ತುಮಕೂರು:ಗುಬ್ಬಿ ತಾಲೂಕು ಚೇಳೂರು ಠಾಣೆಯ ಮಹಿಳಾ ಪಿಎಸ್​ಐ ವಿಜಯಕುಮಾರಿ ಯುವಕನೊಬ್ಬನಿಗೆ ಥಳಿಸಿ ಸೊಂಟದ ಮೂಳೆ ಮುರಿದಿದ್ದಾರೆ!
ಕೋಡಿಯಾಲದ ಮಣಿಕಂಠ ಮೂಳೆ ಮುರಿತಕ್ಕೊಳಗಾದವ. ಕೋಡಿಯಾಲದ ಬೀದಿಯಲ್ಲಿರುವ ನೀರಿನ ಪೈಪ್​ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಕಂಠನ ತಂದೆ ಮುನಿಯಪ್ಪ ಹಾಗೂ ಪಕ್ಕದ ಮನೆಯ ಯಲ್ಲಮ್ಮ, ಶಿವಮೂರ್ತಿ ಎಂಬುವರ ನಡುವೆ ಜಗಳ ಆಗಿತ್ತು. ಈ ಬಗ್ಗೆ ಯಲ್ಲಮ್ಮ ಮತ್ತು ಶಿವಮೂರ್ತಿ ಚೇಳೂರು ಠಾಣೆಯಲ್ಲಿ ಮಣಿಕಂಠನ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಗಾಗಿ ಮಣಿಕಂಠನನ್ನು ಪೊಲೀಸ್​ ಠಾಣೆಗೆ ಕರೆಸಿಕೊಂಡ ಪಿಎಸ್​ಐ ವಿಜಯಕುಮಾರಿ, ಆತನನ್ನು ಮನಬಂದಂತೆ ಥಳಿಸಿದ್ದರು. ಇದರಿಂದ ಆತನ ಸೊಂಟದ ಮೂಳೆ ಮುರಿದಿದೆ. ಮೂರು ದಿನ ಊಟ ಮತ್ತು ನೀರು ಕೊಡದೆ ಠಾಣೆಯಲ್ಲಿ ಕೂಡಿ ಹಾಕಿದ್ದರು ಎಂದು ಮಣಿಕಂಠನ ಪಾಲಕರು ಆರೋಪಿಸಿದ್ದಾರೆ.
ಮಣಿಕಂಠ 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾನೆ. ಈ ಬಗ್ಗೆ ದೂರು ನೀಡಿದರೆ, ಜಗಳ ಪ್ರಕರಣದಲ್ಲಿ ಜಾಮೀನು ಸಿಗದಂತೆ ಮಾಡುವುದಾಗಿ ವಿಜಯಕುಮಾರಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ, ದೂರು ನೀಡಲು ತಡವಾಗಿದ್ದಾಗಿ ಮಣಿಕಂಠ ಹೇಳಿದ್ದಾನೆ.
ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:5 × one =
Remember me
