ಶಿವಮೊಗ್ಗ:ಪರಸ್ತ್ರೀಗಾಗಿ ಕೋಮುಗಲಭೆಯ ನಾಟಕವಾಡಿದ್ದ ಯುವಕನೊಬ್ಬಗೆ ಸಂಕಷ್ಟ ಎದುರಾಗಿದೆ. ತನ್ನ ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ್ದ ಯುವಕ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ಒಟ್ಟಿಗೆ ಇರಬೇಕೆಂದು ಬಯಸಿದ್ದ. ಸ್ನೇಹಿತ ಮನೆಯಲ್ಲೇ ಇದ್ದರೆ ತನ್ನ ಆಸೆ ಈಡೇರುವುದಿಲ್ಲ. ಹೇಗಾದರೂ ಮಾಡಿ ಆತನನ್ನು ಮನೆಯಿಂದ ಹೊರ ಹೋಗುವಂತೆ ಮಾಡಬೇಕು. ಬಳಿಕ ಆಕೆಯನ್ನ ತನ್ನ ಮೋಹದ ಬಲೆಗೆ ಬೀಳಿಸಿಕೊಳ್ಳಬೇಕೆಂದು ಯೋಚಿಸಿದ್ದ. ಅದಕ್ಕಾಗಿ ಆತ ಬಳಸಿದ್ದು ಕೋಮುಗಲಭೆ ಮತ್ತು ಹತ್ಯೆ ಸಂಚಿನ ಆರೋಪದ ಅಸ್ತ್ರ! ಹೌದು, ಇಂತಹ ಆಘಾತಕಾರಿ ಪ್ರರಕಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?:ಆಜಾದ್‌ನಗರದ ಯುವಕ ಮತ್ತು ಸೂಳೇಬೈಲ್‌ನ ಯುವಕ ಇಬ್ಬರೂ ಸ್ನೇಹಿತರು. ಸೂಳೇಬೈಲ್‌ನ ಯುವಕನಿಗೆ ಆಜಾದ್ ನಗರದ ಯುವಕನ ಪತ್ನಿಯ ಪರಿಚಯ ಇತ್ತು. ಸ್ನೇಹಿತನ ಪತ್ನಿಯನ್ನು ತನ್ನ ವಶ ಮಾಡಿಕೊಳ್ಳಲು ಸೂಳೇಬೈಲ್‌ನ ಯುವಕ, ಸ್ನೇಹಿತನ ಮೇಲೆ ಅನುಮಾನ ಬರುವಂತೆ ಪತ್ರ ಬರೆದು ಆ.20ರಂದು ಗಾಂಧಿಬಜಾರ್‌ನ ದುರ್ಗಾಪರಮೇಶ್ವರಿ ದೇವಸ್ಥಾನದ ಡೋರ್‌ನಲ್ಲಿ ಖಾಕಿ ಕವರ್‌ನಲ್ಲಿಟ್ಟಿದ್ದ. ಆ ಪತ್ರ ಗಾಂಧಿಬಜಾರ್‌ನ ವ್ಯಾಪಾರಿ ಎಸ್.ಪ್ರಶಾಂತ್ ಅವರಿಗೆ ಸಿಕ್ಕಿತ್ತು. ಈ ಪತ್ರದಲ್ಲಿದ್ದ ಮಾಹಿತಿ ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿತ್ತು. ಗಣೇಶೋತ್ಸವಕ್ಕೆ ವಿಘ್ನ ಎದುರಾಗುವ ಆತಂಕ ನಿರ್ಮಾಣವಾಗಿತ್ತು.
ಪತ್ರದಲ್ಲಿ ಏನಿದೆ?:‘ಗಣಪತಿ ಹಬ್ಬದ ವೇಳೆ ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಸುವುದು ಮತ್ತು ಮೂವರ ಹತ್ಯೆಗೆ ಸಂಚು ರೂಪಿಸಲಾಗಿದೆ. ಗಣಪತಿ ಹಬ್ಬದ ವೇಳೆ ಶಾಂತಿಭಂಗ ಉಂಟುಮಾಡುವ ಪ್ರಯತ್ನ ನಡೆದಿದೆ. ಆ.15ರಂದು ಚಾಕು ಇರಿದಿದ್ದವನ ಪ್ರಾಣ ತೆಗೆಯಲು ಸಂಚು ರೂಪಿಸಿದ್ದಾರೆ. ನನ್ನ ಕೈ ನಡುಗುತ್ತಿರುವುದರಿಂದ ಅಕ್ಷರಗಳು ತಪ್ಪಾಗಿರಬಹುದು. ನಾನು ಬಟ್ಟೆ ಮಾರುಕಟ್ಟೆಯ ಮಾರ್ವಾಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಗಾಂಜಾ ಸೇವಿಸಿದ್ದ ಮೂವರು ಹುಡುಗರು ಕೋಮುಗಲಭೆ ಮತ್ತು ಕೊಲೆ ಮಾಡುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ಕೃತ್ಯ ಎಸಗಲು ಮಂಗಳೂರಿನಿಂದ ಮೂವರನ್ನು ಕರೆಸಿಕೊಳ್ಳಬೇಕು. ಮೊಬೈಲ್ ಮತ್ತು ಯಾವುದೇ ವಾಹನ ಬಳಸಬಾರದು, ಯಾರಿಗೂ ಅನುಮಾನ ಬರಬಾರದು. ಗಣೇಶನ ಹಬ್ಬ ಮಾಡುವುದಕ್ಕೆ ಬಿಡಬಾರದು. ಗಲಾಟೆ ಆದರೆ ಗಣಪತಿ ಹಬ್ಬ ನಡೆಯುವುದಿಲ್ಲ ಎಂದು ಆ ಮೂವರರೂ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲಿ ಆಜಾದ್ ನಗರದ ಇಂಥ ಯುವಕ ಫೇಮಸ್ ಆಗಿದ್ದಾನೆ. ಗಾಂಜಾ ಸೇವನೆ, ಮಾರಾಟ ಮತ್ತು ರೌಡಿಸಂ ಮಾಡಿಕೊಂಡಿದ್ದಾನೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಸಂಚಲನ ಮೂಡಿಸಿದ್ದ ಬೆದರಿಕೆ ಪತ್ರ:ಶಿವಮೊಗ್ಗದಲ್ಲಿ ಪ್ಲೆಕ್ಸ್ ವಿವಾದ ತಣ್ಣಗಾಗಿದ್ದು, ಗಣೇಶೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಿಕ್ಕ ಇಂಥ ಪತ್ರ ಸಂಚಲನ ಸೃಷ್ಟಿ ಮಾಡಿತ್ತು. ಪೊಲೀಸರು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ್ದರು. ಪತ್ರದಲ್ಲಿ ಹೆಸರು ಉಲ್ಲೇಖವಾಗಿದ್ದ ಆಜಾದ್ ನಗರದ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತ ಯಾವುದೇ ಸಂಚು ರೂಪಿಸಿಲ್ಲ ಎಂಬುದು ಪೊಲೀಸರಿಗೂ ಮನವರಿಕೆಯಾಗಿದೆ. ಆನಂತರ ಈತನೊಂದಿಗೆ ಸಂಪರ್ಕದಲ್ಲಿದ್ದವರ ಹುಡುಕಾಟ ನಡೆಸುತ್ತಿದ್ದಾಗ ಸೂಳೇಬೈಲಿನ ಸ್ನೇಹಿತ ತನ್ನ ಪತ್ನಿಯೊಂದಿಗೆ ಸುಲಿಗೆಯಿಂದ ಇರುವ ಬಗ್ಗೆ ಆಜಾದ್ ನಗರದ ಯುವಕ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಸೂಳೇಬೈಲಿನ ಯುವಕನನ್ನು ಕರೆಸಿ ವಿಚಾರಣೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ಕೋಟೆ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ.ಚಂದ್ರಶೇಖರ್ ನೇತೃತ್ವದ ತಂಡ ಬೆದರಿಕೆ ಪತ್ರದ ಹಿಂದಿನ ಅಸಲಿಯತ್ತನ್ನು ಬಯಲು ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಇದು ಸ್ನೇಹಿತನನ್ನೇ ಜೈಲಿಗೆ ಕಳುಹಿಸುವ ಸಂಚು ಎಂಬುದು ದೃಢಪಟ್ಟಿದೆ.
ತಪ್ಪೊಪ್ಪಿಕೊಂಡ ಸೂಳೇಬೈಲಿನ ಯುವಕ:ಸ್ನೇಹಿತನ ಪತ್ನಿಯ ಮೇಲೆ ವ್ಯಾಮೋಹ ಉಂಟಾಗಿತ್ತು. ಸ್ನೇಹಿತನನ್ನು ಜೈಲಿಗೆ ಕಳುಹಿಸಿದರೆ ಆತನ ಪತ್ನಿಯೊಂದಿಗೆ ಇರಬಹುದು ಎಂಬ ಕಾರಣಕ್ಕೆ ಈ ಕೆಲಸ ಮಾಡಿದೆ ಎಂದು ಸೂಳೇಬೈಲಿನ ಯುವಕ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಗಣಪತಿ ಹಬ್ಬದ ಸಮಯದಲ್ಲಿ ಶಾಂತಿ ಕದಡುವ ಪ್ರಯತ್ನದಲ್ಲಿ ಯಾರಾದರೂ ಭಾಗಿಯಾದರೆ ಅಂಥವರನ್ನು ಜೈಲಿಗೆ ಕಳುಹಿಸುವುದು ನಿಶ್ಚಿತ ಎಂಬ ಕಾರಣಕ್ಕೆ ಈ ರೀತಿ ಮಾಡಿದೆ. ಸ್ನೇಹಿತನನ್ನು ಯಾವುದಾದರೂ ಕೇಸ್‌ನಲ್ಲಿ ಫಿಕ್ಸ್ ಮಾಡಿ ಜೈಲಿಗೆ ಕಳುಹಿಸಿ ಆತನ ಪತ್ನಿಯೊಂದಿಗೆ ಸುಖವಾಗಿರಲು ಪ್ರಯತ್ನಿಸಿದ್ದೆ ಎಂದು ಹೇಳಿದ್ದಾನೆ. ಆರೋಪಿಯನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಸಿದ್ದಾರೆ. ವಿವಿಧ ಕಾರಣಗಳಿಗೆ ಶಿವಮೊಗ್ಗದಲ್ಲಿ ಕಳೆದೆರಡು ವಾರದಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಿದ್ದು, ಈ ಸಂದರ್ಭವನ್ನೇ ಪರಸ್ತ್ರೀಗಾಗಿ ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ್ದು ವಿಪರ್ಯಾಸ.
ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ಸಾವು: ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪ್ರಧಾನಿ

ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
