ಬೆಂಗಳೂರು: ಭಾರತ್ ಐಕ್ಯತಾ ಯಾತ್ರೆ ಹಿನ್ನೆಲೆ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್​ ರಮೇಶ್ ಅವರ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಗುರುವಾರ ಅಂಬೇಡ್ಕರ್ ಭವನದಲ್ಲಿ ನಡೆದಿದೆ.
ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಆಕ್ಷೇಪ ಎದುರಾದ ಕಾರಣಕ್ಕೆ ಜೈರಾಮ್ ರಮೇಶ್​ ಮುಜುಗರಕ್ಕೊಳಗಾದರು. ಇಂಗ್ಲಿಷ್​‌ನಲ್ಲಿ ಭಾಷಣ ಮಾಡುತ್ತಿದ್ದ ಜೈರಾಮ್ ರಮೇಶ್‌ಗೆ ಕನ್ನಡದಲ್ಲಿ ಮಾತಾಡುವಂತೆ ಕಾರ್ಯಕರ್ತರು ಕೂಗಿದರು. ಕಾರ್ಯಕರ್ತರನ್ನು ಉಳಿದ ನಾಯಕರು ಸಮಾಧಾನ ಮಾಡಿದರು. ತಾಂತ್ರಿಕ ಅಂಶಗಳನ್ನು ಇಂಗ್ಲಿಷ್​ನಲ್ಲಿ ಹೇಳುತ್ತೇನೆ. ನಂತರ ಕನ್ನಡದಲ್ಲಿ ಭಾಷಣ ಮುಂದುವರಿಸುತ್ತೇನೆಂದು ಜೈರಾಮ್ ರಮೇಶ್​ ಮಾತು ಮುಂದುವರಿಸಿದರು.
ಪಕ್ಷ‌ ಬಿಟ್ಟು ಹೋಗುವವರು ಹೋಗಲಿ. ಕೆಲವರು ಡಿಪಾರ್ಚರ್ ಲಾಂಜ್​ನಲ್ಲಿ ನಿಂತಿದ್ದಾರೆ. ಹೇಳಿಕೆಗಳನ್ನೂ ಕೊಡುತ್ತಿದ್ದಾರೆ. ಹೋಗುವವರು ಹೋಗಲಿ, ಮಾತನ್ನಾಡುವವರು ಮಾತನಾಡಲಿ. ಯಾವುದೇ ಕಾರಣಕ್ಕೂ ಭಾರತ್ ಜೋಡೋ ಯಾತ್ರೆ ನಿಲ್ಲುವುದಿಲ್ಲ ಎನ್ನುತ್ತಾ ಗುಲಾಂ ನಬಿ ಆಜಾದ್​ರ ನಡೆಗೆ ಟಾಂಗ್​ ಕೊಟ್ಟರು.
ಇದು ಮನ್ ಕಿ‌ಬಾತ್ ಅಲ್ಲ. ಇದು ಜನತಾ ಕಿ ಚಿಂತನ್ ಯಾತ್ರೆ. ಭಾರತ್ ಜೊಡೋದಲ್ಲಿ ‌ಯಾವುದೇ ಭಾಷಣ ಇಲ್ಲ. ಇದೊಂದು ಸೈಲೆಂಟ್ ಪಾದಯಾತ್ರೆ. ಪ್ರಧಾನಿಯವರ ವಿರುದ್ಧ ಘೋಷಣೆ ಕೂಗುವುದಲ್ಲ, ಜನರ ಸಮಸ್ಯೆಗಳನ್ನ ಅರಿಯುವ ಕಾರ್ಯಕ್ರಮ. ಪಾದಯಾತ್ರೆ ವೇಳೆ ಆಶಾ ಕಾರ್ಯಕರ್ತೆಯರು, ನರೇಗಾ ಕೂಲಿ ಕಾರ್ಮಿಕರನ್ನ ಭೇಟಿ ಮಾಡಿ ಅವರ ಸಮಸ್ಯೆಗಳನ್ನ ಆಲಿಸುತ್ತೇವೆ ಎಂದು ಜೈರಾಮ್​ ರಮೇಶ್ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಹುಲ್ ಗಾಂಧಿಯವರ ಪಾದಯಾತ್ರೆ 21 ದಿನ ರಾಜ್ಯದಲ್ಲಿ ಹಾದು ಹೋಗಲಿದೆ. ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ಪಾಲ್ಗೊಳ್ಳಬೇಕು. ದೇಶದ ಹಿತದೃಷ್ಟಿಯಿಂದ ಈ ಪಾದಯಾತ್ರೆ ಅನಿವಾರ್ಯ. ಇದು ನಮ್ಮ ಯಾತ್ರೆ, ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಸೆ.8, 9, 10 ರಂದು 224 ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಮಾಡಬೇಕು. ಯಾವ ಕ್ಷೇತ್ರದಿಂದ ಎಷ್ಟೆಷ್ಟು ಜನರನ್ನ ಕಳೆದುಕೊಂಡು ಬರಬೇಕೆಂದು ಅಂದು ತೀರ್ಮಾನ ಮಾಡಬೇಕು. ಯಾರ್ಯಾರು 21 ದಿನ ನಡೆಯುತ್ತೀರಾ ಪಟ್ಟಿ ಕೊಡಬೇಕು. ಇದಕ್ಕಾಗಿ ನೋಂದಣಿ ಮಾಡಬೇಕು. ರಾಹುಲ್ ಗಾಂಧಿಯವರ ಹಿಂದೆ ನೀವು ನಡೆಯಬೇಕು. ಸೆಲ್ಫಿಗೋಸ್ಕರ ಯಾರೂ ಬರಬೇಡಿ, ಇತಿಹಾಸ ಸೃಷ್ಟಿಸಲು ಬರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಪಾಲ್ಗೊಂಡಿದ್ದರು.
ಕಾಂಗ್ರೆಸ್​ಗೆ ಮುದ್ದಹನುಮೇಗೌಡ ರಾಜೀನಾಮೆ! ಡಿಕೆಶಿ-ಸಿದ್ದು ಜತೆ ಮಾತುಕತೆ ನಡೆಸಿ ಮಹ್ವತ್ವದ ನಿರ್ಧಾರ ಪ್ರಕಟಿಸಿದ ಎಸ್​ಪಿಎಂ

ಮಳೆಯಿಂದ ಮಂಡ್ಯದಲ್ಲಿ ಬಯಲಾಯ್ತು ಭಯಾನಕ ರಹಸ್ಯ! ಸ್ನಾನದ ಕೋಣೆಯಲ್ಲಿ ಸುರಂಗ… ಮಾಲೀಕನಿಗೆ ಕಾದಿತ್ತು ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
