ಚಿಕ್ಕಬಳ್ಳಾಪುರ:ಆ್ಯಪಲ್-ದಾಳಿಂಬೆಗಾಗಿ ಕರೊನಾ ಸೋಂಕಿನ ಭೀತಿಯನ್ನೂ ಲೆಕ್ಕಿಸದೆ ಕಾಂಗ್ರೆಸ್​ ಕಾರ್ಯಕರ್ತರು ನಡು ರಸ್ತೆಯಲ್ಲಿ ಮುಗಿಬಿದ್ದಿದ್ದ ದೃಶ್ಯ ವೈರಲ್​ ಆಗಿದೆ.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ಸೋಮವಾರ ಶಾಸಕ ಸುಬ್ಬಾರೆಡ್ಡಿ ಅವರು ಹಮ್ಮಿಕೊಂಡಿದ್ದ ಬಡವರಿಗೆ ಉಚಿತವಾಗಿ ಆಹಾರ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಆಗಮಿಸಿದ್ದರು. ಮಿಟ್ಟೇಮರಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ರಕ್ಷಾ ರಾಮಯ್ಯ ಅವರನ್ನ ತಂದು ಸೇಬು-ದಾಳಿಂಬೆಯ ಬೃಹತ್​ ಹಾರ ಹಾಕಿ ಸ್ವಾಗತಿಸಲಾಯಿತು. ಈ ವೇಳೆ ಆ್ಯಪಲ್-ದಾಳಿಂಬೆ ಹಣ್ಣುಗಳನ್ನು ಮೇಲಿಂದ ಎಸೆಯುತ್ತಿದ್ದರೆ, ಕಾರ್ಯಕರ್ತರು ನಾ ಮುಂದು-ತಾ ಮುಂದು ಎಂಬಂತೆ ಮುಗಿಬಿದ್ದಿದ್ದು ಹಿಡಿದುಕೊಂಡರು.
ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್​ ಸೇರಲಿದೆ ಯುವಪಡೆ! ಆ ಲಿಸ್ಟ್ ಇಲ್ಲಿದೆ
VIDEO| ಸಿಎಂ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ಸೇರಲು ದಿಲ್ಲಿಯಲ್ಲಿ ಶಾಸಕರ ಪರೇಡ್!

Sign in to your account
Please enter an answer in digits:20 − sixteen =
Remember me
