|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದ ನಗರ ಮತ್ತು ಪಟ್ಟಣಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವ ಹಾಗೂ ನಾಗರಿಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ (ಇಟಞಟ್ಟಛಿಜಛ್ಞಿಠಜಿಡಛಿ ಈಛಿಡಛ್ಝಿಟಟಞಛ್ಞಿಠಿ ಕ್ಝಚ್ಞ) ತಯಾರಿಸುವ ಕಾರ್ಯ ಭರದಿಂದ ಸಾಗಿದ್ದು, ಬಹುತೇಕ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಭಿವೃದ್ಧಿ ಹಾಗೂ ಹೂಡಿಕೆಗೆ ಪೂರಕವಾಗುವ ರೀತಿಯಲ್ಲಿ ಅಭಿವೃದ್ಧಿ ನಕ್ಷೆಯನ್ನು ಸಿಡಿಪಿ ಮೂಲಕ ರಚನೆ ಮಾಡಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆಯೇ ಸಿಡಿಪಿ ಸಿದ್ಧವಾಗಬೇಕಾಗಿತ್ತು. ಆದರೆ ಅಧಿಕಾರಿಗಳು ವಿಳಂಬ ಮಾಡಿದ್ದರು. ಸರ್ಕಾರ ಎಚ್ಚರಿಕೆ ಕೊಟ್ಟ ನಂತರ ಸಿದ್ಧವಾಗುತ್ತಿವೆ. ಯಾವುದೇ ನಗರಕ್ಕೆ ಸಮಗ್ರ ನೀಲಿನಕ್ಷೆ ಇಲ್ಲದಿದ್ದರೆ ಅಡ್ಡಾದಿಡ್ಡಿಯಾಗಿ ಬೆಳವಣಿಗೆಯಾಗುತ್ತದೆ. ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುತ್ತದೆ.
2040ರ ಗುರಿ:ಪ್ರತಿ 20 ವರ್ಷಕ್ಕೊಮ್ಮೆ ಪ್ರತಿ ನಗರದ ಸಿಡಿಪಿ ಸಿದ್ಧವಾಗಬೇಕು. ರಾಜ್ಯದಲ್ಲಿ ನಾಲ್ಕು ವರ್ಷ ಹಿಂದೆಯೇ ಸಿಡಿಪಿಗಳನ್ನು ರಚನೆ ಮಾಡಬೇಕಾಗಿತ್ತು. ಇದೀಗ ನಗರ ಯೋಜನಾ ಪ್ರಾಧಿಕಾರಗಳ ಮೂಲಕ ಸಿದ್ಧಮಾಡುತ್ತಿದ್ದು 2040ಕ್ಕೆ ಯಾವ ನಗರ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಬೇಕು ಎಂಬ ಸ್ಪಷ್ಟತೆಯನ್ನಿಟ್ಟುಕೊಳ್ಳಲಾಗಿದೆ.
ಅಭಿವೃದ್ಧಿಗೆ ಚೌಕಟ್ಟು:ನಗರ ಮತ್ತು ಪಟ್ಟಣಗಳಲ್ಲಿ ಸರ್ಕಾರ ವಿವಿಧ ತೆರಿಗೆಗಳನ್ನು ವಸೂಲಿ ಮಾಡುತ್ತದೆ. ಅದರ ಸದ್ಬಳಕೆಯ ಮೂಲಕ ಶಹರಗಳ ಅಭಿವೃದ್ಧಿಯಾಗಬೇಕು. ಅದಕ್ಕೊಂದು ಚೌಕಟ್ಟು ಇಲ್ಲದಿದ್ದರೆ ದುರುಪಯೋಗಗಳಾಗುತ್ತದೆ.
ಹಣ ಉಳಿತಾಯ ಹೇಗೆ?:ಸಿಡಿಪಿ ಇಲ್ಲದಿದ್ದರೆ ಅನಧಿಕೃತ ಬಡಾವಣೆಗಳ ನಿರ್ಮಾಣ ಸೇರಿ ಕೆಲವೊಂದು ಅಕ್ರಮಗಳಿಗೆ ದಾರಿಯಾಗುತ್ತದೆ. ಅನಧಿಕೃತ ಬಡಾವಣೆಗಳು ರಚನೆಯಾಗಿ ಅವುಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಾಗುತ್ತದೆ. ಅವು ತೆರಿಗೆ ವ್ಯಾಪ್ತಿಗೆ ಬರುವುದು ತಡವಾಗುತ್ತದೆ. ಸಿಡಿಪಿ ಇದ್ದರೆ ಅದರ ಪ್ರಕಾರವೇ ಅಭಿವೃದ್ಧಿ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಬೊಕ್ಕಸಕ್ಕೆ ಉಳಿತಾಯವಾಗುತ್ತದೆ ಎಂದು ಮೂಲಗಳು ವಿವರಿಸುತ್ತವೆ.
