ತುಮಕೂರು:ಕಾಂಗ್ರೆಸ್​ನಲ್ಲಿ ಪಕ್ಷದ ಅಧ್ಯಕ್ಷರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರೇ ನಮ್ಮ ಹೈಕಮಾಂಡ್. ಹಾಗಾಗಿ ಅವರ ಹೇಳಿಕೆಯನ್ನು ಯಾರೂ ತಿರಸ್ಕರಿಸಬಾರದು ಎಂದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್​, ನಾನು ಸಿಎಂ ಆಗಬೇಕೆಂಬ ಆಸೆ ನನ್ನ ಅಭಿಮಾನಿಗಳಿಗೂ ಇದೆ. ಎಲ್ಲ ಮುಖಂಡರು, ಅಭಿಮಾನಿಗಳಿಗೂ ಅವರ ನಾಯಕ ಸಿಎಂ ಆಗಬೇಕೆಂಬ ಆಸೆ ಸಹಜ. ಇದಕ್ಕೂ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು, ಜಮೀರ್ ಅಹ್ಮದ್ ಪಕ್ಷದ ಅಧ್ಯಕ್ಷರ ಸೂಚನೆ ಪಾಲಿಸಬೇಕು ಎಂದರು.ಇದನ್ನೂ ಓದಿರಿರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.  ಜಮೀರ್ ವಿರುದ್ಧ ಕ್ರಮಕೈಗೊಳ್ಳುವಂತಹದ್ದು ಏನೂ ಆಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಯಾವುದೇ ಬಣಕ್ಕೂ ಅವಕಾಶವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಭಿನ್ನಾಭಿಪ್ರಾಯಗಳಿದ್ದು ನಮ್ಮ ಪಕ್ಷದ ಉಸ್ತುವಾರಿ ಸರ್ಜೆವಾಲ್ ರಾಜ್ಯಕ್ಕೆ ಆಗಮಿಸಿ ಸರಿಪಡಿಸುತ್ತಾರೆ. ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯುವ ವಾತಾವರಣ ರಾಜ್ಯದೆಲ್ಲೆಡೆ ಕಾಣಿಸುತ್ತಿದೆ ಎಂದರು.
ಪೊಲೀಸರ ಕಿರುಕುಳ ಸಹಿಸಲಾಗ್ತಿಲ್ಲ, ನನಗೆ ದಯಾಮರಣ ಕೊಡಿ: ಮಧುಗಿರಿಮೋದಿ

ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seventeen =
Remember me
