ಗದಗ:ದೇಶದಲ್ಲಿ ಭ್ರಷ್ಟಾಚಾರ ಪರಂಪರೆ ಆರಂಭಿಸಿದ್ದೇ ಕಾಂಗ್ರೆಸ್. ಎಲ್ಲಾ ರಂಗದಲ್ಲೂ ಕಾಂಗ್ರೆಸ್​ನವರು ಭ್ರಷ್ಟಾಚಾರ ಹಬ್ಬಿಸಿದ್ರು. ಇದಕ್ಕಾಗಿಯೇ ಜನ ಅವರನ್ನು ಮನೆಗೆ ಕಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ ಸಂಬಂಧ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬೆಳವಣಿಗೆ ನಡುವೆ ಗದಗ ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ನವರು ಹತಾಶರಾಗಿ ನಮ್ಮ ನಾಯಕರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಎಸ್ಸಿ-ಎಸ್ಟಿ ಹಾಸ್ಟೆಲ್ ಮಕ್ಕಳಿಗೆ ಹಾಸಿಗೆ, ದಿಂಬು ಕೊಡುವಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಆದರೀಗ ಸ್ವಚ್ಛ ಮುತ್ತುಗಳಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವಿರೋಧ ಪಕ್ಷವಾಗಿ ನೀವು ವಿಫಲರಾಗಿದ್ದೀರಿ. ಸಾವಿನ ಮನೆಯಲ್ಲಿ ರಾಜಕೀಯ ಲಾಭದ ಎಣಿಕೆ ಮಾಡುವ ಬುದ್ಧಿ ಬಿಡಿ. ವಿರೋಧ ಪಕ್ಷದಲ್ಲಿ ತೊಳಲಾಟ ಶುರುವಾಗಿದೆ. ಅದನ್ನೆಲ್ಲ ಬಿಟ್ಟು ನಮ್ಮ ನಾಯಕ ಈಶ್ವರಪ್ಪ ಮೇಲೆ ಗೂಬೆ ಕೂರಿಸೋ ಪ್ರಯತ್ನ ನಡೆದಿದೆ ಎಂದು ಆಕ್ರೋಶ ಹೊರ ಹಾಕಿದ ಸಿಎಂ, ಸಂತೋಷ್​ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದರು.
ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಬಜೆಟ್ ಕೊಟ್ಟಿದ್ದೇವೆ. ಈಗ ದುಡುಮೆಯೇ ದೊಡ್ಡಪ್ಪ ಅನ್ನೋ ಕಾಲ ಬಂದಿದೆ. ಹಿಂದೆ ನಾವು ಆ ಭಾಗ್ಯ ಕೊಟ್ವಿ, ಈ ಭಾಗ್ಯ ಕೊಟ್ವಿ ಅಂತ ದೊಡ್ಡದಾಗಿ ಭಾಷಣ ಮಾಡ್ತಿದ್ದರು. ಆದ್ರೆ ಎಲ್ಲವೂ ಕೇವಲ ಭಾಷಣದ ಭಾಗ್ಯ ಕೊಟ್ರು. ಇದೀಗ ರಾಜ್ಯದ ದೌರ್ಭಾಗ್ಯವಾಗಿ ಹೋಯ್ತು. 2023ರ ಚುನಾವಣೆಗೆ ನಮ್ಮ ಕೆಲಸಗಳನ್ನು ಮುಂದಿಟ್ಟುಕೊಂಡು ನಾವು ಜನರ ಮುಂದೆ ಹೋಗಬೇಕು. ಮನೆ ಮನೆಗೆ ಪ್ರಚಾರ ಮಾಡಿ. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಸಿಎಂ ಕರೆ ನೀಡಿದರು.
ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…

ನಾನು ಶಾಸಕ, ಸಚಿವ, ಡಿಸಿಎಂ ಆಗಿದ್ದೀನಿ… ಆದ್ರೆ ನನ್ನನ್ನು ಈಗಲೂ ದೇವಸ್ಥಾನಕ್ಕೆ ಸೇರಿಸಲ್ಲ: ಡಾ.ಪರಮೇಶ್ವರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
