ಬೆಂಗಳೂರು:ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಡಬಲ್‌ ಇಂಜಿನ್ ಸರ್ಕಾರ ಡಬಲ್‌ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಇಂದಿನಿಂದ ದಿನಕ್ಕೊಂದು ಪ್ರಶ್ನೆ ಕೇಳುವ ಅಭಿಯಾನ ಆರಂಭಿಸಲು ನಿರ್ಧರಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಈ ಸಂಬಂಧ ಕರಪತ್ರಗಳ ಬಿಡುಗಡೆ ಮಾಡುವ ಜತೆಗೆ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ಈಡೇರಸದೆ ಶೇ.90ರಷ್ಟು ವಚನ ವಂಚನೆ ಮಾಡಿದೆ. ಈ ಪ್ರಣಾಳಿಕೆಯನ್ನು ಮುಂದಿಟ್ಟು, ಸರ್ಕಾರಕ್ಕೆ ಜ‌ನರಿಂದಲೇ ದಿನಕ್ಕೊಂದು ಪ್ರಶ್ನೆ ಕೇಳುತ್ತೇವೆ ಎಂದರು.
ಬಿಜೆಪಿ ಅಂದರೆ‌ ಬಹುತ್ ಜೂಟಾ ಪಾರ್ಟಿ, ಬಿಟ್ರೆಯಲ್‌ ಜನತಾ ಪಾರ್ಟಿ ಹಾಗೂ ಬೇಕೂಫ್ ಬನಾವೋ ಜನತಾ ಪಾರ್ಟಿ ಅಂತಲೂ ಕರೆಯಬಹುದು ಎಂದ ಸುರ್ಜೆವಾಲಾ‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅತ್ಯಂತ ಅಸಮರ್ಥ, ಅಸಹಾಯಕ, ಅದಕ್ಷ‌ ಸಿಎಂ ಎಂದು ಕಿಡಿಕಾರಿದರು.
ವಿಷಯಾಂತರ ಪ್ರಯತ್ನ:ಜನರಿಗೆ‌ ದ್ರೋಹ ಬಗೆದ‌ ಬಿಜೆಪಿ, ವಾಸ್ತವಾಂಶ ಮುಚ್ಚಿ ಹಾಕಲು ಜಾತಿ, ಧರ್ಮದ ವಿಚಾರಗಳನ್ನು ಮುನ್ನೆಲೆಗೆ ತಂದು ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ದೂಷಿಸಿದರು.
ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

ಗೌರಿ ಗಣೇಶ ಹಬ್ಬಕ್ಕೆ ಸೊಬಗು ತಂದ ‘ಗೌರಿ ಹೂವು’! ಇದಕ್ಕುಂಟು ಹಲವು ಹೆಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