ವಲಯಗಳ ಗುರುತು:ನಗರೀಕರಣದಿಂದಾಗಿ ನಗರ ಮತ್ತು ಪಟ್ಟಣಗಳು ನಿರಂತರವಾಗಿ ಬೆಳೆಯುತ್ತಿರುತ್ತವೆ. ಬೆಳವಣಿಗೆಯ ಮೇಲೆ ನಿಯಂತ್ರಣ ಹಾಕಿ ಹಸಿರು ವಲಯ, ಕೆಂಪು ವಲಯ, ಆರೆಂಜ್ ವಲಯಗಳನ್ನು ವಿಸ್ತರಿಸುವ, ಭೂಮಿಯ ಅಕ್ರಮ ಬಳಕೆ ತಪ್ಪಿಸುವುದು, ಕೈಗಾರಿಕೆಗಳಿಂದ ಮಾಲಿನ್ಯ ಸೇರಿ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರವಹಿಸುವುದು, ಹಸಿರು ಮತ್ತು ಕೆಂಪು ವಲಯಗಳಡಿನ್ನು ಕಾಯ್ದುಕೊಂಡು ಸಮಗ್ರ ಅಭಿವೃದ್ದಿ ಸಾಧಿಸುವುದನ್ನು ಈ ಮಾಸ್ಟರ್ ಪ್ಲಾ್ಯನ್ ಮೂಲಕ ಮಾಡಬಹುದಾಗಿದೆ. ಹಸಿರು ವಲಯದಲ್ಲಿ ಕೃಷಿ ಭೂಮಿ ಇರುತ್ತದೆ. ಪರಿಸರ ಮಾಲಿನ್ಯವಾಗದಂತೆ ಹಸಿರು ವಲಯ ಉಳಿಸಿಕೊಳ್ಳಲೇಬೇಕು. ಕೆಂಪು ವಲಯದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸುವುದಕ್ಕೆ ನಿರ್ಬಂಧವಿರುತ್ತದೆ. ನಗರ ಬೆಳೆದಂತೆ ಈ ವಲಯಗಳನ್ನು ವಿಸ್ತರಣೆ ಮಾಡುವುದು ಅನಿವಾರ್ಯವಾಗುತ್ತದೆ.
ಭೂಮಿ ಬಳಕೆಗೆ ನಿಯಂತ್ರಣ:ಸಿಡಿಪಿ ಇದ್ದಲ್ಲಿ ಭೂಮಿಯ ಬೇಕಾಬಿಟ್ಟಿ ಬಳಕೆಗೆ ನಿಯಂತ್ರಣ ಹಾಕಬಹುದಾಗಿದೆ. ಆದರೆ ಈ ಬಾರಿ ಸಿಡಿಪಿ ವಿಶೇಷವೆಂದರೆ ಭೂಮಿ ಪರಿವರ್ತನೆಗೆ ಅವಕಾಶ ನೀಡಲಾಗಿದೆ. ಅದರಿಂದ ಭೂಮಿಯ ಬಳಕೆಗೆ ಸ್ಪಷ್ಟತೆ ಸಿಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಮಹಾನಗರ ಪಾಲಿಕೆಗಳು: 10
ನಗರಸಭೆಗಳು: 59
ಪುರಸಭೆಗಳು: 116
ಪಟ್ಟಣ ಪಂಚಾಯಿತಿಗಳು: 97
ನಗರಾಭಿವೃದ್ಧಿ ಪ್ರಾಧಿಕಾರಗಳು: 30
108 ನಗರ:ಈಗಾಗಲೇ 35 ನಗರ ಗಳಿಗೆ ಸಿಡಿಪಿ ಜಾರಿಗೆ ಕೊಡಲಾಗಿದೆ. ಅದರಲ್ಲಿ ಬಹುತೇಕ ಜಿಲ್ಲಾ ಕೇಂದ್ರಗಳೇ ಆಗಿವೆ. ಸದ್ಯದಲ್ಲಿಯೇ 108 ನಗರಗಳ ಸಿಡಿಪಿಗೆ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಮೂಲಗಳು ವಿಜಯವಾಣಿಗೆ ತಿಳಿಸಿವೆ. ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಿಡಿಪಿ ರಚನೆ ಮಾಡಲಾಗುತ್ತದೆ.
ಎಷ್ಟು ನಗರಗಳಿಗೆ ಸಿಡಿಪಿ?:ರಾಜ್ಯದಲ್ಲಿ ಒಟ್ಟು 312 ನಗರ ಮತ್ತು ಪಟ್ಟಣಗಳಿವೆ. ಅವುಗಳಲ್ಲಿ 190 ರಾಜ್ಯ ಯೋಜನಾ ಕಾಯ್ದೆಯ ವ್ಯಾಪ್ತಿಯಲ್ಲಿದ್ದರೆ, ಉಳಿದ 122 ಯೋಜನಾ ಕಾಯ್ದೆಯ ವ್ಯಾಪ್ತಿಗೆ ಸೇರುವುದು ಬಾಕಿ ಇದೆ. ಕಾಯ್ದೆ ವ್ಯಾಪ್ತಿಗೆ ಸೇರಿರುವ ಪಟ್ಟಣಗಳಲ್ಲಿ ಮೊದಲ ಹಂತದಲ್ಲಿ ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲಾ್ಯನಿಂಗ್ ಕಾಯ್ದೆಯಡಿಯಲ್ಲಿ ಸಿಡಿಪಿ ಸಿದ್ಧವಾಗುತ್ತಿದೆ. ಉಳಿದವು ಎರಡನೇ ಹಂತದಲ್ಲಿ ಮಾಡಲಾಗುತ್ತದೆ. ಯೋಜನಾ ಪ್ರಾಧಿಕಾರಗಳು ಇರುವ ಕಡೆ ಅವುಗಳ ಮೂಲಕ, ಅವು ಇಲ್ಲದ ಕಡೆ ಸ್ಥಳೀಯ ಸಂಸ್ಥೆಗಳ ಮೂಲಕ ಸಿಡಿಪಿ ಮಾಡಲಾಗುತ್ತಿದೆ.
ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
