ಬೆಂಗಳೂರು:ಸಚಿವ ಈಶ್ವರಪ್ಪರ ರಾಜೀನಾಮೆಗೆ ಒತ್ತಾಯಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಹೂಡಿರುವ ಹಗಲಿರುಳು ಧರಣಿ ಸೋಮವಾರವೂ ಮುಂದುವರಿದಿದ್ದು, ಗದ್ದಲ ಹಾಗೂ ಗೊಂದಲದ ನಡುವೆ ಪ್ರಶ್ನೋತ್ತರ ಕಲಾಪ ನಡೆಯಿತು.
ವಿಧಾನಸಭೆಯಲ್ಲಿ ಕೆಪಿಎಸ್ಸಿ ಸೇರಿದಂತೆ ನಾಲ್ಕು ಮಸೂದೆಗಳು ಯಾವುದೇ ಚರ್ಚೆಯಿಲ್ಲದೇ ಫಟಾಫಟ್ ಅಂಗೀಕಾರದವು. ಇದಕ್ಕೂ ಮುನ್ನ ಪ್ರತಿಪಕ್ಷ ಕಾಂಗ್ರೆಸ್​ನ ಮನವೊಲಿಸಲು ಸ್ಪೀಕರ್ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಗಲಾಟೆಯ ನಡುವೆ ಪ್ರಶ್ನೋತ್ತರ ಕಲಾಪದ ಬಳಿಕ ಸ್ಪೀಕರ್ ಪದೇಪದೆ ವಿನಂತಿಸಿದರೂ ಕಾಂಗ್ರೆಸ್​ನ ಧರಣಿ, ಧಿಕ್ಕಾರ ಮೊಳಗಿತು. ಆರ್​ಎಸ್​ಎಸ್ ವಿರುದ್ಧವೂ ಕಾಂಗ್ರೆಸ್ ಧಿಕ್ಕಾರ ಕೂಗಿದಾಗ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಧರಣಿನಿರತರ ಮನವೊಲಿಕೆ ಕೈಬಿಟ್ಟು ಕಲಾಪವ‌ನ್ನು ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.
ವಿಧಾನ ಪರಿಷತ್​ನಲ್ಲಿ ಕಲಾಪ ಶುರುವಾಗುತ್ತಿದ್ದಂತೆ ಅಗಲಿದ ಚಿತ್ರನಟ ರಾಜೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಕಾಂಗ್ರೆಸ್ ಧರಣಿ ಮುಂದುವರಿಸಿದರೆ, ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಹತ್ಯೆಗೆ ಮುಸ್ಲಿಂ ಗುಂಡಾಗಳು ಕಾರಣವೆಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ತನಿಖೆಗೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದರೆ ಅವರೇ ನೇರ ಅಥವಾ ಪರೋಕ್ಷವಾಗಿ ಕೊಲೆಗಾರರು ಎಂದು ಆರೋಪಿಸಿದಾಗ ಆಡಳಿತ ಬಿಜೆಪಿ ಸದಸ್ಯರು ಪ್ರಬಲವಾಗಿ ಆಕ್ಷೇಪಿಸಿದರು.
ಸಭಾಪತಿ ಮಧ್ಯೆ ಪ್ರವೇಶಿಸಿ ಈ ವಿಷಯದ ಚರ್ಚೆ ಮೊಟಕುಗೊಳಿಸಿ, ಧರಣಿ ಕೈಬಿಡುವಂತೆ ಕಾಂಗ್ರೆಸ್​ಗೆ ಪದೇಪದೆ ಮನವಿ ಮಾಡಿದರು. ಪ್ರತಿಪಕ್ಷ ಹಿಂದೆ ಸರಿಯದಿದ್ದಾಗ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಾಗ ಜೆಡಿಎಸ್ ಪಾಲ್ಗೊಂಡಿತು. ಗದ್ದಲ, ಗೊಂದಲ ಮುಂದುವರಿದ ಕಾರಣ ಸಭಾಪತಿ ಹೊರಟ್ಟಿಯವರು ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.
ಕಲಾಪ ಹಾಳು: ಕಾಂಗ್ರೆಸ್​ ಮತ್ತು ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ

ಸ್ನಾನಕ್ಕೆ ಹೋದ್ರೆ ಇಣುಕಿ ನೋಡ್ತಾನೆ, ಲೈಂಗಿಕತೆ​ಗಾಗಿ ಪೀಡಿಸ್ತಾನೆ… ಸೊಸೆಗೆ ಮಾವ ಕೊಟ್ಟ ಕಾಟ ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + five =
Remember me
