ಬೆಂಗಳೂರು:ಅತಿವೃಷ್ಟಿ, ಪ್ರವಾಹದ ಚರ್ಚೆ ಸಂದರ್ಭದಲ್ಲಿ ‘ಕಮಿಷನ್’ ಆರೋಪ ಪ್ರಸ್ತಾಪವಾಗಿ‌ ಬುಧವಾರ ಮೇಲ್ಮನೆಯಲ್ಲಿ ಗದ್ದಲ ಸೃಷ್ಟಿಯಾಗಿತ್ತು. ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವೆ ಮಾತಿನ ಚಕಮಕಿ, ಕಾಂಗ್ರೆಸ್ ನವರ ಧರಣಿ, ಪರ-ವಿರೋಧ ಘೋಷಣೆ ನಿಲ್ಲದ ಕಾರಣ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಕಲಾಪವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು.
ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಬೆಂಗಳೂರಿನಲ್ಲಿ ಮಳೆ ಅವಾಂತರ ಕುರಿತು ಮಾತನಾಡುತ್ತಾ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಶೇ.40 ಕಮಿಷನ್ ಲೂಟಿ ಹೊಡೆದಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಸಚಿವ ಅಶ್ವತ್ಥ ನಾರಾಯಣ್​ ಆಕ್ಷೇಪಿಸಿದರು. ಸಾಕ್ಷಿ, ದಾಖಲೆಯಿಟ್ಟು ಮಾತನಾಡಿ. ಗುತ್ತಿಗೆದಾರರ ಸಂಘದ ಕೆಂಪಣ್ಣ ಹೇಳಿದ್ದನ್ನು ಇಲ್ಲಿ ಹೇಳಬೇಡಿ ಎಂದು ಅಶ್ವತ್ಥ ನಾರಾಯಣ್​ ಹೇಳುತ್ತಿದ್ದಂತೆ, ತನಿಖೆಗೆ ದಾಖಲೆ ಕೊಟ್ಟು ಸಾಬೀತುಪಡಿಸಲು ಸಿದ್ಧ ಎಂದು ಹರಿಪ್ರಸಾದ್​ ಸವಾಲು ಹಾಕಿದರು.
ಈ ಮಧ್ಯೆ ಕಾಂಗ್ರೆಸ್​ನ ನಾಗರಾಜ್ ಮತ್ತು ಪ್ರಕಾಶ ರಾಥೋಡ್ ಸೇರಿದಂತೆ ಹಲವು ಸದಸ್ಯರು ಒಟ್ಟಿಗೆ ಎದ್ದು ನಿಂತು, ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿ ಶೇ.10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಆಗ ಅವರೇನು ದಾಖಲೆ ಕೊಟ್ಟು ಮಾತನಾಡಿದ್ದರೆ? ಎಂದು ಪ್ರಶ್ನಿಸಿದರು. ಇದಕ್ಕೆ ಆಡಳಿತ ಪಕ್ಷದವರು ತಗಾದೆ‌ ತೆಗೆದರು. ಹರಿಪ್ರಸಾದ್ ಹಾಗೂ ಅಶ್ವತ್ಥ ನಾರಾಯಣ್​ ಮಧ್ಯೆ ವಾಗ್ವಾದ ಮುಂದುವರಿದಿತ್ತು.
ಸಭಾಪತಿ ಪೀಠದ ಮುಂದೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು. ಘೋಷಣೆ ಕೂಗಿದರು. ಅತ್ತ ಬಿಜೆಪಿ ಸದಸ್ಯರೂ ವಾಗ್ದಾಳಿ ಮುಂದುವರಿಸಿದರು. ಇವರನ್ನು ಮನವೊಲಿಸಲು ಸಭಾಪತಿ ಪ್ರಯತ್ನಿಸಿದರೂ ಪ್ರಯೋಜನವಾಗದ ಕಾರಣ ಕಲಾಪವನ್ನು 10 ನಿಮಿಷ ಮುಂದೂಡಿದರು.
ಕಿರುತೆರೆ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಗಂಭೀರ

ಮೈಸೂರು ಅರಮನೆಯಲ್ಲಿ ಮರಿಗೆ ಜನ್ಮ ನೀಡಿದ ಲಕ್ಷ್ಮೀ ಆನೆ! ಆನೆ ಗರ್ಭಿಣಿ ಎಂಬುದು ನಮ್ಗೆ ಗೊತ್ತೇ ಇರಲಿಲ್ಲ… ಎಂದ ಅಧಿಕಾರಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
