ಬೆಂಗಳೂರು:ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಕೋರ್ಟ್​ನಲ್ಲಿ ಸಿಡಿ ಲೇಡಿ ಪರವಾಗಿ ವಾದಿಸುತ್ತಿರುವುದು ವಕೀಲ ಕೆ.ಎನ್.ಜಗದೀಶ್ ಅಲ್ಲ. ಬದಲಿಗೆ ಮಂಜು ಎನ್ನುವ ವಕೀಲ ಯುವತಿ ಪರ ವಕಾಲತ್ತು ವಹಿಸಿದ್ದಾರೆ. ಆದರೆ ಜಗದೀಶ್ ಅವರು ಸುಮ್ಮನೇ ಬೀದಿ ರಂಪಾಟ ಮಾಡುತ್ತಿದ್ದಾರೆ ಎಂದು ಎಸ್​ಐಟಿ ಆರೋಪಿಸಿದೆ.
ಅಲ್ಲದೇ ಈ ಕುರಿತು ಜಗದೀಶ್ ವಿರುದ್ಧ ಎಸ್​ಐಟಿ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ದೂರನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ:ದ್ವೀಪ ರಾಷ್ಟ್ರ ತೈವಾನ್​ನಲ್ಲಿ ಭೀಕರ ರೈಲು ಅಪಘಾತ: 48 ಜನ ಸಾವು
ಪ್ರಕರಣದಲ್ಲಿ ಜಗದೀಶ್ ವಿನಾಕಾರಣ ಮೂಗು ತೂರಿಸುವ ಪ್ರಯತ್ನ ಮಾಡ್ತಿದ್ದಾರೆ. ಯುವತಿಯ ಪರ ವಕಾಲತ್ತು ಹಾಕಿರೋದು ಮಂಜು ಎಂಬುವವರು. ಆದರೆ, ಇವರು ವಕಾಲತ್ತು ಇಲ್ಲದಿದ್ದರೂ ಬಂದು ತನಿಖಾಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲಸ ಮಾಡುವ ಜಾಗದಲ್ಲಿ ಬಂದು ನಿಂತು ಸುಖಾಸುಮ್ಮನೆ ಕೂಗಾಟ ಮಾಡುವುದು. ಪದೇ ಪದೇ ಮಾಧ್ಯಮಗಳ ಮುಂದೆ ನಿಂತು ಎಸ್ಐಟಿಗೆ ನಿಂದನೆ ಮಾಡುವುದು. ಆರೋಪಿ ಬಂಧಿಸಿಲ್ಲ ಅಂತಾ ಪದೇ ಪದೇ ಹೇಳಿ ಒತ್ತಡ ಹಾಕುವುದನ್ನು ಜಗದೀಶ್ ಮಾಡುತ್ತಿದ್ದಾರೆ ಎಂದು ಎಸ್​ಐಟಿ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆ.ಎನ್.ಜಗದೀಶ್, ಸಂತ್ರಸ್ತೆ ಹೇಳಿದ್ರಿಂದಲೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ. ಹಾಗೇನಾದರೂ ಇದ್ದಲ್ಲಿ ಎಸ್ಐಟಿ ನನಗೆ ನೊಟೀಸ್ ನೀಡಲಿ, ನಾನು‌ ಮಾಹಿತಿ ನೀಡುವುದನ್ನ ನಿಲ್ಲಿಸುತ್ತೇನೆ ಎಂದಿದ್ದಾರೆ.
ಸಿಡಿ ಪ್ರಕರಣ: ಪ್ರಕರಣ ಮುಕ್ತಾಯವಾದ ಮೇಲೆ ಬಂಧನದ ಪ್ರಶ್ನೆ ಮಾಡ್ರಪ್ಪ ಎಂದ ಪೊಲೀಸ್​ ಮಹಾನಿರ್ದೇಶಕ

ಸಿಡಿ ಪ್ರಕರಣ: ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್​ಗೂ ಶುರುವಾಯ್ತು ಸಂಕಷ್ಟ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + ten =
Remember me
