ಮೈಸೂರು‌:ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಗೆಲುವನ್ನು ನನ್ನ ತಂದೆ ಮಾದೇಗೌಡರಿಗೆ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಮಧು. ಜಿ. ಮಾದೇಗೌಡ ಹೇಳಿದ್ದಾರೆ.
ಜೂ.13ರಂದು ನಡೆದಿದ್ದ ಚುನಾಣೆಯ ಮತ ಎಣಿಕೆ ಕಾರ್ಯ ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ನಿನ್ನೆಯಿಂದ(ಬುಧವಾರ) ನಡೆಯುತ್ತಿದೆ. 24 ಗಂಟೆ ಕಳೆದರೂ ಮತ ಎಣಿಕೆ ಮುಕ್ತಾಯಗೊಂಡಿಲ್ಲ. ಯಾವುದೇ ಅಭ್ಯರ್ಥಿ ನಿಗದಿತ ಕೋಟಾ ತಲುಪಿಲ್ಲವಾದರೂ ಕಾಂಗ್ರೆಸ್​ ಅಭ್ಯರ್ಥಿ ಮಧು ಮುನ್ನಡೆ ಸಾಧಿಸಿದ್ದಾರೆ. ಇವರ ಗೆಲುವು ಬಹುತೇಕ ಖಚಿತವಾಗಿದೆ.
ಹಾಗಾಗಿ ಫಲಿತಾಂಶ ಘೋಷಣೆಗೂ ಮುನ್ನವೇ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಮಧು, ಜೆಡಿಎಸ್​ನ ಸಂಪ್ರದಾಯಕ ಮತಗಳು ಕಾಂಗ್ರೆಸ್​ಗೆ ಬಂದಿವೆ. ಜೆಡಿಎಸ್ ಎಂಎಲ್​ಸಿ ಮರಿತಿಬೇಗೌಡರು ನಮ್ಮ ಪರವಾಗಿ ಕೆಲಸ ಮಾಡಿದ್ದು, ನನ್ನ ಗೆಲುವಿಗೆ ಸಹಕಾರಿಯಾಗಿದೆ. ನಮ್ಮ ತಂದೆಯ ಆಶೀರ್ವಾದ, ಕಾಂಗ್ರೆಸ್​ನ ಎಲ್ಲ ಹಿರಿಯ ಮುಖಂಡರ ಸಹಕಾರದಿಂದ ಗೆಲುವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟಿದ್ರು. ಆ ನಂಬಿಕೆಯನ್ನ ಉಳಿಸಿಕೊಳ್ಳುತ್ತೇನೆ. ವ್ಯವಸ್ಥಿತವಾಗಿ ಕೆಲಸ ಮಾಡಿದ್ದು, ಗೆಲುವಿಗೆ ಸಹಕಾರಿಯಾಗಿದೆ ಎಂದರು.
ದಕ್ಷಿಣ ಪದವೀಧರ ಕ್ಷೇತ್ರದ ಮತ‌ ಎಣಿಕೆ ಕಾರ್ಯ ಮುಂದುವರಿದಿದ್ದು, ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಅವರನ್ನು ಎಲಿಮಿನೇಟ್ ಮಾಡಲಾಗಿದೆ.ಎಲಿಮಿನೇಟ್ ಮಾಡಿದ ನಂತರ ಮತಗಳ ವಿವರ ಹೀಗಿದೆ.ಕಾಂಗ್ರೆಸ್- 38169ಬಿಜೆಪಿ-29614ಜೆಡಿಎಸ್- 19630ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ 8555 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇದು ಬೆಳಗ್ಗೆ 9.30ರ ವರೆಗಿನ ಚಿತ್ರಣ.
24 ತಾಸು ಕಳೆದರೂ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮುಗಿದಿಲ್ಲ… ಮಧ್ಯಾಹ್ನ ಫಲಿತಾಂಶ ಹೊರಬೀಳುವ ಸಾಧ್ಯತೆ

ರಾಜಕೀಯ ಇತಿಹಾಸ ನಿರ್ಮಿಸಿದ ಹೊರಟ್ಟಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8ನೇ ಬಾರಿಗೆ ಗೆದ್ದು ಬೀಗಿದ ಬಸವರಾಜ ಹೊರಟ್ಟಿ

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
