನಿಜಮುಕ್ತೆ ಲಿಂಗಮ್ಮನವರ ಸ್ಮರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ರಾಜರಾಜೇಶ್ವರಿನಗರ ಘಟಕದ ಆಶ್ರಯದಲ್ಲಿ ಅನ್ನಪೂರ್ಣೇಶ್ವರಿ ನಗರದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ಆಯೋಜಿಸಿದ್ದ ಮಾಸಿಕ ಶರಣ ಸಂಜೆ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ, ಲಿಂಗಮ್ಮ ಅವರ ತತ್ವಾದರ್ಶಗಳ ಚಿಂತನೆ ನಡೆಯಿತು.
ಈ ಸಂದರ್ಭದಲ್ಲಿ ಶರಣ ಹಡಪದ ಅಪ್ಪಣ್ಣನವರ ಹೆಸರಲ್ಲಿ ಶಾಶ್ವತ ದತ್ತಿನಿಧಿ ಸ್ಥಾಪಿಸಿರುವ ಯೋಗತಜ್ಞೆ ವನಜಾಕ್ಷಿ ನಾಗೇಂದ್ರಪ್ಪ ಮಾತನಾಡಿ, ಅನುಭವ ಮಂಟಪದಲ್ಲಿ ಯಾವುದೇ ಭೇದ-ಭಾವಗಳಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣತ್ತಿದ್ದುದಕ್ಕೆ ಹಲವು ಸಾಕ್ಷಿಗಳಿವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡಾ ಸಮಾನ ಅವಕಾಶವನ್ನು ನೀಡಬೇಕೆಂಬ ಸಾಮಾಜಿಕ ಚಿಂತನೆಯನ್ನು ಸಾಧಿಸಿದವರು ಬಸವಾದಿ ಶರಣರು. ಹಲವಾರು ಮಹಿಳೆಯರು ಶರಣ ಕ್ರಾಂತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಅವರು ಬರೆದ ಒಂದೊಂದು ವಚನಗಳು ಜೀವನಕ್ಕೆ ದಾರಿದೀಪಗಳಾಗುತ್ತವೆ. ಯಾವುದೇ ಪದವಿ, ಪಿಎಚ್‌ಡಿ ಮಾಡದ ಸಾಮಾನ್ಯ ಮಹಿಳೆಯರು ತಮ್ಮ ಕಾಯಕದ ಜೊತೆಗೆ ಅದ್ಭುತವಾದ ವಚನಗಳನ್ನು ರಚಿಸಿದ್ದಾರೆ. ಕೆಲಸಕ್ಕೆ ಕಾಯಕದ ಪಾವಿತ್ರ್ಯತೆ, ಪದಾರ್ಥಕ್ಕೆ ಪ್ರಸಾದದ ಹಿರಿಮೆ ತಂದು ಕೊಟ್ಟ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಅಭಾಶಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ರಾಜರಾಜೇಶ್ವರಿ ನಗರ ಘಟಕದ ಅಧ್ಯಕ್ಷ ಸಂಗಮೇಶ ಗೌಡಪ್ಪನವರ್, ಪೂರ್ಣಚಂದ್ರ ತೇಜಸ್ವಿ ಫೌಂಡೇಶನ್ ಅಧ್ಯಕ್ಷ ಆರ್.ಚನ್ನಕೇಶವಮೂರ್ತಿ, ದತ್ತಿದಾನಿಗಳಾದ ಎಂ.ಆರ್.ನಾಗೇಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 13 =
Remember me
